ದೇಶದಲ್ಲಿ ಕೊರೊನಾ ಇಳಿಮುಖ: 28,204 ಹೊಸ ಪ್ರಕರಣ ದಾಖಲು

ನವದೆಹಲಿ, ಆ. 10: ಕಳೆದ 24ಗಂಟೆಗಳಲ್ಲಿ ದೇಶದಲ್ಲಿ 28,204 ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 3,19,98,158 ಕ್ಕೆ ತಲುಪಿದೆ. ದೈನಂದಿನ ಸಾವಿನ ಸಂಖ್ಯೆ 373 ಆಗಿದ್ದು ಒಟ್ಟಾರೆ ಸಾವಿನ ಸಂಖ್ಯೆಯನ್ನು 428,682 ಕ್ಕೆ ಏರಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,88,508ಕ್ಕೆ ತಲುಪಿದ್ದು ಇದು ಸೋಮವಾರದಿಂದ 13,680 ಇಳಿಕೆ ಆಗಿದೆ. ಇಲ್ಲಿಯವರೆಗೆ ಚೇತರಿಸಿಕೊಂಡವರ ಸಂಖ್ಯೆ 3,11,80,968 ಕ್ಕೆ ತಲುಪಿದೆ. ಸೋಮವಾರದವರೆಗೆ ಒಟ್ಟು 4,83,27,8545 ಮಾದರಿಗಳನ್ನು ಕೊವಿಡ್ ರೋಗ ಪತ್ತೆಗಾಗಿ ಪರೀಕ್ಷಿಸಲಾಗಿದೆ. ಈ ಪೈಕಿ 15,11,313 ಮಾದರಿಗಳನ್ನು ಒಂದು ದಿನದಲ್ಲಿ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

Exit mobile version