ರಾಷ್ಟ್ರಗೀತೆಗೆ ಅಗೌರವ ತೋರಿದ ವಿರಾಟ್ ಕೊಹ್ಲಿ

virat kohli

ಟೀಮ್ ಇಂಡಿಯಾದಲ್ಲಿ ನಾಯಕತ್ವದಲ್ಲಿ ಬದಲಾವಣೆಯಲ್ಲಿ ಬೆನ್ನಲ್ಲೇ ವಿರಾಟ್‌ ಕೊಹ್ಲಿ ಅವರ ವರ್ತನೆಯೂ ಕೂಡ ಬದಲಾಗಿದೆ. ಕೆಲವು ಬದಲಾವಣೆಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿರಾಟ್ ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್‌ ಸರಣಿ ಮತ್ತು ಏಕದಿನ ಸರಣಿ ಸೋಲಿನ ಕಹಿ ಒಂದೆಡೆಯಾದರೆ ಈ ನಡುವೆ ಮೂರನೇ ಏಕದಿನ ಪಂದ್ಯಕ್ಕೂ ಮೊದಲು ಭಾರತದ ರಾಷ್ಟ್ರಗೀತೆ ಮೊಳಗುವ ವೇಳೆ ಎಲ್ಲಾ ಆಟಗಾರರು, ಸಹಸಿಬ್ಬಂದಿ ಎದ್ದುನಿಂತು ಗೌರವ ಸಲ್ಲಿಸಿ ರಾಷ್ಟ್ರಗೀತೆಗೆ ಧ್ವನಿಯಾಗಿದ್ದರು. ಈ ವೇಳೆ ಸಹ ಆಟಗಾರರ ಜೊತೆ ಸಾಲಿನಲ್ಲಿದ್ದ ಕೊಹ್ಲಿ, ರಾಷ್ಟ್ರಗೀತೆ ಹಾಡುವ ಬದಲು ಚ್ಯೂಯಿಂಗ್ ಗಮ್ ಜಗಿಯುತ್ತಿದ್ದರು. ಇದು ನೇರಪ್ರಸಾರದಲ್ಲಿ ದಾಖಲಾಗಿದೆ. ಇದೀಗ ಈ ವೀಡಿಯೋ ಸಾಕಷ್ಟು ವೈರಲ್ ಆಗಿದೆ. ಕೊಹ್ಲಿಯ ನಡೆಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ ವಿರಾಟ್ ನಾಯಕತ್ವ ತ್ಯೆಜಿಸಿದ ಮೇಲೆ ವಿರಾಟ್‌ ವರ್ತನೆಯೂ ಕೂಡ ಸಾಕಷ್ಟು ಬದಲಾವಣೆಯಾಗಿದ್ದು ಹಲವು ಹಿರಿಯ ಕ್ರಿಕೆಟಿಗರು ವಿರಾಟ್ ವರ್ತನೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ದೇಶಭಕ್ತಿಯನ್ನು ಸೂಚಿಸುವ ರಾಷ್ಟ್ರಗೀತೆ ವೇಳೆ ಡ್ಯೂಯಿಂಗ್ ಗಮ್ ಜಗಿಯುತ್ತಾ ನಿಂತಿರುವ ಈ ವ್ಯಕ್ತಿ ನಮ್ಮ ದೇಶದ ರಾಯಭಾರಿ” ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.  

Exit mobile version