ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂಬ ರಿಷಬ್ ಶೆಟ್ಟಿಯವರ ಹೇಳಿಕೆ ನಿಜವಲ್ಲ : ನಟ ಚೇತನ್

Bengaluru : ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು(Rishab Shetty) ಹೇಳಿದ್ದಾರೆ,

ಆದರೆ ಇದು ನಿಜವಲ್ಲ ಎಂದು ನಟಮತ್ತು ಸಾಮಾಜಿಕ ಹೋರಾಟಗಾರ(Social Activist) ಚೇತನ್‌ ಅಹಿಂಸಾ(Controversial Statement For Kantara) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್‌(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ನಮ್ಮ ಕನ್ನಡದ ಚಲನಚಿತ್ರ ‘ಕಾಂತಾರ’ವು(Controversial Statement For Kantara) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ.

ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ.

ಇದು ನಿಜವಲ್ಲ ಎಂದು ಕಾಂತಾರ ಚಿತ್ರದ ನಿರ್ದೇಶಕ ರಿಷಬ್‌ ಶೆಟ್ಟಿ ನೀಡಿರುವ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ ಆದರೆ ಇದು ನಿಜವಲ್ಲ.

ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು.

ಇದನ್ನೂ ಓದಿ : https://vijayatimes.com/pawan-kalyan-slams-trollers/

ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ಹೇಳಿದ್ದಾರೆ.

ನಟ ಚೇತನ್‌ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಕೆಲ ದಿನಗಳ ಹಿಂದೆ “ಕಾಂತಾರ” ಚಿತ್ರದ ಬಗ್ಗೆ ಬರೆದುಕೊಂಡಿದ್ದ ನಟ ಚೇತನ್‌, “ಕಾಂತಾರ ಚಿತ್ರವು ಚೆನ್ನಾಗಿದೆ. ನಮ್ಮ ಪಂಬದ, ನಲಿಕೆ, ಪರವ ಅರೆ-ಅಲೆಮಾರಿಗಳುವ ಆಚರಿಸುವ ಭೂತಕೊಲವನ್ನು ಉತ್ತಮವಾಗಿ ತೋರಿಸಿದ್ದರೆ.

ಈ ಸಮುದಾಯಗಳು ಬೇಟೆಗಾರರು ಮತ್ತು ಅಸ್ಪೃಶ್ಯರು ಅಂತ ಸುಳ್ಳು ಪ್ರಕ್ಷೇಪಗಳನ್ನು ಸೃಜನಾತ್ಮಕ ಸ್ವಾತಂತ್ರ್ಯ ಎಂದು ಮನ್ನಿಸಬಹುದು.

ಸಿನಿಮಾ ತಯಾರಕರು ನಮ್ಮ ಬುಡಕಟ್ಟು ಅಲೆಮಾರಿ ಜನಾಂಗದವರು ಪ್ರಕೃತಿಯ ಜೊತೆ ಹೊಂದಿರುವ ಸಂಬಂಧವನ್ನು ಇನ್ನೂ ಹೆಚ್ಚು ಉತ್ತಮವಾಗಿ ಅನ್ವೇಷಿಸಿದ್ದರೆ, ಚಲನಚಿತ್ರದ ಗುಣಮಟ್ಟ ಮತ್ತು ಇಮೋಶನಲ್ ಕ್ವೋಶೆಂಟ್ ಇನ್ನೂ ಹೆಚ್ಚುತ್ತಿತ್ತು ಎಂದು ಹೇಳಿದ್ದರು.

ಇನ್ನು ಕಾಂತಾರ ಚಿತ್ರವನ್ನು ರಿಷಬ್‌ ಶೆಟ್ಟಿ ನಿರ್ದೇಶಿಸಿದ್ದಾರೆ.

https://youtu.be/J5zku2oo81U ವಿಜಯಟೈಮ್ಸ್ ಬಿಗ್ ಇಂಪ್ಯಾಕ್ಟ್ ! ಕಂಠೀರವ ಸ್ಟೇಡಿಯಂ ತೊಂದರೆಗೆ ಸ್ಪಂದಿಸಿದ ಸಿಎಂ!

ಈ ಚಿತ್ರವನ್ನು ಹೊಂಬಾಳೆ ಫಿಲಂಸ್(Hombale Films) ನಿರ್ಮಿಸಿದ್ದು, ಮುಖ್ಯ ತಾರಾಗಣದಲ್ಲಿ ರಿಷಬ್‌ ಶೆಟ್ಟಿ, ಸಪ್ತಮಿ ಗೌಡ, ಅಚ್ಚುತ್‌ ಕುಮಾರ್ ಮತ್ತು ಕಿಶೋರ್‌ ಅಭಿನಯಿಸಿದ್ದಾರೆ.
Exit mobile version