ಮಕ್ಕಳಿಗೆ ಕೊರೋನಾ ತಗುಲಿದರೂ ಸಾವು ಕಡಿಮೆ: ವಿ.ಕೆ ಪೌಲ್

ನವದೆಹಲಿ, ಮೇ. 24: ದೇಶದಲ್ಲಿ ಮಕ್ಕಳಿಗೂ ಕೊರೊನಾ ಸೋಂಕು ತಗಲುತ್ತಿದೆ. ಆದರೆ ಕೊವಿಡ್ ತಗುಲಿದ ಹೆಚ್ಚಿನ ಮಕ್ಕಳಲ್ಲಿ ಸೋಂಕಿನ ಯಾವುದೇ ಲಕ್ಷಣ ಕಾಣಿಸಿಲ್ಲ. ಹೆಚ್ಚಿನ ಸಾವು ಸಹ ಸಂಭವಿಸುವ ಸಾಧ್ಯತೆಯಿಲ್ಲ. ಕೊವಿಡ್ ತಗುಲಿದ ಮಕ್ಕಳಿಗೆ ಸೋಂಕಿನ ಹೆಚ್ಚಿನ ಗುಣಲಕ್ಷಣ ಇರದಿದ್ದಲ್ಲಿ ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ತಿಳಿಸಿದರು.

ಭಾರತ ಮತ್ತು ಇತರ ದೇಶಗಳಲ್ಲಿ ಸೋಂಕು ತಗುಲಿದ ಶೇಕಡಾ 3ರಿಂದ 4ರಷ್ಟು ಪ್ರಮಾಣದ ಮಕ್ಕಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ 10ರಿಂದ 12 ವರ್ಷದ ಮಕ್ಕಳನ್ನು ಈ ಸಂದರ್ಭದಲ್ಲಿ ಹೆಚ್ಚು ಗಮನಿಸಬೇಕಾದ ಅಗತ್ಯವಿದ್ದು, ಈ ವಯೋಮಾನದ ಮಕ್ಕಳು ಎಲ್ಲೆಂದರಲ್ಲಿ ತಿರುಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಪಾಲಕರು ಮಕ್ಕಳ ಮೇಲೆ ವಿಶೇಷ ಗಮನವಿರಿಸಬೇಕು ಎಂದು ಸೂಚಿಸಿದರು.

ಕೊರೊನಾ ಸೋಂಕಿಗೂ ಮೊದಲೇ ಬ್ಲ್ಯಾಕ್ ಫಂಗಸ್ ಸೋಂಕು ಇತ್ತು. ಹೆಚ್ಚಾಗಿ ಡಯಾಬಿಟಿಸ್ ಇರುವವರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗಲುವ ಸಾರ್ಧಯತೆಗಳು ಹೆಚ್ಚಿವೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಸ್ಥಿರವಾಗುತ್ತಿದೆ. ಪಾಸಿಟಿವಿಟಿ ಪ್ರಮಾಣ, ಸಕ್ರಿಯ ಕೇಸ್ ಸಂಖ್ಯೆ ಕುಸಿತವಾಗುತ್ತಿದೆ. ಯಾವುದೇ ರಾಜ್ಯಕ್ಕೆ ಕೊವಿಡ್ ಲಸಿಕೆ ಕೊರತೆಯಾದರೆ ತುರ್ತಾಗಿ ಪೂರೈಸುತ್ತೇವೆ ಎಂದ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್, ಕೊವಿಡ್ ಚಿಕಿತ್ಸೆ ವೇಳೆ ಅನಗತ್ಯವಾಗಿ ಸ್ಟಿರಾಯ್ಡ್ ಅನ್ನು ಬಳಸಬಾರದು ಎಂದು ಸಹ ವಿವರಿಸಿದರು.‌

Exit mobile version