ವರದಿ: ವಿಜಯಲಕ್ಷ್ಮಿ ಶಿಬರೂರು
ಕೊರೋನಾ ಅಂದ್ರೆನೇ ಭಯ ಪ್ರಾರಂಭ ಆಗಿದೆ. ಅದು ತಂದ ಸಂಕಷ್ಟ ಒಂದಲ್ಲಾ ಎರಡಲ್ಲಾ. ಒಂದ್ಕಡೆ ಆಥರ್ಿಕ ಕುಸಿತ, ಉದ್ಯೋಗ ಕಡಿತ, ಹಸಿವು, ನೋವು, ಸಾವು. ಹೀಗೆ ಸಮಸ್ಯೆ ಸಾಲು ಸಾಲು ಸಮಸ್ಯೆಗಳ ಸರಮಾಲೆಯನ್ನೇ ತಂದೊಡ್ಡಿದೆ. ಇವುಗಳ ನಡುವೆ ಈ ಕೊರೋನಾ ಇನ್ನೊಂದು ಭಯಾನಕ ಸಮಸ್ಯೆಯನ್ನ ತಂದಿದೆ. ಅದು ಇಡೀ ಮನುಕುಲಕ್ಕೇ ಕಂಟಕವಾಗಿ ಪರಿಣಮಿಸಲಿದೆ. ಈ ಕಂಟಕದ ಭೀಕರ, ಭೀಭತ್ಸ ಮುಖವಾಡವನ್ನ ವಿಜಯಟೈಮ್ಸ್ನ ಕವರ್ಸ್ಟೋರಿ ತಂಡ ಕೆಚ್ಚೆದೆಯಿಂದ ಬಯಲುಮಾಡಿದೆ.
ಕೊರೋನಾ ತಂದ ಆ ವಿಚಿತ್ರ ಸಮಸ್ಯೆ ಏನು ಗೊತ್ತಾ? ಭ್ರೂಣ ಹತ್ಯೆ. ಯಸ್, ನಮ್ಮ ದೇಶದಲ್ಲಿ ಸಡನ್ ಆಗಿ ಲಾಕ್ಡೌನ್ ಘೋಷಣೆಯಾಯಿತು. ಇದ್ರಿಂದ ಸಾಕಷ್ಟು ಸಮಸ್ಯೆಗಳು ತಲೆದೋರಿದವು. ಅವುಗಳಲ್ಲಿ ಗರ್ಭನಿರೋಧಕಗಳ ಪೂರೈಕೆ ಸಮಸ್ಯೆಯೂ ಒಂದು. ಗರ್ಭನಿರೋಧಕಗಳನ್ನು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಸದ ಕಾರಣ ಬೇಡದ ಗರ್ಭಧಾರಣೆ ಸಮಸ್ಯೆ ನಮ್ಮ ದೇಶ ಮಾತ್ರವಲ್ಲ ಇಡೀ ವಿಶ್ವವನ್ನೇ ಕಾಡುತ್ತಿದೆ.
