ʻಕ್ರಾಂತಿʼ ಚಿತ್ರದ ಟ್ರೇಲರ್‌ ಬಿಡುಗಡೆಗೆ ಕ್ಷಣಗಣನೆ ; ಟ್ರೆಂಡಿಂಗ್‌ ಪಟ್ಟಿಯಲ್ಲಿ ಕ್ರಾಂತಿ!

Bengaluru : ದಾಸ, ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌(Challanging star Darshan) ಅಭಿನಯದ ಬಹು ನಿರೀಕ್ಷಿತ ಕ್ರಾಂತಿ(countdown of Kranti’ trailer) ಚಿತ್ರದ ಟ್ರೇಲರ್‌ ಬಿಡುಗಡೆ ದಿನಾಂಕವನ್ನು ಚಿತ್ರತಂಡ ನಿಗದಿ ಪಡಿಸಿದ್ದು, ದರ್ಶನ್‌ ಅಭಿಮಾನಿಗಳು ಟ್ರೇಲರ್‌ ಬಿಡುಗಡೆಗೆ ಬಹಳ ಆತುರ, ಕಾತುರದಿಂದ ಕಾಯತೊಡಗಿದ್ದಾರೆ.

ಕರ್ನಾಟಕದಲ್ಲಿ ನಟ ದರ್ಶನ್ ಅವರ ಸಿನಿಮಾಗಳ(Cinema) ವೀಕ್ಷಣೆಗೆ ಈ ಹಿಂದೆಯಿಂದಲೂ ವಿಶೇಷ ಅಭಿಮಾನ ಇರುವುದು ಸಾಮಾನ್ಯ ಸಂಗತಿ, ಇದು ಅನೇಕರಿಗೆ ತಿಳಿದಿರುವ ವಿಷಯವೂ ಹೌದು.

ಸದ್ಯ ಇದೇ ಸಾಲಿನಲ್ಲಿ ಇದೀಗ ನಟ ದರ್ಶನ್‌ ಅವರು ನಟಿಸಿರುವ ಕ್ರಾಂತಿ ಚಿತ್ರಕ್ಕೂ ಈ ಅಭಿಮಾನ ಜೋರಾಗಿದೆ. ಕ್ರಾಂತಿ ಚಿತ್ರದ ಶೀರ್ಷಿಕೆ ಪ್ರಕಟವಾದ ದಿನದಿಂದಲೂ ದರ್ಶನ್‌ ಅವರ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ,

ಉತ್ಸಾಹ ಹರಿದಾಡುತ್ತಿದೆ. ಕ್ರಾಂತಿ ಚಿತ್ರದ ಬಗ್ಗೆ ಸ್ವತಃ ಚಿತ್ರತಂಡ ಮಾಡದ ಪ್ರಚಾರವನ್ನು ದರ್ಶನ್‌ ಅವರ ಅಭಿಮಾನಿಗಳೇ ಮೊದಲ ದಿನದಿಂದಲೂ ಮಾಡಿಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿ: https://vijayatimes.com/dont-settle-mahadayi-dispute/

ಅದರಲ್ಲೂ ದರ್ಶನ್ ಅವರ ಪರವಿಲ್ಲದ ಮಾಧ್ಯಮಗಳು(countdown of Kranti’ trailer), ಅವರ ಸಿನಿಮಾಗಳಿಗೆ ಪ್ರಚಾರ, ಸಿನಿಮಾ ಮಾಹಿತಿ ಸೇರಿದಂತೆ ಯಾವ ವಿಷಯವನ್ನು ಪ್ರಸಾರ ಮಾಡುತ್ತಿಲ್ಲ! ಕೆಲ ಮಾಧ್ಯಮಗಳಿಗೆ ದರ್ಶನ ಅವರ ವಿರುದ್ಧ ತೀವ್ರ ಅಸಮಾಧಾನವಿದ್ದು,

ಸದ್ಯ ದರ್ಶನ್‌ ಅವರ ಕ್ರಾಂತಿ ಚಿತ್ರದ ಬಗ್ಗೆ ಯಾವುದೇ ರೀತಿಯಲ್ಲೂ ಪ್ರಚಾರ, ಮಾಹಿತಿ ನೀಡಿಲ್ಲ! ಈ ಒಂದು ಸಂಗತಿ ದರ್ಶನ್‌ ಅವರ ಸಹಸ್ರಾರು ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ.

