ರಾಜ್ಯದಲ್ಲಿ ಇಂದು ನಡೆಯುತ್ತಿರುವ 2ನೇ ಹಂತದ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ (Kar 2nd phase of voting) ವ್ಯಕ್ತವಾಗಿದ್ದು, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಭರ್ಜರಿ
ಮತದಾನ ನಡೆದಿದೆ.
11 ಗಂಟೆವರೆಗೆ ಎಲ್ಲೆಲ್ಲಿ ಎಷ್ಟು ಮತದಾನ?
ಬಾಗಲಕೋಟೆ (Bagalkot) 23.80%
ಬೆಳಗಾವಿ (Belgaum) 23.91%
ಬಳ್ಳಾರಿ (Bellary) 26.45%
ಬೀದರ್ (Bidar) 22.33%
ವಿಜಯಪುರ (Vijayapura) 23.91%
ಚಿಕ್ಕೋಡಿ (Chikkodi) 27.23%
ದಾವಣಗೆರೆ (Davangere) 23.73%
ಧಾರವಾಡ (Dharwad) 24%
ಗುಲ್ಬರ್ಗಾ (Gulbarga) 22.64%
ಹಾವೇರಿ (Haveri) 24.24%
ಕೊಪ್ಪಳ (Koppala) 24.62%
ರಾಯಚೂರು (Raichur) 22.05%
ಶಿವಮೊಗ್ಗ (Shimoga) 27.22%
ಉತ್ತರ ಕನ್ನಡ (Uttara Kannada) 27.65%
ಇನ್ನು ಬೆಳಗ್ಗೆ 11 ಗಂಟೆಯ ವೇಳೆಗೆ 24.48% ಮತದಾನ ನಡೆದಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 27.65% ಮತದಾನವಾಗಿದ್ದರೆ, ಶಿವಮೊಗ್ಗ (Kar 2nd phase of voting) ಲೋಕಸಭಾ
ಕ್ಷೇತ್ರದಲ್ಲಿ 27.22% ಮತದಾನ ದಾಖಲಾಗಿದೆ. ರಾಯಚೂರು 22.05%, ಬೀದರ್ನಲ್ಲಿ 22.33% ಕಡಿಮೆ ಮತದಾನ ದಾಖಲಾಗಿದೆ. ಇನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಈ ಎಲ್ಲಾ 14 ಲೋಕಸಭಾ
ಕ್ಷೇತ್ರಗಳನ್ನು ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಕಾರಣ ಉತ್ತರ ಕರ್ನಾಟಕದ ಈ 14 ಕ್ಷೇತ್ರಗಳಲ್ಲಿ
ಬಿಜೆಪಿ-ಕಾಂಗ್ರೆಸ್ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿದೆ.
ಇದನ್ನು ಓದಿ: ಭಾರೀ ಮಳೆ ಮತ್ತು ಪ್ರವಾಹದಿಂದ ತತ್ತರಿಸಿದ ಬ್ರೆಜಿಲ್:75ಕ್ಕೆ ಏರಿಕೆಯಾದ ಮೃತರ ಸಂಖ್ಯೆ.