ಸುಳ್ಳು ಸುದ್ದಿಯಿಂದ ನನ್ನನ್ನು ಮುಕ್ತಗೊಳಿಸಿ : ಮಾಜಿ ಸಂಸದೆ ರಮ್ಯಾ ವಿನಂತಿ!

ACTRESS

ಕಾಂಗ್ರೆಸ್ ರಾಜ್ಯಾಧ್ಯಕ್ಷ(Congress President) ಡಿ.ಕೆ ಶಿವಕುಮಾರ್(DK Shivkumar) ಮತ್ತು ಮಾಜಿ ಕಾಂಗ್ರೆಸ್ ಸಂಸದೆ(Congress MLA) ರಮ್ಯಾ(Ramya) ನಡುವೆ ಟ್ವೀಟ್‌ವಾರ್ ಮುಂದುವರೆದಿದೆ.

ನಿನ್ನೆ ಎಂ.ಬಿ ಪಾಟೀಲರ ಪರವಹಿಸಿ, “ಪಾಟೀಲರು ಕಾಂಗ್ರೆಸ್ ಪಕ್ಷದ ಕಟ್ಟಾಳು. ಅವರ ಕುರಿತು ಡಿಕೆಶಿ ನೀಡಿದ ಹೇಳಿಕೆ ನನಗೆ ಅಚ್ಚರಿ ಉಂಟು ಮಾಡಿದೆ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಲು ಸಾಧ್ಯವಿಲ್ಲವೇ.?” ಎಂದು ಡಿಕೆಶಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ರಮ್ಯಾ ಅವರ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಡಿ.ಕೆ ಶಿವಕುಮಾರ “ಯರ‍್ಯಾರಿಗೆ ಏನೇನು ನೋವಿರುತ್ತೋ? ಹಿಂದೆ ನಡೆದ ಎಲ್ಲವನ್ನೂ ಮರೆತು ಬೀಡುತ್ತಾರೆ” ಎಂದು ವ್ಯಂಗ್ಯವಾಡಿದ್ದರು. ಡಿಕೆಶಿ ಅವರ ಈ ಟ್ವೀಟ್‌ಗೆ ಇದೀಗ ಮತ್ತೆ ತಿರುಗೇಟು ನೀಡಿರುವ ರಮ್ಯಾ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.


“ನನಗೆ ರಾಜಕೀಯದಲ್ಲಿ ಬೆನ್ನಲುಬಾಗಿ ನಿಂತಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ನನಗೆ ಅವಕಾಶ ನೀಡಲಾಗಿದೆ ಅಂತ ಯಾರದ್ರೂ ಹೇಳಿದ್ರೆ ಅವರು ಅವಕಾಶವಾದಿಗಳು”. “ವೇಣುಗೋಪಾಲ್ ಜೀ, ರಾಜ್ಯಕ್ಕೆ ಭೇಟಿ ನೀಡಿದಾಗ ಈ ಸುಳ್ಳು ಸುದ್ದಿಯಿಂದ ನನ್ನನ್ನು ಮುಕ್ತಗೊಳಿಸಿ. ಇದು ನೀವು ನನಗೆ ಮಾಡಬಹುದಾದ ಕನಿಷ್ಠ ಸಹಾಯ. ಇಲ್ಲದೇ ಹೋದರೆ ನಾನು ನನ್ನ ಜೀವನದುದ್ದಕ್ಕೂ ಈ ನಿಂದನೆಯೊಂದಿಗೆ ಇರಬೇಕಾಗುತ್ತೆ”, “ನಾನು ಓಡಿ ಹೋಗಿದ್ದೇನೆ ಅಂತಾ ಸುಳ್ಳು ಸುದ್ದಿ ಹರಿಡಿಸಿದ್ರು.

ಕಾಂಗ್ರೆಸ್‌ನಿಂದ ೮ ಕೋಟಿ ಪಡೆದಿದ್ದೇನೆ ಅಂತಾ ಸುಳ್ಳುಸುದ್ದಿ ಹರಿಬಿಡಲಾಗಿದೆ. ನನ್ನ ಗೌರವಕ್ಕೆ ದಕ್ಕೆ ತರುವ ಕೆಲಸ ಮಾಡಲಾಯ್ತು. ನಾನು ಏಲ್ಲಿಯೂ ಓಡಿ ಹೋಗಿಲ್ಲ. ನನ್ನ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದೆ. ನಾನು ಮೌನವಾಗಿದ್ದೇ ತಪ್ಪಾಯ್ತು” ಎಂದು ಟ್ವೀಟ್ ಮಾಡಿದ್ದಾರೆ.

Exit mobile version