ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯಿದೆ ಮಂಡನೆ. ಹೆಚ್‌.ಡಿ. ಕುಮಾರಸ್ವಾಮಿ ಗರಂ

ಬೆಳಗಾವಿ ಡಿ 21 : ವಿಧಾನ ಸಭೆಯಲ್ಲಿ ಮತಾಂತ ನಿಷೇಧ ಕಾಯಿದೆಗೆ ಅಂಗೀಕಾರ ದೊರೆತಿದ್ದು ಆದರೆ ಇದಕ್ಕೆ ಮಾಜಿ ಸಿಎಂ ಕುಮಾರ ಸ್ವಾಮಿ ವಿರೋಧ ವ್ಯಕ್ತ ಪಡಿಸಿದ್ದಾರೆ. ಮತಾಂತರ ನಿಷೇಧ ಕಾಯ್ದೆಯನ್ನ ಖಡಾಖಂಡಿತವಾಗಿ ನಮ್ಮ ಪಕ್ಷ ವಿರೋಧ ಮಾಡುತ್ತದೆ.  ನಾವು ಸದನದಲ್ಲಿ ಏನು ಹೇಳಬೇಕು ಅದನ್ನ ಹೇಳುತ್ತೇವೆ,  ಸದನದಲ್ಲಿ ಬಹುಮತ ಇದೆ ಅಂತಾ  ಮಸೂದೆ ಮಂಡಿಸಲು ಆಗಲ್ಲ ಎಂದು  ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ  ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ,  ಸುವರ್ಣ ಸೌಧ ನಿರ್ಮಿಸಿ ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆ ಮಾಡಬೇಕು ಅಂದುಕೊಂಡಿದ್ದೆವು. ಉತ್ತರ ಕರ್ನಾಟಕ ಸಮಸ್ಯೆ ಕುರಿತು ಚರ್ಚೆಗೆ ನಾನು ಸ್ಪೀಕರ್‌ಗೆ ಮನವಿ ಮಾಡಿದ್ದೆ. ಕೊನೆಯ ಎರಡು ದಿನ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ತೆಗೆದುಕೊಳ್ಳುತ್ತೇವೆ. ಚರ್ಚೆ ಮಾಡುವುದಾಗಿ ಸ್ಪೀಕರ್ ಹೇಳಿದ್ದಕ್ಕೆ ನಾನು ಕೊನೆಯಲ್ಲಿ ಬಂದಿದ್ದೇನೆ ಎಂದು ಹೇಳಿದ್ದಾರೆ.

ಸದನದಲ್ಲಿ ಮತಾಂತರ ಕಾಯ್ದೆ ಮಂಡನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್​​ಡಿಕೆ,  ಮತಾಂತರ ನಿಷೇಧ ಕಾಯ್ದೆಯನ್ನ ಖಡಾಖಂಡಿತವಾಗಿ ನಮ್ಮ ಪಕ್ಷ ವಿರೋಧ ಮಾಡುತ್ತದೆ.  ನಾವು ಸದನದಲ್ಲಿ ಎನೂ ಹೇಳಬೇಕು ಅದನ್ನ ಹೇಳುತ್ತೀವಿ,  ಸದನದಲ್ಲಿ ಬಹುಮತ ಇದೆ ಅಂತಾ ಸುಮ್ಮನೆ ಮಸೂದೆ ಮಂಡಿಸಳು ಆಗಲ್ಲ, ವಾಸ್ತವಾಂಶವನ್ನ ಮೊದಲು ಅವರು ಅರಿಯಬೇಕು ಎಂದು ಹೇಳಿದ್ದಾರೆ. ಇನ್ನೂ ಪರಿಷತ್ ನಲ್ಲಿ ಬಿಜೆಪಿಗೆ ಬಹುಮತ ಇಲ್ಲದಿರುವ ವಿಚಾರದ ಬಗ್ಗೆ ಮಾತನಾಡಿದ್ದು, ಪರಿಷತ್ ನಲ್ಲೂ ಕೂಡ ಅವರಿಗೆ ಬೆಂಬಲ ಕೊಡುವುದಿಲ್ಲ ಎಂದು ಹೇಳಿದ್ದಾರೆ.

ಯಾವುದೇ ಸಂಘಟನೆ ಗೂಂಡಾಗಿರಿ ವರ್ತನೆ ಮಾಡಲಿ, ಅವರನ್ನ ಗಡಿಪಾರು ಮಾಡಲು ಸರ್ಕಾರ ಕಠಿಣ ನಿರ್ಧಾರ ಮಾಡಬೇಕು. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕು ಅಂತಾ ಇಂದು ಅಧಿವೇಶನದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Exit mobile version