ಆರ್‍ಎಸ್‍ಎಸ್ ಈ ದೇಶದ ನಪುಂಸಕ ಸಂಘಟನೆ : ಕಾಂಗ್ರೆಸ್!

rss

ರಾಜ್ಯ ಕಾಂಗ್ರೆಸ್(State Congress) ಆರ್‍ಎಸ್‍ಎಸ್(RSS) ಸಂಘಟನೆಯನ್ನು ಟೀಕಿಸುವ ಭರದಲ್ಲಿ ಕೆಟ್ಟ ಪದ ಬಳಕೆ ಮಾಡಿದೆ.

ರಾಜಕೀಯ(Politics) ಟೀಕೆಯ ಪರಿಮಿತಿಯನ್ನು ಕಾಂಗ್ರೆಸ್ ಮೀರಿದೆ ಎನ್ನಬಹುದು. ಈ ಕುರಿತು ಸರಣಿ ಟ್ವೀಟ್‍ಗಳನ್ನು ರಾಜ್ಯ ಕಾಂಗ್ರೆಸ್ ಮಾಡಿದೆ. ಅದರ ವಿವರ ಇಲ್ಲಿದೆ ನೋಡಿ. ಈ ದೇಶದ ರಾಷ್ಟ್ರಧ್ವಜಕ್ಕೆ ಬೆಲೆಕೊಡದೆ ಅವಮಾನಿಸುವ, ಈ ದೇಶ ಕಂಡ ಮಹಾ ದಾರ್ಶನಿಕ ಗಾಂಧಿ ಹತ್ಯೆಯನ್ನು ಸಂಭ್ರಮಿಸುವ ಆರ್‍ಎಸ್‍ಎಸ್ ಈ ದೇಶದ ನಪುಂಸಕ ಸಂಘಟನೆಯೇ ಹೊರತಾಗಿ ಯಾವುದೇ ಕಾರಣಕ್ಕೂ ದೇಶಪ್ರೇಮಿ ಸಂಘಟನೆಯಾಗಲಾರದು.


ಹೆಜ್ಜೆ ಹೆಜ್ಜೆಗೂ ಈ ದೇಶದ ಸ್ವಾತಂತ್ರ್ಯ ಹೋರಾಟವನ್ನು ಹೀಗಳೆಯುತ್ತಾ ಬ್ರಿಟೀಷರ ಸೈನ್ಯ ಸೇರಲು ಆರ್‍ಎಸ್‍ಎಸ್ ತುದಿಗಾಲಲ್ಲಿ ನಿಂತಿರಲಿಲ್ಲವೇ? ಈ ದೇಶದ ಸ್ವಾತಂತ್ರ್ಯಕ್ಕೆ ನಯಾಪೈಸೆ ಕೊಡುಗೆ ಕೊಡದ, ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟೀಷರಿಗೆ ಹಿಡಿದುಕೊಡುತ್ತಿದ್ದ RSS ಸಂಘಟನೆ ದೇಶದ್ರೋಹಿ ಸಂಘಟನೆಯಲ್ಲದೆ ಮತ್ತಿನೇನು? ಈ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಿಟ್ಟ ಬಾಪೂಜೀ ಮಹಾತ್ಮ ಗಾಂಧಿಯವರು(Mahathma Gandhi) ಸತ್ತ ದಿನ ಸಿಹಿ ಹಂಚಿದ ಗುಳ್ಳೆನರಿ ಆರ್‍ಎಸ್‍ಎಸ್ ಹೇಗೆ ತಾನೇ ದೇಶಪ್ರೇಮಿ ಸಂಘಟನೆಯಾಗಬಲ್ಲದು?

ಆರ್‍ಎಸ್‍ಎಸ್ ಮುಖವಾಣಿ ಆರ್ಗನೈಸರ್ 1970 ಜನವರಿ 11 ರಂದು ತನ್ನ ಸಂಪಾದಕೀಯದಲ್ಲಿ ಗಾಂಧಿಯವರ ಬಗ್ಗೆ ವಿಷಪೂರಿತ ಲೇಖನ ಪ್ರಕಟಿಸಿರಲಿಲ್ಲವೇ? ನಾವು ಮೂರು ಜನ ಸಹೋದರರು ಅಂದರೆ ನಾಥೂರಾಮ, ನಾನು, ದತ್ತಾತ್ರೇಯ. ನಾವು ಮನೆಯಲ್ಲಿ ಬೆಳೆದೆವು ಎಂಬುದಕ್ಕಿಂತ ಆರ್‍ಎಸ್‍ಎಸ್ ಸಂಘಟನೆಯಲ್ಲೇ ಬೆಳೆದವು ಎಂದು ಹೇಳಬಹುದು. ಇದು ಗೋಪಾಲ ಗೋಡ್ಸೆಯ ಮಾತುಗಳು.
ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದಂಥಹ ಈ ದೇಶದ ಮೊದಲ ಭಯೋತ್ಪಾದಕ ಗೋಡ್ಸೆ ತಯಾರಾಗಿದ್ದು ಸಹ ಇದೇ ಆರ್‍ಎಸ್‍ಎಸ್ ಗರಡಿಯಲ್ಲೇ.

ಈ ಬಗ್ಗೆ ನಾಥೂರಾಮ ಗೋಡ್ಸೆಯ ಸಹೋದರ ಗೋಪಾಲ ಗೋಡ್ಸೆ ಜನವರಿ 28 1994ರಲ್ಲಿ ಫ್ರಂಟ್ ಲೈನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಖಚಿತಪಡಿಸಿದ್ದಾನೆ. ಎಂದು ಟೀಕಿಸಿದೆ.

Exit mobile version