ಸ್ವಯಂ ಸೇವಾ ಸಂಸ್ಥೆಯೊಂದು ನಡೆಸಿದ ಸವರ್ೆಯೊಂದರ ಪ್ರಕಾರ ನಮ್ಮ ದೇಶದಲ್ಲಿ ಲಾಕ್ಡೌನ್ನಿಂದ 23.7 ಲಕ್ಷ ಬೇಡದ ಗರ್ಭಧಾರಣೆಯಾಗಿದೆ. ಈ ಪೈಕಿ 14.4 ಲಕ್ಷ ಮಂದಿ ಗರ್ಭಪಾತಕ್ಕೆ ರೆಡಿಯಾಗಿದ್ದಾರೆ. ಇವರಲ್ಲಿ 8.34 ಲಕ್ಷ ಜನ ಅಸುರಕ್ಷಿತ ಗರ್ಭದಾರಣೆಗೆ ಮುಂದಾಗಿದ್ದಾರೆ. ಈ ವೇಳೆ 1700 ತಾಯಂದಿರು ಸಾವನ್ನಪ್ಪುವ ಆತಂಕ ಎದುರಾಗಿದೆ. ಈ ಬೇಡದ ಗರ್ಭದ ಪೈಕಿ ಹತ್ಯೆಗೆ ಮುಂದಾಗುವುದೇ ಹೆಣ್ಣು ಮಗುವಿನದ್ದು ಅನ್ನುವ ಭಯಾನಕ ಸತ್ಯ ವಿಜಯಟೈಮ್ಸ್ ಕವರ್ಸ್ಟೋರಿ ತಂಡಕ್ಕೆ ಮಾಹಿತಿ ಸಿಕ್ತು. ಇದಕ್ಕೆ ಹೇಗಾದ್ರೂ ಬ್ರೇಕ್ ಹಾಕಲು ಸಕರ್ಾರದ ಕಣ್ಣು ತೆರೆಸಬೇಕು ಅಂತ ನಮ್ಮ ತಂಡ ನಿರ್ಧರಿಸಿತು.
ಗಂಡಿಗೆ ಸಮನಾಗಿ ಎಲ್ಲ ಕ್ಷೇತ್ರದಲ್ಲೂ ಹೆಣ್ಣು ಸಾಧನೆ ಮಾಡುವ ಈ ದಿನದಲ್ಲೂ ಲಿಂಗಾನುಪಾತ ಏರುಪೇರು ಮಾಡುವ ಕೃತ್ಯ ನಡೆದಿರುವುದು ಸಕರ್ಾರದ ಲೋಪವನ್ನ ಎತ್ತಿ ತೋರಿಸುತ್ತಿದೆ. ಭಾರಿ ಪ್ರಮಾಣದ ಲಿಂಗಾನುಪಾತ ವ್ಯತ್ಯಾಸ ತಡೆಯುಲು ಅಂತಾ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ಕಾಯ್ದೆ (ಪಿ.ಸಿ.ಪಿ.ಎಸ್ಡಿಟಿ) ಜಾರಿಗೆ ತಂದಿದೆ. ಈ ಕಾಯ್ದೆ ಕಟ್ಟು ನಿಟ್ಟಾಗಿ ಜಾರಿಗೆ ತರದ ಕಾರಣ ಹೈಟೆಕ್ ಆಸ್ಪತ್ರೆಗಳನ್ನು ತೆರೆದು ಸ್ಕಾನಿಂಗ್ ತಂತ್ರಜ್ಞಾನ ಬಳಸಿ ಹೆಣ್ಣು ಭ್ರೂಣಗಳನ್ನು ಪತ್ತೆ ಮಾಡಿ ವ್ಯವಸ್ಥಿತವಾಗಿ ಹತ್ಯೆ ಮಾಡುವ ಕೇಂದ್ರಗಳು ನಿರ್ಭಯವಾಗಿ ಕಾರ್ಯನಿರ್ವಹಿಸುತ್ತಿವೆ.
