ಮತ್ತೆ ಏರಿಕೆಯತ್ತ ಕೊರೊನಾ ಪ್ರಕರಣ: ಒಂದೇ ದಿನದಲ್ಲಿ 42,982 ಹೊಸ ಪ್ರಕರಣಗಳು

ಮುಂಬೈ, ಆ. 05: ದೇಶದಲ್ಲಿ ಕಳೆದ 24 ಗಂಟೆಗಳ ಅಂತರದಲ್ಲಿ ಕೋವಿಡ್‌–19 ದೃಢಪಟ್ಟ 42,982 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಕೋವಿಡ್‌ ಕಾರಣಗಳಿಂದಾಗಿ 533 ಮಂದಿ ಸಾವಿಗೀಡಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಿಂದ ತಿಳಿದು ಬಂದಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗತ್ತಿದ್ದು, ಪ್ರಸ್ತುತ ದೇಶದಲ್ಲಿ 4,11,076 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 3,18,12,114ಕ್ಕೆ ಏರಿಕೆಯಾಗಿದೆ. ಈ ಪೈಕಿ 3,09,74,748 ಮಂದಿ ಗುಣಮುಖರಾಗಿದ್ದು, ಕೊರೊನಾ ವೈರಸ್‌ ಸೋಂಕಿನಿಂದ 4,26,290 ಜನರು ಮೃತಪಟ್ಟಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ 41,726 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಒಂದು ವಾರದಲ್ಲಿ ಕೋವಿಡ್‌ ದೃಢಪಟ್ಟ ಪ್ರಕರಣಗಳ ದರ ಶೇ.2.37ರಷ್ಟಿದೆ. ದೇಶದಾದ್ಯಂತ ಒಟ್ಟು 48.93 ಕೋಟಿಗೂ ಅಧಿಕ ಡೋಸ್‌ ಕೋವಿಡ್‌ ಲಸಿಕೆ ಹಾಕಲಾಗಿದೆ.

Exit mobile version