ರಾಜ್ಯದಲ್ಲಿ ಒಂದೇ ದಿನ 50,000 ದಾಟಿದ ಕೊರೊನಾ ! ಯಾವ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣ ನೋಡಿ.

covid

ಬೆಂಗಳೂರು ಜ 24 : ವೀಕೆಂಡ್‌ ಕರ್ಫ್ಯೂ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಕೊರೊನಾ ಸ್ಪೋಟಗೊಂಡಿದ್ದ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 50000 ಕೊರೊನಾ ಪಾಸಿಟಿವ್‌ ಪ್ರಕರಣಗಳು ದಾಖಲಾಗಿದೆ.

ಜಿಲ್ಲಾವಾರಿ ಕೊರೊನಾ ಪ್ರಕರಣಗಳನ್ನು ನೋಡುವುದಾದರೆ ಬೆಂಗಳೂರು ನಗರ 26,299, ಬಾಗಲಕೋಟೆ 331, ಬಳ್ಳಾರಿ 904, ಬೆಳಗಾವಿ 885, ಬೆಂಗಳೂರು ಗ್ರಾಮಾಂತರ 925, ಬೀದರ್ 368, ಚಾಮರಾಜನಗರ 664, ಚಿಕ್ಕಬಳ್ಳಾಪುರ 554, ಚಿಕ್ಕಮಗಳೂರು 144, ಚಿತ್ರದುರ್ಗ 246, ದಕ್ಷಿಣ ಕನ್ನಡ 770, ದಾವಣಗೆರೆ 495, ಧಾರವಾಡ 955, ಗದಗ 274, ಹಾಸನ 1922, ಹಾವೇರಿ 165, ಕಲಬುರ್ಗಿ 853, ಕೊಡಗು 1139, ಕೋಲಾರ 824, ಕೊಪ್ಪಳ 510, ಮಂಡ್ಯ 1455, ಮೈಸೂರು 4539, ರಾಯಚೂರು 410, ರಾಮನಗರ 199, ಶಿವಮೊಗ್ಗ 611, ತುಮಕೂರು 1963, ಉಡುಪಿ 947, ಉತ್ತರ ಕನ್ನಡ 641, ವಿಜಯಪುರ 249, ಯಾದಗಿರಿ 151. ಕೇಸ್‌ಗಳು ದಾಖಲಾಗಿವೆ.

ಹಾಗೇಯೆ ಸಾವಿನ ಸಂಖ್ಯೆ ನೋಡುವುದಾದರೆ ಬೆಂಗಳೂರು ನಗರ 8, ಶಿವಮೊಗ್ಗ, ತುಮಕೂರು ತಲಾ ಇಬ್ಬರು, ಬಳ್ಳಾರಿ, ಚಾಮರಾಜನಗರ, ದಕ್ಷಿಣ ಕನ್ನಡ, ಧಾರವಾಡ, ಮೈಸೂರು, ರಾಯಚೂರು ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ 3,57,796 ಸಕ್ರಿಯ ಪ್ರಕರಣಗಳಿದ್ದು (Positive Case), ಕೊವಿಡ್​ನಿಂದ (Covid 19) ಈವರೆಗೆ ಒಟ್ಟು 38,582 ಜನರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ಪ್ರಮಾಣ ಶೇ 22.77 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 35,17,682 ಜನರಲ್ಲಿ ಸೋಂಕು ದೃಢಪಟ್ಟಿದ್ದು, 31,21,274 ಜನರು ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಸಾಯುವವರ ಪ್ರಮಾಣ ಶೇ 0.03

Exit mobile version