ಇಂಥಹ ಕಟುಕರ ಕೇಂದ್ರಗಳ ಪತ್ತೆಗಾಗಿಯೇ ವಿಜಯಟೈಮ್ಸ್ ಕವರಸ್ಟೋರಿ ತಂಡ ಸ್ವಯಂ ಸೇವಾ ಸಂಸ್ಥೆಯೊಂದರ ಸಹಕಾರದೊಂದಿದೆ ರಹಸ್ಯ ಕಾಯರ್ಾಚರಣೆಗೆ ಇಳಿಯಿತು. ಇಂಥಾ ದಂಧೆಯಲ್ಲಿ ತೊಡಗಿರೋ ಅನೇಕರಿಗೆ ಬಲೆ ಬೀಸಿದ್ವಿ. ಆಗ ಮೊದಲು ನಮ್ಮ ಬಲೆಗೆ ಬಿದ್ದಿದ್ದು ಡಾ.ಚೈತ್ರಾ ಅನ್ನುವಾಕೆ. ಆಕೆ ಹೇಳಿಕೊಳ್ಳುತ್ತಿರೋದು ಡಾಕ್ಟರ್ ಅಂತ ಆದ್ರೆ ಆಕೆ ಡಾಕ್ಟರ್ ಅಲ್ಲ ನಸರ್್. ಈಕೆ ಹೆಣ್ಣು ಭ್ರೂಣಗಳನ್ನು ಗರ್ಭದಲ್ಲೇ ಹತ್ಯೆ ಮಾಡುತ್ತಿದ್ದ ತಂಡದ ಪ್ರಮುಖ ಸದಸ್ಯೆ. ಈಕೆಯ ಬಳಿ ನಮ್ಮ ತಂಡದ 5 ತಿಂಗಳ ಗಭರ್ಿಣಿಯನ್ನು ಕಳುಹಿಸಿ ನಮಗೆ ಈಗಾಗಗ್ಲೇ 2 ಹೆಣ್ಣುಮಕ್ಕಳಿದ್ದಾರೆ. ಮೂರನೆಯದ್ದು ಹೆಣ್ಣಾದ್ರೆ ಗರ್ಭಪಾತ ಮಾಡಿಸಿಕೊಳ್ತೀವಿ ನಮಗೆ ಸಹಾಯ ಮಾಡಿ ಅಂತ ಕೇಳಿದ್ವಿ. ಇದಕ್ಕೆ ಬಿಂದಾಸಾಗಿ ಒಪ್ಪಿಕೊಂಡ ಚೈತ್ರಾ ಭ್ರೂಣ ಲಿಂಗ ಪತ್ತೆಗೆ ಜಯಲಕ್ಷ್ಮಿ ಅನ್ನುವಾಕೆಯನ್ನು ಸಂಪಕರ್ಿಸಲು ಹೇಳಿದ್ಲು. ಗರ್ಭಪಾತ ನಾನೇ ಮಾಡ್ತೀನಿ ಅಂತ ಹೇಳಿ ಭ್ರೂಣ ಲಿಂಗ ಪತ್ತೆಗೆ 15000 ಹಾಗೂ ಗರ್ಭಪಾತಕ್ಕೆ 20000 ಅಂತ ರೇಟ್ ಫಿಕ್ಸ್ ಮಾಡಿದ್ಲು. ನಾವದಕ್ಕೆ ಒಪ್ಪಿಕೊಂಡು ಮೊದಲು ಏಜೆಂಟ್ ಜಯಲಕ್ಷ್ಮಿಯನ್ನ ಭೇಟಿಯಾದ್ವಿ.
ಕಟುಕರ ಮನೆಯೊಳಗೆ ದಾಳಿ: ಜಯಲಕ್ಷ್ಮಿ ನಮ್ಮಿಂದ ಒಂದು ಆಧಾರ್ ಕಾಡರ್್ ಕಾಪಿ ಪಡೆದು, ನಮ್ಮನ್ನು ಭಾಷ್ಯಂ ಸರ್ಕಲ್ನಲ್ಲಿರುವ ಬೆಂಗಳೂರು ಡಯಾಗ್ನಾಸ್ಟೀಕ್ ಸೆಂಟರ್ಗೆ ಕರೆದುಕೊಂಡು ಹೋಗಿ ಫೀಸ್ ಕಟ್ಟಿಸಿ ಡಾ. ಮುರಳೀ ಪ್ರಸಾದ್ ಅನ್ನುವವನ ಮೂಲಕ ಭ್ರೂಣ ಲಿಂಗ ಪತ್ತೆಯನ್ನೂ ಮಾಡಿಸಿದ್ಲು. ನಾವು ಈ ಜಯಲಕ್ಷ್ಮಿಯನ್ನ ಪಿಸಿ ಆಂಡ್ ಪಿಎನ್ಡಿಟಿ ವಿಭಾಗದ ಉಪನಿದರ್ೇಶಕರಾದ ಡಾ.ಪ್ರಭುಗೌಡ ಅವರ ನೇತೃತ್ವದ ತಂಡದ ಜೊತೆ ಫಾಲೋ ಮಾಡುತ್ತಿದ್ವಿ. ನಮಗೆ ಲಿಂಗ ಪತ್ತೆಯ ಮಾಹಿತಿ ಗೊತ್ತಾಗಿದ್ದೇ ತಡ ಅಧಿಕಾರಿಗಳ ಜೊತೆ ಸೇರಿ ಆ ಡಯಾಗ್ನಾಸ್ಟಿಕ್ ಸೆಂಟರ್ ಮೇಲೆ ದಾಳಿ ಮಾಡಿದ್ವಿ. ಕಟು ಸತ್ಯವನ್ನು ಭೇಧಿಸಿದ್ವಿ.
