ಪೌರ ಕಾರ್ಮಿಕರಿಗೆ ನಾಳೆ ‘ಕೊರೋನಾ ಲಸಿಕೆ’ ವಿತರಣೆ

ಬೆಂಗಳೂರು, ಫೆ. 11 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರು, ಪಾಲಿಕೆ ವ್ಯಾಪ್ತಿಯಲ್ಲಿನ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಮೇಲ್ವಿಚಾರಕರು, ಆಟೋ ಟಿಪ್ಪರ್ ಮತ್ತು ಕಾಂಪ್ಯಾಕ್ಟರ್ ಚಾಲಕರು ಹಾಗೂ ಸಹಾಯಕರು  ಸ್ವಚ್ಛತಾ ಕಾರ್ಯನಿರತ ಕಾರ್ಮಿಕರು ದಿನಾಂಕ 12-02-2021ರ ಶುಕ್ರವಾರದಂದು ಬೆಳಿಗ್ಗೆ 10.30ಕ್ಕೆ 2ನೇ ಮಸ್ಟರಿಂಗ್ ಹಾಜರಾತಿ ಮುಗಿದ ನಂತ್ರ ಮಸ್ಟರಿಂಗ್ ಕೇಂದ್ರದ ಬಳಿಯಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ತಪ್ಪದೇ  ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಪಡೆಯಲು ಸೂಚಿಸಿದ್ದಾರೆ.

ಕೋವಿಡ್ ಲಸಿಕೆ ಪಡೆದ  ಬಳಿಕ ಅರ್ಧ ದಿನವನ್ನು ವೇತನ ಸಹಿತ ರಜೆಯನ್ನು ನೀಡಲಾಗಿದೆ. ಕೋವಿಡ್ ಲಸಿಕೆ ಪಡೆಯದ ಕಾರ್ಮಿಕರು ಎಂದಿನಂತೆ ಕರ್ತವ್ಯ ನಿರ್ವಹಿಸಬಹುದು. ರಜೆ ಮಾಡಿದವರಿಗೆ ಅಂದಿನ ದಿನವನ್ನು ವೇತನ ರಹಿತ ರಜೆ ಎಂದು ಘೋಷಿಸಲಾಗಿದೆ.

ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರತ ಆರೋಗ್ಯಾಧಿಕಾರಿಗಳು ಪೌರ ಕಾರ್ಮಿಕರ ಮೂಲ ಸ್ಕ್ರೀನಿಂಗ್ ಪರೀಕ್ಷೆ ನಡೆಸಿ, ಕೋವಿಡ್ ಲಸಿಕೆ ಹಾಕುವುದು ಎಂಬುದಾಗಿ ವಿಶೇಷ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ. ಹೀಗಾಗಿ ನಾಳೆ  ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಪೌರ ಕಾರ್ಮಿಕರು ತಪ್ಪದೇ ಕೊರೋನಾ ಲಸಿಕೆಯನ್ನು ಹಾಕಿಸಿಕೊಳ್ಳೋದು ಕಡ್ಡಾಯವಾಗಿದೆ.

Exit mobile version