Chennai: ರಾಜ್ಯದಲ್ಲಿ ಕಾವೇರಿ ಕಿಚ್ಚು ಕಾವೇರಿದ್ದು, ಬಂದ್ ಬಿಸಿ ಜೋರಾಗಿರುವ ಬೆನ್ನಲ್ಲೇ ಇಂದು (ಸೆ.29) ಶುಕ್ರವಾರ ಕೂಡಾ ಕಾವೇರಿ ನದಿ (Karnataka vs Tamilnadu) ನೀರು ನಿರ್ವಹಣಾ
ಪ್ರಾಧಿಕಾರದ ಸಭೆ ನಡೆಯಲಿದೆ. ಈ ಸಭೆಯ ವೇಳೆ ಪ್ರತಿ ದಿನ 5 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆದೇಶಿಸಲು ಪ್ರಾಧಿಕಾರಕ್ಕೆ ಒತ್ತಾಯ ಹೇರಲು ತಮಿಳುನಾಡು (Tamilnadu) ಸರ್ಕಾರ ತೀರ್ಮಾನಿಸಿದೆ.

ಕಾವೇರಿ (Kaveri) ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವ ಕರ್ನಾಟಕ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಕರ್ನಾಟಕ ಬಂದ್ (Karnataka Bandh) ಕೂಡಾ
ಆಚರಿಸಲಾಗುತ್ತಿದೆ. ಈ ನಡುವೆ, ಕಾವೇರಿ ನದಿಯಿಂದ ಮತ್ತೆ 5 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಒತ್ತಾಯ ಮಾಡುವುದಾಗಿ ತಮಿಳುನಾಡಿನ ಜಲ ಸಂಪನ್ಮೂಲ ಸಚಿವ
ದುರೈಮುರುಗನ್ (Durai Murugan) ಹೇಳಿದ್ದಾರೆ.
ಈ ವಿಚಾರವಾಗಿ ಸುಪ್ರೀಂ ಕೋರ್ಟ್ (Supreme Court) ಮೊರೆ ಹೋಗೋದಾಗಿ ಹೇಳಿರುವ ದುರೈಮುರುಗನ್, ಕರ್ನಾಟಕಕ್ಕೆ ನೀರು ಬಿಡುವಂತೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್ಗೆ ಮನವಿ
ಸಲ್ಲಿಸುವುದಾಗಿ ತಿಳಿಸಿದ್ದಾರೆ. ಕಳೆದ ಮಂಗಳವಾರವಷ್ಟೇ ಹೊಸ ದಿಲ್ಲಿಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕ ಸರ್ಕಾರಕ್ಕೆ ಪ್ರತಿ ದಿನ 3 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ
ಹರಿಸುವಂತೆ (Karnataka vs Tamilnadu) ಹೇಳಿತ್ತು.
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ (October) 15ರ ಅವಧಿಯಲ್ಲಿ ಪ್ರತಿ ದಿನ 3 ಸಾವಿರ ಕ್ಯುಸೆಕ್ ನೀರು ಹರಿಸಬೇಕು ಎಂದು ಆದೇಶ ಹೊರಡಿಸಿತ್ತು. ವಿಪರ್ಯಾಸವೆಂದರೆ ಅದೇ ದಿನ ಬೆಂಗಳೂರು ಬಂದ್
(Bengaluru Bandh) ಕೂಡ ಇತ್ತು ಆದರೆ ಬೆಂಗಳೂರು ಬಂದ್ ಆಗಿದ್ದ ದಿನವೇ ಕಾವೇರಿ ನೀರು ನಿರ್ವಹಣಾ ಸಮಿತಿ ಕರ್ನಾಟಕ ಸರ್ಕಾರಕ್ಕೆ ಮತ್ತಷ್ಟು ಕಾವೇರಿ ನೀರು ಹರಿಸುವಂತೆ ಆದೇಶ ಹೊರಡಿಸಿತ್ತು.