ಕೋಡ್ ವಡರ್್ ಬಳಕೆ: ದಾಳಿಯ ವೇಳೆ ಗೊತ್ತಾದ ಅಚ್ಚರಿಯ ಸತ್ಯ ಏನಂದ್ರೆ ಈ ಬೆಂಗಳೂರು ಡಯಾಗ್ನಾಸ್ಟಿಕ್ ಸೆಂಟರ್ನಲ್ಲಿ ಸೋನೋಗ್ರಾಫಿ ಮಾಡುತ್ತಿದ್ದ ಮುರಳಿ ಅಸಲಿಗೆ ಡಾಕ್ಟರೇ ಅಲ್ಲ. ಆತ ಬಿಸ್ಸಿ ಪದವೀಧರ. ಆತ ಅಕ್ರಮವಾಗಿ ಸೋನೋಗ್ರಫಿ ಮಾಡುತ್ತಿದ್ದಲ್ಲದೆ ಲಿಂಗ ಪತ್ತೆಯಂಥಾ ಅಪರಾಧವನ್ನೂ ಮಾಡುತ್ತಿದ್ದ. ಈತ ಅಲ್ಟ್ರಾಸೌಂಡ್ ಮಾಡುತ್ತಿದ್ದದ್ದನ್ನು ಸಕರ್ಾರದ ಬಾಲಿಕಾ ಸಾಫ್ಟ್ವೇರ್ಗೆ ಅಪ್ಲೋಡೇ ಮಾಡ್ತಿರಲಿಲ್ಲ. ಅಲ್ಲದೆ ಈ ಸೆಂಟರ್ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದೆ. ತಿಂಗಳಿಗೆ ಸರಾಸರಿ 15 ರಿಂದ 20 ರತನಕ ಭ್ರೂಣ ಲಿಂಗ ಪತ್ತೆ ಮಾಡುತ್ತಿದೆ. ಇನ್ನೊಂದು ಕುತೂಹಲಕಾರಿ ಅಂಶ ಅಂದ್ರೆ ಇವರು ಗರ್ಭದಲ್ಲಿ ಹೆಣ್ಣಿದೆಯಾ, ಗಂಡಿದೆಯೋ ಅನ್ನೋದನ್ನ ಕೋಡ್ವಡರ್್ ಮೂಲಕ ಪೇಷೆಂಟ್ಗೆ ತಿಳಿಸುತ್ತಿದ್ರು. ಗಂಡಿದ್ದರೆ. ಪಾಸಿಟಿವ್, ಹೆಣ್ಣಿದ್ರೆ ನೆಗೆಟಿವ್. ಭ್ರೂಣ ಲಿಂಗ ಪತ್ತೆ ಈ ಮುರಳಿ ಕೃಷ್ಣ ಪಡೀತ್ತಿದ್ದುದ್ದು 3 ರಿಂದ 5 ಸಾವಿರ ರೂಪಾಯಿ.
