ಯಡಿಯೂರಪ್ಪನವರೇ, ನಿಮ್ಮ ಮುಂದಿನ ಬಚ್ಛಾ ಅಮಿತ್ ಶಾ ಎದುರು ನೀವು ಕೈಕಟ್ಟಿ ನಿಲ್ಲುವುದು ಸರಿಯೇ? : ಕಾಂಗ್ರೆಸ್

BJP

Bengaluru : ಮಾನ್ಯ ಬಿ.ಎಸ್.ಯಡಿಯೂರಪ್ಪ(BS Yedurappa) ಅವರೇ, ಈ ಭಾಷೆ ನಿಮ್ಮ ಘನತೆಗೆ ತಕ್ಕದಲ್ಲ, ಪ್ರಧಾನಿ ಮೋದಿ ಬಿಜೆಪಿಗೆ(BJP) ಪ್ರಶ್ನಾತೀತರು, ಟೀಕಾತೀತರು ಇರಬಹುದು, ಆದರೆ ಭಾರತ ಪ್ರಜಾಪ್ರಭುತ್ವದ(Democracy) ದೇಶ ಎಂಬುದನ್ನು (Congress Slams BS Yedurappa)ಮರೆಯದಿರಿ ಎಂದು ರಾಜ್ಯ ಕಾಂಗ್ರೆಸ್(State Congress) ಹೇಳಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರೇ, ಈ ಭಾಷೆ ನಿಮ್ಮ ಘನತೆಗೆ ತಕ್ಕದಲ್ಲ. ಪ್ರಧಾನಿ ಮೋದಿ ಬಿಜೆಪಿಗೆ ಪ್ರಶ್ನಾತೀತರು(Congress Slams BS Yedurappa), ಟೀಕಾತೀತರು ಇರಬಹುದು, ಆದರೆ ಭಾರತ ಪ್ರಜಾಪ್ರಭುತ್ವದ ದೇಶ ಎಂಬುದನ್ನು ಮರೆಯದಿರಿ.

ಅಂದಹಾಗೆ ನಿಮ್ಮ ಮುಂದಿನ ಬಚ್ಛಾ ಅಮಿತ್ ಶಾ(Amit Shah) ಎದುರು ನೀವು ಕೈಕಟ್ಟಿ ನಿಲ್ಲುವುದು ಸರಿಯೇ? ಮೋದಿಯೂ ನಿಮ್ಮ ಮುಂದೆ ಬಚ್ಛಾ ಅಲ್ಲವೇ? ಎಂದು ಪ್ರಶ್ನಿಸಿದೆ. ಇನ್ನು ಯುವ ಸಮೂಹದ ನಂಬಿಕೆಯ ಜೊತೆ ನಿಲ್ಲುವವನೇ ಭಾರತದ ಭವಿಷ್ಯದ ಭರವಸೆ.

ಇದನ್ನೂ ಓದಿ : https://vijayatimes.com/central-government-for-kashmir/

ಸತ್ಯ, ನೇರ ನುಡಿ ಮತ್ತು ಬದ್ಧತೆಯ ನಾಯಕ ರಾಹುಲ್ ಗಾಂಧಿಯವರ(Rahul Gandhi) ಯಾತ್ರೆ ಯುವಕರಿಗೆ ಒಂದು ನಂಬಿಕೆಯ ಯಾತ್ರೆಯಾಗಿದೆ.

ಉದ್ಯಮಿಗಳ ಜೇಬು ತುಂಬಿಸುವ ಸರ್ಕಾರ ನಮಗೆ ಬೇಡ. ಜನಸಾಮಾನ್ಯರ ದುಡಿಮೆಯ ಶ್ರಮವನ್ನು ಗೌರವಿಸುವ ಮತ್ತು ಅವರ ಬದುಕಿಗೆ ನೆರವಾಗುವ ಸರ್ಕಾರ ನಮಗೆ ಬೇಕು.

https://youtu.be/B17BlX9yaF8

ಶ್ರೀಮಂತರ ಸೇವಕ ಪ್ರಧಾನಿ ಮೋದಿ ಒಂದು ಕಡೆ, ಶ್ರಮಿಕರ ಪರವಾಗಿ ದುಡಿಯುವ ಬದ್ಧತೆ ಇನ್ನೊಂದು ಕಡೆ, ನಮ್ಮ ನಾಯಕ ನಮ್ಮ ಹೆಮ್ಮೆ.

ಶಿಕ್ಷಣ, ಸಂವಾದದಂತಹ ಪ್ರಜಾಪ್ರಭುತ್ವದ ಗುಣವನ್ನು ಅರಿತಿರುವ ರಾಹುಲ್ ಗಾಂಧಿ ಅವರಿಗೆ ನಾಡಿನ ವಿದ್ಯಾರ್ಥಿಗಳು, ಯುವಕರು ಮತ್ತು ಎಲ್ಲ ವರ್ಗದವರನ್ನೂ ಕೂಡಾ ಪ್ರತಿನಿಧಿಸುವ ಗುಣ ಇರುವ ನಾಯಕ ನಮ್ಮ ರಾಹುಲ್ ಗಾಂಧಿ ಎಂದು ಕಾಂಗ್ರೆಸ್ ಹೇಳಿದೆ.

ಇದಕ್ಕೂ ಮುನ್ನ ಬಿ.ಎಸ್.ಯಡಿಯೂರಪ್ಪನವರು “ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರ ಎದುರು ಇನ್ನು ಬಚ್ಚಾ, ಅವರ ಕಾಲಿನ ಧೂಳಿಗೂ ಕಾಂಗ್ರೆಸ್ಸಿನವರು ಸಮರಲ್ಲ” ಎಂದು ಟೀಕಿಸಿದ್ದರು.

Exit mobile version