ಈ ಬಲವಾದ ಕಾರಣವನ್ನು ಮುಂದಿಟ್ಟುಕೊಂಡು ದರ್ಶನ್‌ ಅವರ ಅಭಿಮಾನಿಗಳು ಸ್ವತಃ ತಾವೇ ಬೀದಿಗಿಳಿದು ಕ್ರಾಂತಿ ಚಿತ್ರವನ್ನು ಪ್ರಚಾರ ಮಾಡುತ್ತಿದ್ದಾರೆ.

ಅಭಿಮಾನಿಗಳು ಕ್ರಾಂತಿ ಚಿತ್ರಕ್ಕೆ ಪ್ರಾರಂಭದಿಂದಲೂ ಸಾಮಾಜಿಕ ಜಾಲತಾಣ(Social media) ವೇದಿಕೆ ಸೇರಿದಂತೆ ತಮ್ಮ ಬೈಕ್‌, ಕಾರು, ಪೋಸ್ಟರ್‌ಗಳಿಂದ ಭಾರಿ ಪ್ರಚಾರ ಆರಂಭಿಸಿದ್ದಾರೆ.

ನಮ್ಮ ದರ್ಶನ್‌ ಸರ್‌ ಅವರ ಕ್ರಾಂತಿ ಚಿತ್ರವನ್ನು ನಾವು ಅಭಿಮಾನಿಗಳೇ ಗೆಲ್ಲಿಸುತ್ತೇವೆ, ಪ್ರಚಾರ ಮಾಡುತ್ತೇವೆ ಹಾಗೂ ʼಕ್ರಾಂತಿʼಗೊಳಿಸುತ್ತೇವೆ ಎಂದು ಅಭಿಮಾನಿಗಳು ಘಟುಧ್ವನಿಯಲ್ಲಿ ಹೇಳುತ್ತಿದ್ದಾರೆ.

ಸದ್ಯ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗೆ ಜೋಡಿಯಾಗಿ ನಟಿ ರಚಿತಾ ರಾಮ್‌(Rachita ram) ಕಾಣಿಸಿಕೊಂಡಿದ್ದು, ಚಿತ್ರ ಇದೇ ಜನವರಿ ೨೬ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ.

ಇದನ್ನೂ ಓದಿ: https://vijayatimes.com/ridicule-about-siddu-dkshi/

ಚಿತ್ರದ ೩ ಹಾಡುಗಳು ಈಗಾಗಲೇ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ೩ ಹಾಡುಗಳ ಪೈಕಿ ಪುಷ್ಪಾವತಿ ಹಾಡು ಬಹಳ ವೈರಲ್‌ ಆಗುತ್ತಿದ್ದು, ಟ್ವಿಟರ್‌(Twitter) ನಲ್ಲೂ ಸಹ ಟ್ರೆಂಡ್‌ ಆಗಿದೆ. ಈ ಸಂತಸದಲ್ಲಿರುವ ಚಿತ್ರತಂಡ ಇದೀಗ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ.

ಜನವರಿ ೭ ರಂದು ಯೂಟ್ಯೂಬ್‌ ನಲ್ಲಿ(Youtube) ಕ್ರಾಂತಿ ಚಿತ್ರದ ಟ್ರೇಲರ್‌(Trailer) ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸುತ್ತಿದ್ದಂತೆ, ದರ್ಶನ್‌ ಅವರ ಅಭಿಮಾನಿಗಳು ಹುಚ್ಚೆದ್ದು ಸಂಭ್ರಮಿಸುತ್ತಿದ್ದಾರೆ.

ಚಿತ್ರದ ಹಾಡುಗಳನ್ನು ಯಶಸ್ವಿಗೊಳಿಸಿರುವ ಸಿನಿಪ್ರೇಕ್ಷಕರು, ದರ್ಶನ್‌ ಅವರ ಅಭಿಮಾನಿಗಳು ಟ್ರೇಲರ್‌ ಸೇರಿದಂತೆ ಚಿತ್ರವನ್ನು ಕೂಡ ಯಶಸ್ವಿಗೊಳಿಸಲಿದ್ದಾರೆ ಎಂಬ ಲೆಕ್ಕಾಚಾರಗಳು ಚಿತ್ರರಂಗದಲ್ಲಿ ಹರಿದಾಡುತ್ತಿದೆ.

Exit mobile version