ರಾಹುಲ್‌ಗಾಂಧಿ ಅನರ್ಹತೆ ಕುರಿತು ಕಾನೂನು ಏನು ಹೇಳುತ್ತದೆ..?

New Delhi : ಕಾಂಗ್ರೆಸ್‌ (Congress) ನಾಯಕ ರಾಹುಲ್‌ಗಾಂಧಿ (Court verdict on Rahul Gandhi) ಅವರಿಗೆ ಸೂರತ್‌ ಜಿಲ್ಲಾ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಅವರ

ಸಂಸತ್‌ಸದಸ್ಯತ್ವ ರದ್ದಾಗಿದ್ದು, ಅವರನ್ನು ಸಂಸತ್‌ಸದಸ್ಯ ಸ್ಥಾನದಿಂದ (Court verdict on Rahul Gandhi) ಅನರ್ಹಗೊಳಿಸಲಾಗಿದೆ.

ಈ ಬಗ್ಗೆ ದೇಶಾದ್ಯಂತ ಅನೇಕ ರೀತಿಯ ಚರ್ಚೆಗಳು ನಡೆಯುತ್ತಿವೆ. ಆದರೆ ಕಾನೂನು ಏನು ಹೇಳುತ್ತದೆ ಎಂಬುದನ್ನು ನೋಡುವುದಾದರೆ, ಜನಪ್ರತಿನಿಧಿಗಳ ಕಾಯ್ದೆ-1951ರ ಪ್ರಕಾರ, ಶಾಸಕರು/ ಸಂಸದರು ಸೆಕ್ಷನ್ 153A ಅಡಿಯಲ್ಲಿ ಧರ್ಮ, ವಾಸಸ್ಥಳ, ಭಾಷೆ, ಜನಾಂಗ, ಹುಟ್ಟಿದ ಸ್ಥಳ,

ಮುಂತಾದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವ ಅಪರಾಧ ಅಥವಾ ಸೆಕ್ಷನ್ 171E ಲಂಚ ತೆಗೆದುಕೊಳ್ಳುವ ಪ್ರಕರಣ ಅಥವಾ ಸೆಕ್ಷನ್ 171F ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಬೀರುವ ಅಪರಾಧ ಪ್ರಕರಣಗಳಲ್ಲಿ

ಅಪರಾಧಿ ಎಂದು ಸಾಬೀತಾದರೆ , ಶಾಸಕರು/ ಸಂಸದರು ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ.

ಇದನ್ನೂ ಓದಿ : https://vijayatimes.com/khushboo-tweet-is-viral/

ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷೆಯಾದರೆ , ಶಾಸಕರು/ ಸಂಸದರು ಅನರ್ಹಗೊಳ್ಳುತ್ತಾರೆ. ರಾಹುಲ್‌ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆಯಾದ ಕಾರಣ ಈ ಕಾಯ್ದೆಯ ಅಡಿ ಅನರ್ಹಗೊಳಿಸಲಾಗಿದೆ.

ಶಾಸಕರು ಅಥವಾ ಸಂಸದರು ಯಾವುದೇ ಇತರ ಅಪರಾಧ ಪ್ರಕರಣಗಳಲ್ಲಿ ಎರಡು ವರ್ಷ ಅಥವಾ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾಗಿದ್ದರೆ ಅವರನ್ನು ಶಾಸಕ/ ಸಂಸದ ಸ್ಥಾನದಿಂದ ಅನರ್ಹಗೊಳಿಸಬಹುದು.

ರಾಹುಲ್‌ಗಾಂಧಿ ಅವರು ಜನಪ್ರತಿನಿಧಿಗಳ ಕಾಯ್ದೆ-1951ರ ಸೆಕ್ಷನ್ 153A ಅಡಿಯಲ್ಲಿ ಧರ್ಮ, ವಾಸಸ್ಥಳ, ಭಾಷೆ, ಜನಾಂಗ, ಹುಟ್ಟಿದ ಸ್ಥಳ, ಮುಂತಾದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವ ಅಪರಾಧದಡಿಯಲ್ಲಿ

ಅನರ್ಹಗೊಂಡಿದ್ದಾರೆ. ನ್ಯಾಯಾಲಯ ತೀರ್ಪು ನೀಡಿದ ನಂತರ ಅವರನ್ನು ಅಪರಾಧಿ ಎಂದು ಪರಿಗಣಿಸಲಾಗುತ್ತದೆ.

ಹೀಗಾಗಿ ಅವರು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು ಕೂಡಾ, ಅವರನ್ನು ಅಪರಾಧಿ ಎಂದೇ ಪರಿಗಣಿಸಲಾಗುತ್ತದೆ. ಉನ್ನತ ನ್ಯಾಯಾಲಯದ ಆದೇಶ ಅಥವಾ ಕೆಳ ನ್ಯಾಯಾಲಯ ನೀಡಿರುವ ತೀರ್ಪಿನ್ನು ರದ್ದು

ಮಾಡುವವರೆಗೂ ಆ ವ್ಯಕ್ತಿಯನ್ನು ಅಪರಾಧಿ ಎಂದೇ ಪರಿಗಣಿಸಲಾಗುತ್ತದೆ.

ಹೀಗಾಗಿಯೇ ರಾಹುಲ್‌ಗಾಂಧಿ ಅವರಿಗೆ ನ್ಯಾಯಾಲಯ ಶಿಕ್ಷೆ ನೀಡಿದ ತಕ್ಷಣ, ಕಾನೂನು ಪ್ರಕಾರ ಅವರು ಅನರ್ಹರಾಗುತ್ತಾರೆ.

1971ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರು ಕೂಡಾ ಚುನಾವಣಾ ಅಕ್ರಮ ಎಸಗಿದ್ದ ಅಪರಾಧಕ್ಕಾಗಿ ಅನರ್ಹಗೊಂಡಿದ್ದರು.

ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ (Justice Jagmohan Lal Sinha) ಇಂದಿರಾ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ದೇಶವೇ ತಿರುಗಿ ನೋಡುವಂತಹ ತೀರ್ಪು ನೀಡಿದ್ದರು.
Exit mobile version