ಅಪ್ಪನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಹೀಗೆ: ಯತೀಂದ್ರ ವಿರುದ್ದ ಸಿ.ಟಿ.ರವಿ ಕಿಡಿ

Bengaluru: ಅಪ್ಪನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಹೀಗೆ. ಯತೀಂದ್ರ (CT Ravi Slams Yathindra) ಎಂದಾದ್ರೂ ಪಕ್ಷದ ಕೆಲಸ ಮಾಡಿದ್ದಾರಾ? ಕೇವಲ ಅಪ್ಪನ ಅಧಿಕಾರ, ಹಣ ಬಲದ ಮೇಲೆ

ಸಾರ್ವಜನಿಕ ಕ್ಷೇತ್ರಕ್ಕೆ ಬಂದವರಿಗೆ ಕೆಳ ಹಂತದಿಂದ ಬೆಳೆದು ಬಂದ ರಾಷ್ಟ್ರೀಯ ನಾಯಕರ ಬಗ್ಗೆ ತಿಳಿಯುವುದಾದರೂ ಹೇಗೆ ಸಾಧ್ಯ? ಎಂದು ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ

ಗೃಹ ಸಚಿವ \ಅಮಿತ್ ಶಾ (Amit Shah) ಬಗ್ಗೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ (BJP-JDS) ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಪ್ಪನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಹೀಗೆ. ಯತೀಂದ್ರ ಎಂದಾದ್ರೂ

ಪಕ್ಷದ ಕೆಲಸ ಮಾಡಿದ್ದಾರಾ? ಅಮಿತ್ ಶಾ1982ರಲ್ಲಿ ಬೂತ್ ಅಧ್ಯಕ್ಷ ಆಗಿದ್ದರು. ಆಗ ಇವರಪ್ಪ ಇನ್ನೂ ಎಂಎಲ್ಎ (MLA) ಕೂಡ ಆಗಿರಲಿಲ್ಲ. ಕೇವಲ ಅಪ್ಪನ ಅಧಿಕಾರ, ಹಣ ಬಲದ ಮೇಲೆ ಸಾರ್ವಜನಿಕ ಕ್ಷೇತ್ರಕ್ಕೆ

ಬಂದವರಿಗೆ ಕೆಳ ಹಂತದಿಂದ ಬೆಳೆದು ಬಂದ ರಾಷ್ಟ್ರೀಯ ನಾಯಕರ ಬಗ್ಗೆ ತಿಳಿಯುವುದಾದರೂ ಹೇಗೆ ಸಾಧ್ಯ? ಯತೀಂದ್ರ ಸಿದ್ದರಾಮಯ್ಯ ಯಾರು? ಯತೀಂದ್ರ ಅವರ ಐಡೆಂಟಿಟಿಯಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

ಇನ್ನು ವಿಪಕ್ಷ ನಾಯಕ ಆರ್. ಅಶೋಕ (R Ashok), ಬಿಜೆಪಿ ರಾಷ್ಟ್ರೀಯ ನಾಯಕರ ಬಗ್ಗೆ ಅವಾಚ್ಯವಾಗಿ ಮಾತನಾಡಿ ಪ್ರಸಿದ್ಧಿ ಪಡೆಯಬೇಕೆನ್ನುವ ಹುಚ್ಚು ಯತೀಂದ್ರ ಸಿದ್ದರಾಮಯ್ಯ ಅವರಲ್ಲಿದೆ. ಯತಿಂದ್ರ

ಸಿದ್ದರಾಮಯ್ಯ ಅವರು ಮಾತನಾಡುವಾಗ ತಮ್ಮ ಮಾತಿನಲ್ಲಿ ಹಿಡಿತವಿಟ್ಟುಕೊಂಡು ಎಚ್ಚರಿಕೆಯಿಂದ ಮಾತನಾಡಬೇಕು, ಇಲ್ಲದಿದ್ದರೆ ಇವರಿಗೂ ರಾಹುಲ್ ಗಾಂಧಿ (Rahul Gandhi)ಯಂತೆ ಜೈಲಿನ

ಕಟ-ಕಟೆ ನಿಶ್ಚಿತ. “ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವ” ಎಂಬಂತೆ ಹೇಗಾದರೂ ಮಾಡಿ ಬಿಜೆಪಿಯ ರಾಷ್ಟ್ರೀಯ ನಾಯಕರ ವಿರುದ್ಧ ಮಾತನಾಡಿದರೆ ರಾತ್ರೋರಾತ್ರಿ ದೊಡ್ಡ ನಾಯಕ ಆಗಬಹುದು

ಎನ್ನುವ ಭ್ರಮೆಯಲ್ಲಿ ಮುಖ್ಯಮಂತ್ರಿಗಳ (CT Ravi Slams Yathindra) ಸುಪುತ್ರ ಯತೀಂದ್ರ ಇದ್ದಂತಿದೆ.

ಲೋಕಸಭೆ ಚುನಾವಣೆ ಎದುರಿಸಲು ಯಾವುದೇ ವಿಷಯವಿಲ್ಲದೆ ತಮ್ಮ ತವರು ಜಿಲ್ಲೆ ಮೈಸೂರಿನಲ್ಲೇ (Mysore) ಹೀನಾಯ ಸೋಲಾಗುವ ಹತಾಶೆಯಿಂದ ಸಿಎಂ ಸಿದ್ದರಾಮಯ್ಯ (CM Siddaramaiah)

ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮತಿಭ್ರಮಣೆ ಆದಂತಿದ್ದು ಹುಚ್ಚಾಪಟ್ಟೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಓದಿ: ತೆರಿಗೆ ಇಲಾಖೆ ಬಳಸಿ ಬಿಜೆಪಿ ಬೇರೆ ಪಕ್ಷದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್

Exit mobile version