ಬೆಂಗಳೂರಿನಲ್ಲಿವೆ ಬರೋಬ್ಬರಿ 221 ಮೈಕ್ರೋ ಕಂಟೈನ್‌ಮೆಂಟ್ ವಲಯಗಳು

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ, ನಗರದಲ್ಲಿ ಪ್ರಸ್ತುತ 221 ಮೈಕ್ರೋ ಕಂಟೈನ್‌ಮೆಂಟ್ ವಲಯಗಳನ್ನು ರಚಿಸಲಾಗಿದ್ದು ಅದರಲ್ಲಿ, 13 ಓಮಿಕ್ರಾನ್‌ಗೆ ಸಂಬಂಧಿಸಿವೆ. ಡಿಸೆಂಬರ್ ಕೊನೆಯ ವಾರದಲ್ಲಿ 90ರಷ್ಟಿದ್ದ ಕಂಟೈನ್‌ಮೆಂಟ್‌ ವಲಯಗಳ ಸಂಖ್ಯೆ ಕೇಲವ 10 ದಿನಗಳ ಅಂತರದಲ್ಲಿ ಇದು 221ಕ್ಕೆ ಏರಿಕೆಯಾಗಿದೆ. ಮಹದೇವಪುರವು ಅತಿ ಹೆಚ್ಚು ಸೂಕ್ಷ್ಮ ನಿಯಂತ್ರಣ ವಲಯಗಳನ್ನು ಹೊಂದಿದೆ 82 ಕಂಟೈನ್‌ಮೆಮಟ್‌ ಜೋನ್‌ಗಳನ್ನು ಹೊಂದಿದೆ.

221 ಮೈಕ್ರೋ ಕಂಟೈನ್‌ಮೆಂಟ್ ವಲಯಗಳಲ್ಲಿ 100ಕ್ಕೂ ಹೆಚ್ಚು ಮೈಕ್ರೋ ಕಂಟೈನ್‌ಮೆಂಟ್ ವಲಯಗಳು ಅಪಾರ್ಟ್‌ಮೆಂಟ್‌ಗಳಲ್ಲಿವೆ. ಮಹದೇವಪುರ ವಲಯದಲ್ಲಿ ಅತಿ ಹೆಚ್ಚು, ಬೊಮ್ಮನಹಳ್ಳಿಯಲ್ಲಿ 63, ಪಶ್ಚಿಮದಲ್ಲಿ 21, ಯಲಹಂಕದಲ್ಲಿ 27, ದಕ್ಷಿಣದಲ್ಲಿ 12, ಪೂರ್ವದಲ್ಲಿ 12, ದಾಸರಹಳ್ಳಿಯಲ್ಲಿ 4 ಮತ್ತು ಆರ್‌ಆರ್‌ನಗರದಲ್ಲಿ – ಮಾತ್ರ 0 ಕಂಟೈನ್‌ಮೆಂಟ್‌ ವಲಯ ಎಂದು ಮಾಹಿತಿ ಲಭ್ಯವಾಗಿದೆ.  ಪಾಸಿಟಿವಿಟಿ ದರವು ದರವು 0.54 ಶೇಕಡಾದಿಂದ 7.5 ಶೇಕಡಾಕ್ಕೆ ಏರಿದೆ ಮತ್ತು ಕಳೆದ 3 ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗುವುದು ಹೆಚ್ಚಾಗಿದೆ. ಡಿಸೆಂಬರ್ 2 ರಂದು, ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಕೇವಲ ಎಂಟು ಆಗಿತ್ತು, ಇದು ಡಿಸೆಂಬರ್ 3 ರಂದು 22 ಕ್ಕೆ ಏರಿತು ಮತ್ತು ಡಿಸೆಂಬರ್ 5 ರಂದು 39 ಕ್ಕೆ ಏರಿತು. ಹಿರಿಯ ಸರ್ಕಾರಿ ಆರೋಗ್ಯ ಅಧಿಕಾರಿಯೊಬ್ಬರು ಪ್ರಸ್ತುತ, ಕೇವಲ 13 ಮೈಕ್ರೋ ಕಂಟೈನ್‌ಮೆಂಟ್ ವಲಯಗಳು ಓಮಿಕ್ರಾನ್‌ಗೆ ಸಂಬಂಧಿಸಿವೆ ಮತ್ತು ಎಲ್ಲಾ ಪಾಸಿಟಿವ್‌ ರೋಗಿಗಳಿಗೆ ಸಂಬಂಧಿಸಿವೆ ಎಂದು ಹೇಳಿದರು.

Exit mobile version