ಪ್ಯಾಲೆಸ್ಟೈನ್ ಬೆಂಬಲಿಸಿ ನಿರ್ಣಯ ಅಂಗೀಕರಿಸಿದ ಕಾಂಗ್ರೆಸ್

New Delhi: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇಸ್ರೇಲ್ (Congress Support for Palestine)– ಹಮಾಸ್ ಉಗ್ರರ ನಡುವಿನ ಭೀಕರ ಯುದ್ದ ಇದೀಗ ಭಾರತದಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ.

ಭಾರತ ಸರ್ಕಾರ ಅಧಿಕೃತವಾಗಿ ಇಸ್ರೇಲ್ಗೆ ಬೆಂಬಲ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉಗ್ರರ ದಾಳಿಗೆ ಒಳಗಾಗಿರುವ ಇಸ್ರೇಲ್ ಪರವಾಗಿ ಭಾರತ ನಿಲ್ಲಲಿದೆ

ಎಂದು ಘೋಷಿಸಿದ್ದಾರೆ. ಈ ಮಧ್ಯೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಪ್ಯಾಲೆಸ್ಟೈನ್ ಹಕ್ಕುಗಳನ್ನು ಬೆಂಬಲಿಸಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ನಿರ್ಣಯ ಅಂಗೀಕರಿಸಿದೆ.

ದೆಹಲಿಯಲ್ಲಿ (Delhi) ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ಯಾಲೆಸ್ಟೈನ್ ಜನರ ಹಕ್ಕುಗಳನ್ನು ಬೆಂಬಲಿಸಿ, ಕದನ ವಿರಾಮಕ್ಕೆ ಕರೆ ನೀಡಲಾಗಿದೆ. ಸಂಘರ್ಷಕ್ಕೆ ಕಾರಣವಾದ

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ (Palestine) ನಡುವಿನ ಎಲ್ಲಾ ಸಮಸ್ಯೆಗಳು ಸೇರಿದಂತೆ ಎಲ್ಲಾ ಬಾಕಿ ಉಳಿದಿರುವ ವಿಷಯಗಳ ಬಗ್ಗೆ ಮಾತುಕತೆ ಪ್ರಾರಂಭಿಸಬೇಕು. ಎರಡೂ ದೇಶಗಳ ನಡುವಿನ

ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಬೇಕು ಎಂದು ಕಾಂಗ್ರೆಸ್ (Congress Support for Palestine) ನಿರ್ಣಯ ಕೈಗೊಂಡಿದೆ.

ಇನ್ನು ಕಳೆದ ಭಾನುವಾರ ಪ್ಯಾಲೆಸ್ಟೈನ್ ಉಗ್ರಗಾಮಿ ಸಂಘಟನೆ ಹಮಾಸ್, ಇಸ್ರೇಲ್ (Hamas) ಮೇಲೆ ಭೀಕರ ರಾಕೆಟ್ ದಾಳಿ ನಡೆಸಿತ್ತು. ಹಮಾಸ್ ಉಗ್ರರು ಗಡಿದಾಟಿಕೊಂಡು, ಇಸ್ರೇಲ್ನ

ನಗರಗಳಿಗೆ ನುಗ್ಗಿ ಸಾಮಾನ್ಯ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸುಮಾರು 1100ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದಾರ ಎನ್ನಲಾಗಿದೆ.

ಇದಕ್ಕೆ ಪ್ರತಿಯಾಗಿ ಯುದ್ದ ಘೋಷಣೆ ಮಾಡಿರುವ ಇಸ್ರೇಲ್ ಹಮಾಸ್ ಉಗ್ರ ನೆಲೆಯಾಗಿರುವ ಗಾಜಾಪಟ್ಟಿ ಮೇಲೆ ಭೀಕರ ವಾಯುದಾಳಿ ನಡೆಸಿದ್ದಾರೆ. ಗಾಜಾಪಟ್ಟಿಯಲ್ಲಿರುವ ಅನೇಕ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವಾಯುಪಡೆಗಳು ನಿರಂತರವಾಗಿ ದಾಳಿ ನಡೆಸುತ್ತಿವೆ.

ಈ ಮಧ್ಯೆ ಭಾರತ ಸರ್ಕಾರ ಅಧಿಕೃತವಾಗಿ ಇಸ್ರೇಲ್ಗೆ ಬೆಂಬಲ ಘೋಷಿಸಿದ್ದರೆ, ಕಾಂಗ್ರೆಸ್ ಪ್ಯಾಲೆಸ್ಟೈನ್ ಪರವಾಗಿ ನಿರ್ಣಯ ಅಂಗೀಕರಿಸಿರುವುದು ಸಾಮಾಜಿಕ ಮಾದ್ಯಮದಲ್ಲಿ ಭಾರೀ ಚರ್ಚೆಗೆ

ಕಾರಣವಾಗಿದೆ. ಸಾಮಾಜಿಕ ಮಾದ್ಯಮದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿವೆ. ಇನ್ನು ಇಸ್ರೇಲ್- ಪ್ಯಾಲೆಸ್ಟೈನ್ ನಡುವಿನ ಸಂಘರ್ಷ ಮತೀಯ ಯುದ್ದಕ್ಕೂ ಕಾರಣವಾಗುವ ಸಾಧ್ಯತೆಗಳಿದ್ದು,

ಅರಬ್ ದೇಶಗಳು ಒಗ್ಗೂಡಿದರೆ, ಇನ್ನೊಂದೆಡೆ ಅಮೇರಿಕಾ ನೇತೃತ್ವದಲ್ಲಿ ಯೂರೋಪಿಯನ್ (European) ದೇಶಗಳು ಒಗ್ಗೂಡುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಅಮೇರಿಕಾ ಪೂರ್ವ

ಮೆಡಟೇರಿಯನ್ ಸಮುದ್ರದಲ್ಲಿ ತನ್ನ ಯುದ್ದನೌಕೆಗಳನ್ನು ನಿಯೋಜಿಸಿದೆ.

ಇದನ್ನು ಓದಿ: ಹೋಟೆಲ್ ಆರಂಭಿಸಲು ರಾಜ್ಯ ಸರ್ಕಾರದಿಂದ ಹೋಟೆಲ್ ಯೋಜನೆ ಅಡಿಯಲ್ಲಿ ಸಹಾಯಧನ ವಿತರಣೆ: ಆಸಕ್ತರಿಂದ ಅರ್ಜಿ ಆಹ್ವಾನ

Exit mobile version