ಕಲ್ಬುರ್ಗಿ /ದೆಹಲಿ ಸೆ 23 : ಒಂದೆಡೆ ಕರೊನಾ ಭೀತಿಯಲ್ಲಿರುವ ಜನತೆಗೆ ಇದೀಗ ಡೆಂಗ್ಯೂ ಜ್ವರದ ಭೀತಿ ಕೂಡ ಎದುರಾಗಿದ್ದು, ಸಾರ್ವಜನಿಕರು ಕಂಗಾಲಾಗಿದ್ದಾರೆ. ಕಳೆದ ಒಂದು ತಿಂಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ದಿಢೀರನೆ ಹೆಚ್ಚಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಜಿಲ್ಲೆಯ ಜನರಲ್ಲಿ ಆರೋಗ್ಯ ಸಮಸ್ಯೆ ಕಾಣಿಸುವುದು ಅಪರೂಪ. ಆದರೆ ಮಳೆಗಾಲ ಪ್ರಾರಂಭವಾದಾಗಿನಿಂದ ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಸೊಳ್ಳೆಯ ಹಾವಳಿ ಕೂಡಾ ಹೆಚ್ಚಾಗಿದ್ದರಿಂದ ಜನರು ಸೊಳ್ಳೆಯಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಾಗಿದೆ.
ಜುಲೈ ತಿಂಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಮೂವತ್ತು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಆಗಸ್ಟ್ ಮೊದಲ ಎರಡು ವಾರದಲ್ಲಿಯೂ ಮೂವತ್ತು ಜನರಿಗೆ ಡೆಂಗ್ಯೂ ಇರುವದು ದೃಢವಾಗಿದೆ. ಕಳೆದ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಇಬ್ಬರಿಂದ ಮೂವರಲ್ಲಿ ಕಾಣಿಸಿಕೊಂಡಿದ್ದ ಡೆಂಗ್ಯೂ ಜುಲೈ ಮತ್ತು ಆಗಸ್ಟ್ ತಿಂಗಳಿಂದ ಹೆಚ್ಚಾಗಿದೆ.
ದೇಶದ ರಾಜಧಾನಿಯಲ್ಲೂ ಕೂಡ ಜ್ವರದ ಹಾವಳಿ ಹೆಚ್ಚಾಗಿದ್ದು ಶೇ ದೆಹಲಿಯ ಶೇ.6ರಷ್ಟು ಕುಟುಂಬಗಳಲ್ಲಿ ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು ಜನರಿಗೆ ಜ್ವರದ ರೀತಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಶೇ.11ರಷ್ಟು ಕುಟುಂಬಗಳಲ್ಲಿ ಇಬ್ಬರಿಂದ ಮೂವರಿಗೆ ಅದೇ ರೀತಿಯ ಲಕ್ಷಣಗಳು ಗೋಚರಿಸಿವೆ. ಇನ್ನು ಶೇ.11ರಷ್ಟು ಕುಟುಂಬಗಳಲ್ಲಿ ಕನಿಷ್ಠ ಒಬ್ಬರಿಗೆ ಜ್ವರದ ಲಕ್ಷಣಗಳು ಕಂಡು ಬಂದಿದೆ. ಆದರೆ ಬಹುಪಾಲು ಕುಟುಂಬಗಳಲ್ಲಿ ಅಂದರೆ ಶೇ.72ರಷ್ಟು ಮನೆಗಳಲ್ಲಿ ಯಾವುದೇ ವ್ಯಕ್ತಿಗೆ ಜ್ವರ ಹಾಗೂ ಯಾವುದೇ ರೀತಿ ಅನಾರೋಗ್ಯದ ಲಕ್ಷಣಗಳು ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆ ವರದಿಮಾಡಿದೆ