ಒಡಿಶಾದಲ್ಲಿ ಯಶವಂತಪುರ- ಕೊರೊಮಂಡೆಲ್ ಎಕ್ಸ್‌ಪ್ರೆಸ್ ರೈಲು ದುರಂತ : ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಸಾವಿನ ಸಂಖ್ಯೆ!

Odisha : ನಿನ್ನೆ ಸಂಜೆ ಬೆಂಗಳೂರಿನಿಂದ ಕೋಲ್ಕತ್ತಾಗೆ ಹೋಗುತ್ತಿದ್ದ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (Coromandel Express train tragedy) ರೈಲಿನ ಹಳಿತಪ್ಪಿದ ಬೋಗಿಗಳಿಗೆ,

ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು (Coromandel Express Train) ಹೌರಾದಿಂದ ಚೆನ್ನೈಗೆ ಬರುತ್ತಿದ್ದ ಸಂದರ್ಭದಲ್ಲಿ ಡಿಕ್ಕಿ ಹೊಡೆದಿದೆ.

ಈ ಘಟನೆ ಬಾಲಸೋರ್‌ನಲ್ಲಿ ನಡೆದಿದೆ, ಈ ಕೋರಮಂಡಲ್ ರೈಲು (Coromandel Train) ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಒಟ್ಟು 233ಕ್ಕೆ ಏರಿಕೆ ಆಗಿದೆ ಮತ್ತು 900 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ದೇಶದಲ್ಲಿ ನಡೆದ ಇಲ್ಲಿಯವರೆಗಿನ ದುರಂತದಲ್ಲಿ ಅತ್ಯಂತ ಮಾರಣಾಂತಿಕ ರೈಲು ಅಪಘಾತ ಎನಿಸಿದೆ. ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, #CoromandelExpress

ಮತ್ತು ಗೂಡ್ಸ್ ರೈಲು ಈ ಮೂರು ರೈಲುಗಳು ಅಪಘಾಥಕ್ಕೆ ಒಳಗಾಗಿವೆ. ನಿನ್ನೆ ಸಂಜೆಯಿಂದಲೇ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಘಟನಾ ಸ್ಥಳಕ್ಕೆ ಈಗಾಗಲೇ ಹೆಲಿಕಾಪ್ಟರ್‌ಗಳು ಬಂದಿಳಿದಿವೆ.

ಅಷ್ಟೇ ಅಲ್ಲದೆ ರಕ್ಷಣಾ ಕಾರ್ಯಾಚರಣೆಯಲ್ಲಿ ವಾಯುಸೇನೆಯ ಹೆಲಿಕಾಪ್ಟರ್‌ಗಳು ಕೂಡ ತೊಡಗಿದ್ದು 2016ರ (Coromandel Express train tragedy) ನಂತರದಲ್ಲಿ ನಡೆದ ಅತ್ಯಂತ ಭೀಕರ ಅಪಘಾತ ಇದಾಗಿದೆ.

ಇದನ್ನೂ ಓದಿ : https://vijayatimes.com/constitution-proposal/

ಕಾನ್ಪುರ ಬಳಿ 2016ರಲ್ಲಿ ಇಂದೋರ್‌-ಪಟನಾ ಎಕ್ಸ್‌ಪ್ರೆಸ್‌ ರೈಲು (Indore-Patna Express Train) ಅಪಘಾತಕ್ಕೀಡಾಗಿ ಈ ಘಟನೆಯಲ್ಲಿ ಒಟ್ಟು 150 ಮಂದಿ ಸಾವಿಗೀಡಾಗಿದ್ದರು. ಇದಾದ ನಂತರ ಕೆಲವು ಅಪಘಾತಗಳು

ಸಂಭವಿಸಿದ್ದರೂ ಸಹ ಇಷ್ಟು ಪ್ರಮಾಣದಲ್ಲಿ ಸಾವು ನೋವು ಸಂಭವಿಸಿರಲಿಲ್ಲ. ಈಗ ಒಡಿಶಾದಲ್ಲಿ ನಡೆದ ಈ ತ್ರಿವಳಿ ರೈಲು ದುರಂತದಲ್ಲಿ ಸರಿ ಸುಮಾರು 200ಕ್ಕೂ ಹೆಚ್ಚು ಜನ ಬಲಿಯಾಗಿದ್ದು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಸಾವಿನ ಸಂಖ್ಯೆ!

ಕಳೆದ 10 ವರ್ಷಗಳಲ್ಲಿ ನಡೆದ ಭೀಕರ ರೈಲು ಅಪಘಾತಗಳ ಪಟ್ಟಿ ಹೀಗಿದೆ :

2012 : ಹಂಪಿ ಎಕ್ಸ್‌ಪ್ರೆಸ್‌ ರೈಲು (Hampi Express Train) ಆಂಧ್ರಪ್ರದೇಶದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು ಇದರಿಂದ ಒಟ್ಟು 25 ಮಂದಿ ಸಾವು, 43 ಮಂದಿಗೆ ಗಾಯಗಳಾಗಿತ್ತು.

