ಕೊರೊನಾ ಎರಡನೇ ಅಲೆಯ ಆತಂಕ: ರಾಜ್ಯದ 8 ಜಿಲ್ಲೆಗಳಲ್ಲಿ ಕಠಿಣ ನಿಯಮ ಜಾರಿಗೆ ಮುಂದಾದ ಸರ್ಕಾರ

ಬೆಂಗಳೂರು, ಎ. 02: ರಾಜ್ಯದಲ್ಲಿ ದೊಡ್ಡ ಮಟ್ಟದ ಆತಂಕ ಕೊರೊನಾ ಎರಡನೇ ಅಲೆಯ ಅಬ್ಬರ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಈ ಸಂಬಂಧ ಹೊಸ ಮಾರ್ಗಸೂಚಿ ರಿಲೀಸ್ ಮಾಡಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ‌ ಕೊರೊನಾ ಸೋಂಕಿನ ಆತಂಕ ಹೆಚ್ಚುತ್ತಿರುವ ಪರಿಣಾಮ ರಾಜ್ಯ ಸರ್ಕಾರ ಈಗಾಗಲೇ ಜಾತ್ರೆ, ಹಬ್ಬಗಳ‌ ಆಚರಣೆಗೆ ಕಡಿವಾಣ ಹಾಕಿದ್ದು, ಇದೀಗ ಎಲ್ಲಾ ಥಿಯೇಟರ್ ಗಳಲ್ಲಿ ಶೇ.50ರಷ್ಟು ಅವಕಾಶ ನೀಡಿದ್ದು ಪಬ್ ಮತ್ತು ಬಾರ್ ಗಳಲ್ಲೂ ಶೇ.50ರಷ್ಟು ಮಂದಿಗೆ ಮಾತ್ರ ಪ್ರವೇಶ ನೀಡುವ ಮೂಲಕ ಕಠಿಣ ಕ್ರಮಕ್ಕೆ ಮುಂದಾಗಿದೆ.

ಅಲ್ಲದೇ, ಯಾವುದೇ ರ್ಯಾಲಿ ಮತ್ತು ಪ್ರತಿಭಟನೆಗಳಿಗೆ ಅವಕಾಶ ನೀಡದಿರಲು ಹಾಗೂ
ಕಚೇರಿಗಳಲ್ಲಿ ಹೆಚ್ಚಿನ ಜನ ಸೇರಿದಂತೆ ಮಾರ್ಗಸೂಚಿಯಲ್ಲಿ ಸೂಚಿಸಿದೆ. ‌ಇವೆಲ್ಲದರ ಜೊತೆಗೆ ರಾಜ್ಯದಲ್ಲಿ ಜಿಮ್ ಹಾಗೂ ಸ್ವಿಮ್ಮಿಂಗ್ ಫುಲ್ ಗಳನ್ನು ಬಂದ್ ಮಾಡುವಂತೆಯೂ ಸೂಚಿಸಿರುವ ರಾಜ್ಯ ಸರ್ಕಾರ,
ಹೋಟೆಲ್, ರೆಸ್ಟೋರೆಂಟ್ ಗೆ ಅರ್ಧ ನಿರ್ಬಂಧ ವಿಧಿಸಿದ್ದರೆ. ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ನೀಡುವಂತೆ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಪ್ರಮುಖವಾಗಿ ರಾಜ್ಯದಲ್ಲಿ 2ನೇ ಅಲೆಯ ಕೊರೊನಾ ಆತಂಕ ಹೆಚ್ಚಾಗಿರುವ ರಾಜ್ಯದ ಎಂಟು ನಗರಗಳಾದ ಬೆಂಗಳೂರು ನಗರ ಹಾಗೂ ಗ್ರಾಮಾಂತರ,
ಮೈಸೂರು, ಕಲ್ಬುರ್ಗಿ, ಬೀದರ್, ಉಡುಪಿ, ಧಾರವಾಡ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಏ.20 ರವರೆಗೆ ಈ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.

Exit mobile version