ಇಂದು (ಸೆ.29 ಶುಕ್ರವಾರ) ಕರ್ನಾಟಕ ಬಂದ್ ನಡೆಯುತ್ತಿದ್ದು, ಇದೇ ದಿನ ದೆಹಲಿಯಲ್ಲಿ ಕಾವೇರಿ (Kaveri) ನೀರು ನಿರ್ವಹಣಾ ಪ್ರಾಧಿಕಾರದ ಮತ್ತೊಂದು ಸಭೆ ಕೂಡಾ ನಡೆಯಲಿದೆ. ಈ ಸಭೆಯಲ್ಲಿ
ಕರ್ನಾಟಕ ಸರ್ಕಾರವು ಸಮಿತಿ ಮುಂದೆ ತನ್ನ ಬಲವಾದ ವಾದ ಮಂಡಿಸಲು ತೀರ್ಮಾನಿಸಿದ್ದು, 18 ದಿನಗಳ ಕಾಲ ಪ್ರತಿ ದಿನ 3 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಮಾಡಿರುವ ಆದೇಶದ ವಿರುದ್ಧ
ಕಾನೂನು ಹೋರಾಟ ತೀವ್ರಗೊಳಿಸಲು ನಿರ್ಧರಿಸಿದೆ. ಈ ಸಂಬಂಧ ಹಿರಿಯ ವಕೀಲರು ಹಾಗೂ ಕಾನೂನು ತಜ್ಞರ ಜೊತೆ ಸಿಎಂ ಸಿದ್ದರಾಮಯ್ಯ (C M Siddaramaiah) ಸಭೆ ನಡೆಸಿದ್ದಾರೆ.
ತಮಿಳುನಾಡು ಸರ್ಕಾರ ಈ ಎಲ್ಲಾ ಬೆಳವಣಿಗೆಗಳ ನಡುವೆ ಹೆಚ್ಚುವರಿ ನೀರಿಗಾಗಿ ಮತ್ತೆ ಬೇಡಿಕೆ ಮಂಡಿಸಲು ತೀರ್ಮಾನಿಸಿದ್ದು, ಕರ್ನಾಟಕಕ್ಕೆ ಸವಾಲಾಗಿದೆ. ಸದ್ಯ ಪ್ರತಿ ದಿನ 3 ಸಾವಿರ ಕ್ಯುಸೆಕ್
ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದ್ದು, ಈ ಪ್ರಮಾಣವನ್ನು 5 ಸಾವಿರ ಕ್ಯುಸೆಕ್ಗೆ ಏರಿಕೆ ಮಾಡುವಂತೆ ತಮಿಳುನಾಡು ಒತ್ತಾಯ ಹೇರಲು ನಿರ್ಧರಿಸಿದೆ
ಎಂದು ತಮಿಳುನಾಡಿನ ಜಲ ಸಂಪನ್ಮೂಲ ಸಚಿವ ದುರೈಮುರುಗನ್ ತಿಳಿಸಿದ್ದಾರೆ.
ಒಂದು ವೇಳೆ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸುವಂತೆ ಆದೇಶ ಹೊರಡಿಸಿದರೆ ಕರ್ನಾಟಕ ರಾಜ್ಯದಲ್ಲಿ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಗಂಭೀರತೆ
ಅರಿತಿರುವ ಸಿಎಂ ಸಿದ್ದರಾಮಯ್ಯ ಅವರು ಕಾನೂನು ತಜ್ಞರ ಅಭಿಪ್ರಾಯ ಪಡೆದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು
ಅಗತ್ಯ ಹೋರಾಟ ನಡೆಸಲಿದೆ ಅನ್ನೋ ಮಾಹಿತಿ ದೊರೆತಿದೆ.
ಇದನ್ನು ಓದಿ: ಬಂದ್ ಮಾಡುವುದರಿಂದ ಉಪಯೋಗವಿಲ್ಲ, ರಾಜ್ಯದ ಹಿತ ಕಾಪಾಡಬೇಕು ಪ್ರತಿಭಟನಕಾರರಿಗೆ ಗೃಹ ಸಚಿವ ಪರಮೇಶ್ವರ್ ಮನವಿ
- ಭವ್ಯಶ್ರೀ ಆರ್.ಜೆ