ಮಡಿಕೇರಿಯಲ್ಲಿ 50 ಹಾಸಿಗೆ ಸಾಮರ್ಥ್ಯದ ತುರ್ತು ಚಿಕಿತ್ಸಾ ಘಟಕವಾದ ಕ್ರಿಟಿಕಲ್‌ ಕೇರ್‌ ಯೂನಿಟ್‌ ಆರಂಭ

Somwarpete: ಕೇಂದ್ರ ಸರಕಾರದ ಪ್ರಧಾನಮಂತ್ರಿ ಆಯುಷ್ಮಾನ್‌ ಭಾರತ್‌ ಯೋಜನೆ ಅಡಿಯ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ (critical care unit in Madikeri) ತುರ್ತು

ಚಿಕಿತ್ಸಾ ಘಟಕ (ಕ್ರಿಟಿಕಲ್‌ ಕೇರ್‌ ಯೂನಿಟ್‌) ಆಸ್ಪತ್ರೆಯನ್ನು ಆರಂಭಿಸಲಾಗುತ್ತಿದ್ದು, 29.85 ಕೋಟಿ ರೂ. ಅನುದಾನದಲ್ಲಿ ಶೀಘ್ರದಲ್ಲಿಯೇ ಘಟಕದ ಕಟ್ಟಡ ಕಾಮಗಾರಿ ಶುರುವಾಗಲಿದೆ.

ದೇಶದ 274 ಜಿಲ್ಲೆಗಳು 5 ರಿಂದ 20 ಲಕ್ಷ ಜನಸಂಖ್ಯೆ ಹೊಂದಿದ್ದು, ಈ ಭಾಗಗಳಲ್ಲಿ 50 ಬೆಡ್‌ಗಳ (Bed) ನಿರ್ಣಾಯಕ ಆರೋಗ್ಯ ಕೇಂದ್ರ ತೆರೆಯಲು ಕೇಂದ್ರ ಸರಕಾರ ನಿರ್ಧರಿಸಿದ್ದು,

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ ಕೊಡಗು ಜಿಲ್ಲೆಯ ಒಟ್ಟು ಜನಸಂಖ್ಯೆಗೆ ಅನುಗುಣವಾಗಿ 50 ಹಾಸಿಗೆಗಳ ಕ್ರಿಟಿಕಲ್‌ ಕೇರ್‌ ಸೆಂಟರ್‌ ಆರಂಭವಾಗಲಿದೆ.

ಒಟ್ಟು 4,500 ಚದರ ಅಡಿ ವಿಸ್ತೀರ್ಣದಲ್ಲಿ (critical care unit in Madikeri) ಕಟ್ಟಡ ತಲೆ ಎತ್ತಲಿದೆ.

ಕಟ್ಟಡದಲ್ಲಿ ಜೀವ ರಕ್ಷಕ ಉಪಕರಣ ಸಹಿತ ಇತರ ಮೂಲಸೌಕರ್ಯ ಸೇರಿದಂತೆ ಒಟ್ಟು 29.85 ಕೋಟಿ ರೂ. ವೆಚ್ಚ ಆಗಬಹುದು ಎಂದು ಅಂದಾಜು ಮಾಡಲಾಗಿದ್ದು, ಜಿಲ್ಲಾಆಸ್ಪತ್ರೆ ಮತ್ತು ಮೆಡಿಕಲ್‌

ಕಾಲೇಜಿನ ಅವಿಭಾಜ್ಯ ಅಂಗವಾಗಿ ಕ್ರಿಟಿಕಲ್‌ ಕೇರ್‌ ಸೆಂಟರ್‌ (Critical Care Center) ಕಾರ್ಯಾಚರಣೆ ಮಾಡಲಿದ್ದು, ಜಿಲ್ಲಾಆರೋಗ್ಯ ಸಮಿತಿ ಈ ಕೇಂದ್ರದ ಮೇಲ್ವಿಚಾರಣೆ ನಡೆಸಲಿದೆ.

ರಾಜ್ಯ ಆರೋಗ್ಯ ಇಲಾಖೆಯು ಕ್ರಿಟಿಕಲ್‌ ಕೇರ್‌ ಸೆಂಟರ್‌ ನಿರ್ಮಾಣ ಮತ್ತು ಕಾರ್ಯ ನಿರ್ವಹಣೆಯ ಜವಾಬ್ದಾರಿಗಳನ್ನು ವಹಿಸಲಿದೆ. ಕಟ್ಟಡ ನಿರ್ಮಾಣ, ಅಗ್ನಿಶಾಮಕ ದಳದ ನಿರಾಕ್ಷೇಪಣಾ ಪತ್ರ, ಉದ್ದೇಶಿತ

ಕಟ್ಟಡಕ್ಕೆ ಭೂಮಿ ನೀಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ವಹಿಸಲಿದ್ದು, ಜಿಲ್ಲಾಸ್ಪತ್ರೆ, ಮೆಡಿಕಲ್‌ ಕಾಲೇಜು (Medical College) ಹೊಂದಿಕೊಂಡಂತೆ ಈ ಕ್ರಿಟಿಕಲ್‌ ಕೇರ್‌ ಸೆಂಟರ್‌ ನಿರ್ಮಾಣವಾಗಲಿದೆ.

ಉದ್ದೇಶಿತ ಕಟ್ಟಡದ ನೀಲ ನಕ್ಷೆ ಮತ್ತು ಮೂಲ ಸೌಕರ್ಯಗಳಿಗೆ ರಾಜ್ಯ ಸರ್ಕಾರವೇ ಕೇಂದ್ರ ಸರ್ಕಾರಕ್ಕೆ ವಿಸ್ತೃತ ಯೋಜನಾ ಪಟ್ಟಿಯನ್ನು ಸಲ್ಲಿಸಬೇಕಾಗಿದ್ದು ಜನಸಂಖ್ಯೆಯನ್ನು ಆಧರಿಸಿ 50, 75 ಹಾಗೂ

ಗರಿಷ್ಠ 100 ಬೆಡ್‌ಗಳ ನಿರ್ಣಾಯಕ ಆರೋಗ್ಯ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಸಂಸದ ಪ್ರತಾಪ್‌ ಸಿಂಹ ಅವರು ಕ್ರಿಟಿಕಲ್‌ ಕೇರ್‌ ಯೂನಿಟ್‌ ಆಸ್ಪತ್ರೆ ನಿರ್ಮಾಣ ಸಂಬಂಧ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾಮಗಾರಿ ಶೀಘ್ರ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇದನ್ನು ಓದಿ: ಪ್ರತಿನಿತ್ಯ 5000 ಕ್ಯುಸೆಕ್ ನೀರು ಬಿಡುವಂತೆ ಪ್ರಾಧಿಕಾರಕ್ಕೆ ಒತ್ತಾಯ : ತಮಿಳುನಾಡು ಸರ್ಕಾರ ತೀರ್ಮಾನ

Exit mobile version