ಈ ಡಯಾಗ್ನಸ್ಟಿಕ್ ಸೆಂಟರ್ನ ಮಾಲೀಕರಾದ ಪ್ರೇಮ ಸಂಪೂರ್ಣವಾಗಿ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿರುವುದನ್ನ ಖಚಿತಪಡಿಸಿಕೊಂಡ ಅಧಿಕಾರಿಗಳ ಈ ಸೆಂಟರ್ಗೆ ಬೀಗ ಜಡಿದ್ರು. ಅಲ್ಲದೆ ಇವರ ವಿರುದ್ಧ ಕೇಸ್ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ರು. ಆದ್ರೆ ನಮ್ಮ ಕಾಯರ್ಾಚರಣೆ ಇಲ್ಲಿಗೆ ಮುಗಿದಿಲ್ಲ. ಲಿಂಗ ಪತ್ತೆಯ ನಂತ್ರ ಅದು ಹೆಣ್ಣಾದ್ರೆ ಅದನ್ನು ಹತ್ಯೆ ಮಾಡೋ ಕಟುಕರನ್ನ ಕಂಡು ಹಿಡಿಯಲು ನಿರ್ಧರಿಸಿದ್ವಿ. ಇದೇ ಏಜೆಂಟ್ ಜಯಾಳ ಮೂಲಕ ಚೈತ್ರಾಳಿಗೆ ಕಾಲ್ ಮಾಡಿ ನೆಗೆಟಿವ್ ರಿಸಲ್ಟ್ ಬಂದಿದೆ ಅಂತ ತಿಳಿಸಿದ್ವಿ. ಫುಲ್ ಖುಷ್ ಆತ ಚೈತ್ರಾ ನಮಗೆ ಹೆಗ್ಗನಹಳ್ಳಿಯಲ್ಲಿರುವ ತನ್ನ ಮಲ್ಲಿಗೆ ಆಸ್ಪತ್ರೆಗೆ ಬರಲು ಹೇಳಿದ್ಲು. ನಾವು 5 ತಿಂಗಳ ಗಭರ್ಿಣಿಯನ್ನು ಕರೆದುಕೊಂಡು ಮಲ್ಲಿಗೆ ನಸರ್ಿಂಗ್ ಹೋಂಗೆ ತೆರಳಿದ್ವಿ.
ಅಲ್ಲಿ ಆಕೆ ಗರ್ಭಪಾತಕ್ಕೆ ಹಣ ಪಡೆದು, ಮೆಡಿಸಿನ್ ತರಿಸಿ ಪೇಷೆಂಟನ್ನು ಅಡ್ಮಿಟ್ ಮಾಡಿದ್ಲು. ಇನ್ನೇನು ಮೆಡಿಸಿನ್ ಕೊಟ್ಟು ಗರ್ಭಪಾತ ಮಾಡಬೇಕು ಅನ್ನುವಷ್ಟರ ಹೊತ್ತಿಗೆ ಅಧಿಕಾರಿಗಳ ತಂಡ ಮಲ್ಲಿಗೆ ನಸರ್ಿಂಗ್ ಹೋಂ ಮೇಲೆ ದಾಳಿ ಮಾಡಿಯೇ ಬಿಟ್ವಿ. ಆಗ ಗೊತ್ತಾಗಿದ್ದು ಮಾತ್ರ ಆ ಆಸ್ಪತ್ರೆಯ ಕರಾಳ ಸತ್ಯ. ಈ ಆಸ್ಪತ್ರೆಗೆ ಲೈಸೆನ್ಸೇ ಇಲ್ಲ. ಅಲ್ಲದೆ ಚೈತ್ರಾ ಡಾಕ್ಟರೇ ಅಲ್ಲ. ಆಕೆಯ ಪತಿ ಆಯುವರ್ೇದಿಕ್ ಡಾಕ್ಟರ್. ಆದ್ರೆ ಆತ ಪ್ರಾಕ್ಟೀಸ್ ಮಾಡ್ತಿರೋದು ಆಲೋಪತಿ. ಹಣಕ್ಕಾಗಿ ಮಾಡ್ತಿದ್ದುದ್ದು ಭ್ರೂಣಹತ್ಯೆಯಂಥಾ ಕ್ರೂರ ದಂಧೆ.
