Bengaluru : ಆರೋಗ್ಯ ಕವಚ ಯೋಜನೆಯಡಿ (Health Insurance Scheme) ಕಾರ್ಯನಿರ್ವಹಿಸುತ್ತಿರುವ ಆಂಬ್ಯುಲೆನ್ಸ್ (No service from 108 ambulance) ಚಾಲಕರಿಗೆ ಕಳೆದ ಮೂರು
ತಿಂಗಳಿಂದ ವೇತನ ನೀಡಿಲ್ಲದ ಕಾರಣ, ಸೋಮವಾರ ರಾತ್ರಿಯಿಂದ ತಮ್ಮ ಸೇವೆಯನ್ನು ಸ್ಥಗಿತಗೊಳಿಸಲು ಆಂಬ್ಯುಲೆನ್ಸ್ ಚಾಲಕರು (Ambulance driver) ಮುಂದಾಗಿದ್ದು, ಇದರಿಂದ ರಾಜ್ಯಾದ್ಯಂತ
ಆಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಕಳೆದ ಡಿಸೆಂಬರ್ ಹಾಗೂ ಜನವರಿಯಲ್ಲಿ ಅರ್ಧ ವೇತನ ಪಾವತಿಸಲಾಗಿದ್ದು, ಫೆಬ್ರುವರಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ವೇತನವನ್ನು
ಪಾವತಿಸಿಲ್ಲ ಎನ್ನಲಾಗಿದ್ದು, ಇದರಿಂದ ಜೀವನ ನಿರ್ವಹಣೆ ಕಷ್ವವಾಗಿರುವ ಹಿನ್ನಲೆ ಆಂಬ್ಯುಲೆನ್ಸ್ ಚಾಲಕರು ಮುಷ್ಕರ ನಡೆಸಲು ಮುಂದಾಗಿದ್ದಾರೆ. ಇನ್ನು ಪಂಚ ಗ್ಯಾರಂಟಿಗಳ ಕಾರಣ ರಾಜ್ಯ ಕಾಂಗ್ರೆಸ್
ಸರ್ಕಾರ (Congress Govt) ವೇತನ ಪಾವತಿ, ಬಂಡವಾಳ ವೆಚ್ಚ, ವಿವಿಧ ಯೋಜನೆಗಳಿಗೆ ಆರ್ಥಿಕ ಸಹಾಯಧನ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಮಧ್ಯೆ ಬರ ನಿರ್ವಹಣೆಯ ಸವಾಲು
ಸರ್ಕಾರದ ಮುಂದಿದೆ. ಈ ಎಲ್ಲ ಕಾರಣಗಳಿಂದ ರಾಜ್ಯ ಸರ್ಕಾರ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅನೇಕ ಸರ್ಕಾರಿ ನೌಕರರಿಗೆ ವೇತನ (Salary of Government Employees) ಪಾವತಿಯಲ್ಲೂ
ವ್ಯತ್ಯಯ ಉಂಟಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಇನ್ನು ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ (R AShok) ಅವರು, ಆಂಬ್ಯುಲೆನ್ಸ್ ಚಾಲಕರಿಗೆ ಕಳೆದ 3
ತಿಂಗಳಿನಿಂದ ಸಂಬಳ ಕೊಡದೆ ಬಾಕಿ ಉಳಿಸಿಕೊಂಡಿದ್ದೀರಲ್ಲ ಸಿಎಂ ಸಿದ್ದರಾಮಯ್ಯನವರೇ, (Siddaramaiah)
ನಿಮ್ಮ ಸರ್ಕಾರ ಇನ್ನೆಷ್ಟು ದಿವಾಳಿ ಆಗಿರಬೇಡ. ವೇತನಕ್ಕಾಗಿ ಈಗ 2,500ಕ್ಕೂ ಹೆಚ್ಚು ಆಂಬುಲೆನ್ಸ್ ಚಾಲಕರು ಮುಷ್ಕರ
ಕೈಗೊಳ್ಳುತ್ತಿದ್ದಾರೆ. ಇದರಿಂದ ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಅದಕ್ಕೆ ಯಾರು ಹೊಣೆ ಸಚಿವ
ದಿನೇಶ್ ಗುಂಡೂರಾವ್ ಅವರೇ? ಸರ್ಕಾರ ಈ ಕೂಡಲೇ ಆಂಬ್ಯುಲೆನ್ಸ್ ಚಾಲಕರ ಬಾಕಿ ವೇತನ ಬಿಡುಗಡೆ ಮಾಡಿ
ಮುಷ್ಕರ (Protest) ಕೈಬಿಡುವಂತೆ ಮನವಿ ಮಾಡಬೇಕು.
ಇನ್ನು ಮುಂದೆ ಪ್ರತಿ ತಿಂಗಳು (No service from 108 ambulance) ಸಮಯಕ್ಕೆ ಸರಿಯಾಗಿ ವೇತನ ಪಾವತಿ
ಮಾಡಿ ಈ ಪರಿಸ್ಥಿತಿ ಮರುಕಳಿಸದಂತೆ ಕ್ರಮ ವಹಿಸಬೇಕು. ಜೀವವನ್ನೇ ಪಣಕ್ಕಿಟ್ಟು ರೋಗಿಗಳ ಪ್ರಾಣ ಉಳಿಸುವ
ಆಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿಂದ ಸಂಬಳವನ್ನೇ ಕೊಡದೆ ಕಾಂಗ್ರೆಸ್ ಸರ್ಕಾರ ಬೀದಿಗೆ
ತಂದಿದೆ. ಸಿದ್ದರಾಮಯ್ಯನವರು ಸರ್ಕಾರದ ವಿರುದ್ಧ ಸಿಬ್ಬಂದಿಗಳು ಮೇ 6 ರಿಂದ ಕೆಲಸ ಬಿಟ್ಟು ಸಂಬಳಕ್ಕಾಗಿ
ಪ್ರತಿಭಟನೆಗೆ ಇಳಿದಿದ್ದಾರೆ. ಖಜಾನೆ ಖಾಲಿ ಮಾಡಿ ಕೂತಿರುವ #ATMSarkara ಕೂಡಲೇ 108 ಆಂಬ್ಯುಲೆನ್ಸ್
ಸಿಬ್ಬಂದಿಗಳ ಸಂಬಳವನ್ನು ನೀಡಿ ಕೆಲಸಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನು ಓದಿ: ಹಾಸನದಿಂದ ಪ್ರಜ್ವಲ್ ರೇವಣ್ಣ ಗೆದ್ದರೆ ಅಮಾನತು ಮಾಡ್ತೀವಿ : ಆರ್.ಅಶೋಕ್