ಕೊರೊನಾ ಹೋರಾಟ: ವಿಶ್ವಬ್ಯಾಂಕ್ ನಿಂದ ವಿವಿಧ ದೇಶಗಳಿಗೆ 157 ಬಿಲಿಯನ್ ಡಾಲರ್‌ ಸಾಲ

ವಾಷಿಂಗ್ಟನ್‌, ಜು. 20: ಕೊರೊನಾ ಸಾಂಕ್ರಾಮಿಕ ವಿರುದ್ಧ ಹೋರಾಟಕ್ಕಾಗಿ ವಿಶ್ವ ಬ್ಯಾಂಕ್‌ ಕಳೆದ 15 ತಿಂಗಳಲ್ಲಿ ವಿವಿಧ ದೇಶಗಳಿಗೆ 157 ಬಿಲಿಯನ್ ಡಾಲರ್‌ ಹಣದ ನೆರವು ನೀಡಿದೆ ಎಂದು ವಿಶ್ವ ಬ್ಯಾಂಕ್ ಸಮೂಹಗಳ ಅಧ್ಯಕ್ಷ ಡೇವಿಡ್‌ ಮಲ್ಪಾಸಸ್ ಹೇಳಿದ್ದಾರೆ.

ಈ ಸಾಂಕ್ರಾಮಿಕ ರೋಗ ಬರುವುದಕ್ಕೆ ಮುನ್ನ ವಿಶ್ವ ಬ್ಯಾಂಕ್ ನೀಡುತ್ತಿದ್ದ ಹಣಕ್ಕಿಂತ ಈ ಹದಿನೈದು ತಿಂಗಳಲ್ಲಿ ನೀಡಿರುವ ಹಣದ ಪ್ರಮಾಣ ಶೇ 60ರಷ್ಟು ಹೆಚ್ಚಿದೆ ಎಂದು ಡೇವಿಡ್‌ ತಿಳಿಸಿದ್ದಾರೆ.

ಕೋವಿಡ್‌ ನಿಂದ ನಲುಗಿರುವ ಆರ್ಥಿಕ ಕ್ಷೇತ್ರದ ಚೇತರಿಕೆ ಕಾಣುವವರೆಗೂ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ನಾವು ತುರ್ತು ನೆರವು ನೀಡುವುದನ್ನು ಮುಂದುವರಿಸುತ್ತೇವೆ‘ ಎಂದು ಡೇವಿಡ್‌ ಭರವಸೆ ನೀಡಿದ್ದಾರೆ.

Exit mobile version