ನ್ಯೂಜಿಲೆಂಡ್‌ನಿಂದ ಪಾಕಿಸ್ತಾನ ಕ್ರಿಕೆಟ್‌ಗೆ ಅವಮಾನ – ಶೋಯಬ್ ಅಖ್ತರ್

ಕರಾಚಿ ಸೆ 18 : ಭಯೋತ್ಪಾದನಾ ಭೀತಿ ಕಾರಣ ನೀಡಿ ಪಾಕಿಸ್ತಾನಕ್ಕೆ ಪ್ರವಾಸ ಬಂದಿದ್ದ ಕಿವೀಸ್ ಅಚಾನಕ್ ಸರಣಿ ರದ್ದು ಗೊಳಿಸಿತ್ತು. ನ್ಯೂಜಿಲೆಂಡ್ ಕ್ರಿಕೆಟ್‌ನ ಈ ನಿರ್ಧಾರಕ್ಕೆ ಅಖ್ತರ್ ತೀಕ್ಣವಾಗಿ ಪ್ರತಕ್ರಿಯಿಸಿದ್ದು ಪಾಕಿಸ್ತಾನ ಕ್ರಿಕೆಟ್‌ ಅನ್ನು ನ್ಯೂಜಿಲೆಂಡ್‌ ಕೊಲೆ ಮಾಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ
ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಆರಂಭಕ್ಕೆ ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಾಗ ಪಾಕಿಸ್ತಾನ ಪ್ರವಾಸವನ್ನು ನ್ಯೂಜಿಲೆಂಡ್‌ ರದ್ದು ಪಡಿಸುವ ಮೂಲಕ, ಪಾಕ್‌ ಕ್ರಿಕೆಟ್‌ನ ಕೊಲೆ ಮಾಡಿದೆ ಎಂದು ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಟೀಕಿಸಿದ್ದಾರೆ. ಸೆಪ್ಟೆಂಬರ್‌ 17ರಂದು ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ರಾವಲಪಿಂಡಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಕಿವೀಸ್‌ ತಂಡ ಹಿಂದೆ ಸರಿದ ಕಾರಣ ಇತ್ತಂಡಗಳ ನಡುವೆ ನಡೆಯಬೇಕಿದ್ದ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿ ಸಂಪೂರ್ಣವಾಗಿ ರದ್ದಾಗಿದೆ.

ಹಳೆಯ ಘಟನೆ ಮರುಕಳಿಸುವ ಭೀತಿಯಿಂದ ನ್ಯೂಜಿಲೆಂಡ್‌ ವಾಪಸ್ : 2002ರಲ್ಲಿ ಕರಾಚಿಯಲ್ಲಿ ನ್ಯೂಜಿಲೆಂಡ್‌ ತಂಡ ತಂಗಿದ್ದ ಹೋಟೆಲ್ ಸಮೀಪ ಬಾಂಬ್ ಬ್ಲಾಸ್ಟ್ ಆಗಿತ್ತು. ಅದಾಗಿ ಒಂದು ವರ್ಷದ ಬಳಿಕ ನ್ಯೂಜಿಲೆಂಡ್ ತಂಡ ಕೂಡ ಪಾಕಿಸ್ತಾನಕ್ಕೆ ಪ್ರವಾಸ ಹೋಗುವುದನ್ನೇ ನಿಲ್ಲಿಸಿತ್ತು. ಆ ಘಟನೆ ನಡೆದು ಬರೋಬ್ಬರಿ 18 ವರ್ಷಗಳ ಬಳಿಕ ಮತ್ತೆ ಕಿವೀಸ್ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. 2003ರಲ್ಲಿ ಐದು ಪಂದ್ಯಗಳ ಏಕದಿನ ಸರಣಿಗಾಗಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಹೋಗಿತ್ತು. ಅದೇ ಕೊನೇ. ಆ ಬಳಿಕ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ಹೋಗಿರಲಿಲ್ಲ.

Exit mobile version