ಎಲ್ಲ ಬೆಲೆಗಳನ್ನ ಹೆಚ್ಚಿಸಿ ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ʼಸಿದ್ರಾಮಿಕ್ಸ್ʼ – ಸಿಟಿ ರವಿ ಟೀಕೆ

Bangalore : ಸಿದ್ದರಾಮಯ್ಯ (CT Ravi criticizes siddu GOVT) ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅನೇಕ ವಸ್ತುಗಳ ಬೆಲೆ

(Cost of goods) ಹೆಚ್ಚಾಗಿದೆ.ಮುದ್ರಾಂಕ ಶುಲ್ಕ ಹೆಚ್ಚಾಗಿದೆ (Stamp duty) , ಅಬಕಾರಿಗೆ ತೆರಿಗೆ ಹೆಚ್ಚಿಸಲಾಗಿದೆ, ರೈತರಿಗೆ (Farmers) ಉಚಿತವಾಗಿ ನೀಡುತ್ತಿದ್ದ ವಿದ್ಯುತ್ ಟ್ರಾನ್ಸ್ಫರ್ಮರ್ಗಳಿಗೆ ಶುಲ್ಕ

(Charges for power transformers) ವಿಧಿಸಲಾಗುತ್ತಿದೆ, ವ್ಯಾಪಾರಿಗಳಿಗೆ ವಿದ್ಯುತ್ ಶುಲ್ಕ ಹೆಚ್ಚಿಸಲಾಗಿದೆ, ಬಸ್ ದರ ಹೆಚ್ಚಿಸಲಾಗಿದೆ. ಹೀಗೆ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಒಂದು

ಕಡೆ ಬೆಲೆಗಳನ್ನು ಹೆಚ್ಚಿಸಿ, ಗಂಡನಿಂದ ಕಿತ್ತುಕೊಂಡು, ಹೆಂಡತಿಗೆ ಕೊಡುವುದೇ ಸಿದ್ರಾಮಿಕ್ಸ್ ಎಂದು ಬಿಜೆಪಿ (BJP) ನಾಯಕ ಸಿಟಿ ರವಿ (C T Ravi) ಟೀಕಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ (Siddaramaiah Govt) ಅಧಿಕಾರಕ್ಕೆ ಬಂದ ನಂತರ ಒಂದು ಕಡೆಯಿಂದ ಕಿತ್ತುಕೊಂಡು,

ಇನ್ನೊಂದು ಕಡೆ ಕೊಡುತ್ತಿದ್ದಾರೆ. ಇದನ್ನೇ ಅಭಿವೃದ್ದಿ (Development) ಎಂದು ಹೇಳುತ್ತಿದ್ದಾರೆ. ಇನ್ನೊಂದು ವರ್ಷ ಕಳೆದರೆ, ಕಾಂಗ್ರೆಸ್ ಸರ್ಕಾರದ ಶಾಸಕರೇ ಅನುದಾನವಿಲ್ಲದೇ, ಯಾವುದೇ ಅಭಿವೃದ್ದಿ

ಕಾರ್ಯ ಮಾಡಲಾಗದೇ, ಪಕ್ಷವನ್ನು ಬಿಟ್ಟು ಹೊರಗೆ ಬರುತ್ತಾರೆ. ಈಗಾಗಲೇ ಅನೇಕ ಕಾಂಗ್ರೆಸ್ (Congress) ಶಾಸಕರು ಅಭಿವೃದ್ದಿ ಕಾರ್ಯಗಳಿಗೆ ಅನುದಾನವಿಲ್ಲದೇ ಪರಿತಪಿಸುತ್ತಿದ್ದಾರೆ.

ಆದರೆ ಮೋದಿ ಸರ್ಕಾರ (Modi Government) ನೀಡುವ ಗ್ಯಾರಂಟಿ, ಜನರ ಬದುಕನ್ನು ರೂಪಿಸುತ್ತದೆ, ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸುತ್ತದೆ, ಬಡವರಿಗೆ ಶಕ್ತಿ ತುಂಬುತ್ತದೆ,

ಯುವಕರಲ್ಲಿ ಭರವಸೆ (CT Ravi criticizes siddu GOVT) ಮೂಡಿಸುತ್ತದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ (BJP) 28 ಸ್ಥಾನ : ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ (BJP JDS) ಮೈತ್ರಿಕೂಟ ಈ ಬಾರಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಲಿದೆ. ಈ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ.

ದೇಶದ ಜನರು ಮೋದಿ ಅವರ ಜನಪರ ಯೋಜನೆಗಳು, ಪ್ರಾಮಾಣಿಕತೆ, ಸದೃಢ ನಾಯಕತ್ವ, ಅವರ ದೂರದೃಷ್ಟಿ ಯೋಚನೆಗಳನ್ನು ನೋಡಿ ಮತಚಲಾಯಿಸುತ್ತಾರೆ. ನರೇಂದ್ರ ಮೋದಿ (Narendra Modi)

ಅವರ ನಾಯಕತ್ವದಲ್ಲಿ ಭಾರತ ಸದೃಡವಾಗಿ ಮುನ್ನಡೆಯಲಿದೆ. ದೇಶದ ಜನತೆಗೆ ಕಾಂಗ್ರೆಸ್ (Congress) ನೇತೃತ್ವದ ಕಿಚಡಿ ಸರ್ಕಾರ ಬೇಕಿಲ್ಲ. ಇಂಡಿಯಾ ಮೈತ್ರಿಕೂಟದಲ್ಲಿ ಯಾರು ಪ್ರಧಾನಿಯಾಗುತ್ತಾರೆ,

ದೇಶವನ್ನು ಯಾರು ಮುನ್ನಡೆಸುತ್ತಾರೆ ಎಂಬ ಸ್ಪಷ್ಟತೆಯೇ ಇಲ್ಲ. ಹೀಗಾಗಿ ದೇಶದ ಮತದಾರರು ಈ ಬಾರಿಯೂ ಮೋದಿ ಅವರ ನಾಯಮಕತ್ವಕ್ಕೆ ಮತಚಲಾಯಿಸುತ್ತಾರೆ ಎಂದು ಸಿಟಿ ರವಿ (C T Ravi)

ಅವರು ಭವಿಷ್ಯ ನುಡಿದಿದ್ದಾರೆ.

ಇದನ್ನು ಓದಿ; ಮೋದಿ ಅಲೆ ಎದುರಿಸಲು ವಿರೋಧಿಗಳಿಗೂ ಶರಣೆಂದ ಸಿಎಂ ಸಿದ್ದರಾಮಯ್ಯ

Exit mobile version