ಭ್ರೂಣ ಹತ್ಯೆ ನಡೆಸುವ ಈ ತಂಡ ಯಾವ ಕಟುಕರಿಗೂ ಕಮ್ಮಿ ಇಲ್ಲದಂತೆ ತಮ್ಮ ಕೆಲಸ ಮಾಡಿ ಮುಗಿಸುತ್ತಿದೆ. ಈ ಆಸ್ಪತ್ರೆಯಲ್ಲಿ ಅವ್ಯಾಹತವಾಗಿ ಭ್ರೂಣ ಹತ್ಯೆ ನಡೆಯುತ್ತಿದೆ. ಇದನ್ನ ಪಿ.ಸಿ.ಪಿ.ಎನ್.ಡಿ.ಟಿ ತಂಡದ ಎದುರಲ್ಲೇ ಚೈತ್ರಾ ಮತ್ತು ಆಕೆಯ ಗಂಡ ಒಪ್ಪಿಕೊಂಡ್ರು. ಈಕೆಯ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಡಾ.ಪ್ರಭುಗೌಡ ಅವರ ತಂಡ ನಮಗೆ ಭರವಸೆ ನೀಡಿತು.
ಹೈಟಿಕ್ ಆಸ್ಪತ್ರೆಗಳ ಬಳಕೆ : ಗರ್ಭಪಾತ ಮಾಡಿಸಿದರೆ ಸಾರಷ್ಟು ಹಣ ದೋಚಬಹುದು ಎಂದು ಅರಿತಿರುವ ಅಪರಾಧಿಕ ಮನೋಭಾವದ ವೃತ್ತಿ ನಿರತ ನಕಲಿ ವೈದ್ಯರು, ಪ್ಯಾರಾ ಮೆಡಿಕಲ್ಸ್ ಸಿಬ್ಬಂದಿ ಈ ಧಂದೆಯಲ್ಲಿ ಸಕ್ರೀಯರಾಗಿರುವುದು ಭಯ ಹುಟ್ಟಿಸಿದೆ. ಇಂಥ ಕೃತ್ಯದಲ್ಲಿ ಭಾಗಿಯಾಗುವ ಅಪರಾಧಿಗಳಿಗೆ ಕಡಿಮೆ ದಂಡ, ಅಲ್ಪ ಅವಧಿಯ ಜೈಲು ಶಿಕ್ಷೆ. ಶಿಕ್ಷೆಗೆ ಸಾಕ್ಷಾಧಾರದ ಕೊರತೆಯಿಂದ ಅಪರಾಧಿಗಳು ಪಾರಾಗುತ್ತಿದ್ದಾರೆ. ಹಾಗಾಗಿ ಕೊಲೆಗೆ ಸಮವಾಗಿರೋ ಈ ಪ್ರಕರಣಗಳಲ್ಲಿ ಸಿಲುಕುವವರನ್ನು ಗಂಭೀರ ಕಾಯ್ದೆ ಅಡಿ ಬಂಧಿಸ ಬೇಕೆಂಬ ಆಗ್ರಹ ರಾಜ್ಯದ ಎನ್.ಜಿ.ಓ ಗಳು ಮಾಡುತ್ತಿವೆ.