2014 : ಗೋರಖ್‌ಧಾಮ್‌ ಎಕ್ಸ್‌ಪ್ರೆಸ್‌ ರೈಲು (Gorakhdham Express Train) ಉತ್ತರ ಪ್ರದೇಶದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು ಪರಿಣಾಮವಾಗಿ 25 ಮಂದಿ ಸಾವು, 50 ಮಂದಿಗೆ ಗಾಯಗಳಾಗಿತ್ತು.

2016 : ಇಂದೋರ್‌ ಪಟನಾ ಎಕ್ಸ್‌ಪ್ರೆಸ್‌ ರೈಲು (Indore Patna Express Train) ಕಾನ್ಪುರದಲ್ಲಿ ಹಳಿ ತಪ್ಪಿದ ಪರಿಣಾಮ 150 ಮಂದಿ ಸಾವು, 150 ಮಂದಿಗೆ ಗಾಯಗಳಾಗಿತ್ತು.

2017 : ಕೈಫಿಯಾತ್‌ ಎಕ್ಸ್‌ಪ್ರೆಸ್‌ ರೈಲು (Kaifiyat Express Train) ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ಪರಿಣಾಮ ಒಟ್ಟು 70 ಮಂದಿಗೆ ಗಾಯಗಳಾಗಿತ್ತು.

2017 : ಪುರಿ-ಹರಿದ್ವಾರ ಉತ್ಕಲ್‌ ಎಕ್ಸ್‌ಪ್ರೆಸ್‌ ರೈಲು (Puri-Haridwar Utkal Express Train) ಮುಜಾಫರ್‌ನಗರದಲ್ಲಿ ಹಳಿ ತಪ್ಪಿದ ಪರಿಣಾಮವಾಗಿ 23 ಮಂದಿ ಸಾವು, 60 ಮಂದಿಗೆ ಗಾಯಗಳಾಗಿತ್ತು.

2022 : ಬಿಕಾನೇರ್‌-ಗುವಾಹಟಿ ಎಕ್ಸ್‌ಪ್ರೆಸ್‌ ರೈಲು (Bikaner-Guwahati Express Train) ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ಪರಿಣಾಮವಾಗಿ 9 ಸಾವು, 36 ಮಂದಿಗೆ ಗಾಯಗಳಾಗಿತ್ತು.

ಈಗಾಗಲೇ 4 ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳು, ಮೂರು ಎನ್‌ಡಿಆರ್‌ಎಫ್ ಘಟಕಗಳು (NDRF unit), 200 ಪೊಲೀಸ್ ಸಿಬ್ಬಂದಿ, 15 ಕ್ಕೂ ಹೆಚ್ಚು ಅಗ್ನಿಶಾಮಕ ರಕ್ಷಣಾ ತಂಡಗಳು, 30 ವೈದ್ಯರು,

ಮತ್ತು 60 ಆಂಬ್ಯುಲೆನ್ಸ್‌ಗಳನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಮೀಪದ ಜಿಲ್ಲೆಗಳ ಎಲ್ಲಾ ಆಸ್ಪತ್ರೆಗಳಲ್ಲಿ ಕೂಡ ಕಟ್ಟೆಚ್ಚರ ವಹಿಸಲಾಗಿದೆ.

ಇದನ್ನೂ ಓದಿ : https://vijayatimes.com/junior-asia-cup-award/

ಒಡಿಶಾ ಮುಖ್ಯ ಕಾರ್ಯದರ್ಶಿ ಇತ್ತೀಚಿನ ವರದಿಯನ್ನು ಉಲ್ಲೇಖಿಸಿ ಟ್ವಿಟ್ (Tweet) ಮಾಡಿದ್ದು, 233ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ ಎಂದು ತಿಳಿಸಿದ್ದಾರೆ. ಭುವನೇಶ್ವರದಿಂದ ಉತ್ತರದಲ್ಲಿ 170 ಕಿಮೀ ಮತ್ತು ಕೋಲ್ಕತ್ತಾದಿಂದ

ದಕ್ಷಿಣಕ್ಕೆ 250 ಕಿಮೀ ದೂರದಲ್ಲಿ ಬಾಲಸೋರ್ ಜಿಲ್ಲೆಯಲ್ಲಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.ಸುಮಾರು 900 ಜನರು ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Odisha Chief Minister Naveen Patnaik) ಅವರು ಭೀಕರ ರೈಲು ದುರಂತದ ಹಿನ್ನೆಲೆಯಲ್ಲಿ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದಾರೆ.ರಕ್ಷಣಾ

ಕಾರ್ಯಾಚರಣೆಗೆ ಸಹಾಯ ಮಾಡಲು ವಾಯುಪಡೆಯನ್ನು ಸ್ಥಳಕ್ಕೆ ಕರೆಸಲಾಗಿದೆ ಎಂದು ಇತ್ತ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಟ್ವೀಟ್ ಮಾಡಿದ್ದಾರೆ.

Exit mobile version