ಹೆಣ್ಣು ಭ್ರೂಣ ಹತ್ಯೆಗಳು ರಾಜ್ಯವ್ಯಾಪ್ತಿ ನಡೆಯುತ್ತಿದ್ದು ಪಿ.ಸಿ.ಪಿ.ಎನ್.ಡಿ.ಟಿ ತಂಡಗಳು ಕಾರ್ಯಚರಣೆಗಿಳಿಯಬೇಕು ಧನದಾಹಿ ಡಾಕ್ಟರಗಳು ಭ್ರೂಣ ಪತ್ತೆ ಸ್ಕಾನಿಂಗ್ನ ಹೈಟಿಕ್ ಸೆಂಟರಗಳನ್ನು ನಡೆಸುತ್ತಾ ಅಮಾಯಕ ಮಹಿಳೆಯರಿಗೆ ಮೋಸ ಮಾಡಿ ಗರ್ಭಪಾತ ಮಾಡುವ ಕೆಲಸ ಮಾಡುತ್ತಿವೆ. ಈ ಅಮಾನವೀಯ ವರ್ತನೆಗೆ ತೆರೆಬೀಳಬೇಕೆಂಬ ಸದುದ್ದೇಶದಿಂದ ವಿಜಯಟೈಮ್ಸ ಕವರಸ್ಟೋರಿ ತಂಡ ಹೆಣ್ಣು ಮಕ್ಕಳನ್ನು ಕೊಲ್ಲುವ ವೈದ್ಯಲೋಕದ ಕರಾಳ ಮುಖ ತೆರೆದಿಡುವ ಪ್ರಯತ್ನ ಮಾಡಿದೆ ಇದಕ್ಕೆ ತಮ್ಮ ಪ್ರೋತ್ಸಾಹ ಸದಾ ಇರಲಿ.
ಬೆಂಗಳೂರು ಡಯಾಶ್ನಾಸ್ಟಿಕ್ ಸೆಂಟರ್ನಲ್ಲಿ ಹೆಣ್ಣು ಬ್ರೊಣ ಹತ್ಯ ನಡೆಯುತ್ತಿರುವದು ಮೇಲ್ನೊಟಕ್ಕೆ ಸಾಬೀತಾಗಿದೆ ತಕ್ಷಣಕ್ಕೆ ಆಸ್ಪತ್ರೆ ಸೀಜ್ ಮಾಡಲಾಗಿದ್ದು ಅಪರಾಧಿಕ ಹಿನ್ನಲೆಯುಳ್ಳ ತಪ್ಪಿಸ್ಥರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವದು : ಡಾ|| ಪ್ರಭುಗೌಡ
ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಜ್ಞಾನ ನಿಯಂತ್ರಣ ಹಾಗೂ ದುರ್ಬಳಕೆ ತಡೆ ಕಾಯ್ದೆ 1996 ರಲ್ಲಿ ಜಾರಿಗೆ ಬಂದಿದೆ, 2003 ರಲ್ಲಿ ಇದಕ್ಕೆ ತಿದ್ದುಪಡಿ ತಂದು ಗರ್ಭ ಪೂರ್ವ ಮತ್ತು ಪ್ರಸವಪೂರ್ವ ಭ್ರೊಣಲಿಂಗ ಪತ್ತೆ ಹಾಗೂ ಹೆಣ್ಣು ಭ್ರೋಣ ಹತ್ಯಯನ್ನು ನಿಷೇದಿಸಲಾಗಿದೆ.
ಮಂಡ್ಯ, ಬೆಂಗಳೂರು, ಉತ್ತರ ಕನರ್ಾಟಕದ ಕೆಲ ಜಿಲ್ಲೆಗಳಲ್ಲಿ ಇಂದಿಗೂ ಲಿಂಗಪತ್ತೆ ಮತ್ತು ಭ್ರೊಣ ಹತ್ಯೆ ವ್ಯಾಪಕವಾಗಿ ನಡೆಯುತ್ತಿದೆ ಪಿ.ಸಿ.ಪಿ.ಎನ್.ಡಿ.ಟಿ ಜಾಗೃತ ದಳದವರು ಎಚ್ಚೆತ್ತುಕೊಳ್ಳಬೇಕು.