Banglore: SSLC ಪರೀಕ್ಷೆ-1(SSLC Exam) ರ ಫಲಿತಾಂಶ(Result ) ಇಂದು ಪ್ರಕಟಗೊಂಡಿದ್ದು, ಒಟ್ಟಾರೆಯಾಗಿ ಶೇಕಡಾ 73.40ರಷ್ಟು (73.40 percent) ಫಲಿತಾಂಶ ಬಂದಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಬಾಲಕಿಯರೇ (Girls) ಮೇಲುಗೈ ಸಾಧಿಸಿದ್ದಾರೆ. ಕರ್ನಾಟಕ ಶಾಲಾ (Karnataka School) ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ (Manju Shree) ಅವರು ಫಲಿತಾಂಶ ಪ್ರಕಟಿಸಿದ್ದು, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ (Ritish Singh) ಉಪಸ್ಥಿತರಿದ್ದರು.

ರಾಜ್ಯದ ಎಸ್ಎಸ್ಎಲ್ಸಿ(SSLC) ಪರೀಕ್ಷೆಯಲ್ಲಿ ಒಟ್ಟು 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರ ಪೈಕಿ ಬಾಲಕರು – 2,87,416 ಶೇಕಡಾ 65.90ರಷ್ಟು ಮತ್ತು ಬಾಲಕಿಯರು – 3,43,788 ಶೇಕಡಾ 81.11ರಷ್ಟು ಉತ್ತೀರ್ಣರಾಗಿದ್ದಾರೆ.
ಜಿಲ್ಲಾವಾರು (District wise) ಶೇಕಡಾ 94ರಷ್ಟು ಫಲಿತಾಂಶದೊಂದಿಗೆ (Result) ಉಡುಪಿ (Udupi) ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣಕನ್ನಡ (Dakshina Kannada) ಹಾಗೂ ಶಿವಮೊಗ್ಗ (Shimoga) ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಇನ್ನು ಯಾದಗಿರಿ ಜಿಲ್ಲೆ ಶೇಕಡಾ 50.59ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. 2022-23ನೇ ಸಾಲಿನಲ್ಲಿ ಶೇಕಡಾ 83.89ರಷ್ಟು ಫಲಿತಾಂಶ ದಾಖಲಾಗಿತ್ತು. ಆದರೆ ಈ ಬಾರಿ 73.40% ಫಲಿತಾಂಶ ಬಂದಿದೆ. ಈ ಬಾರಿ ಫಲಿತಾಂಶದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ.
100% ಫಲಿತಾಂಶ ವಿವರ
ಸರ್ಕಾರಿ – 785
ಅನುದಾನ – 206
ಖಾಸಗಿ ಶಾಲೆ – 1297
ಒಟ್ಟು – 2288
ಶೂನ್ಯ ಸಾಧನೆ ಶಾಲೆಗಳು
ಸರ್ಕಾರಿ – 3
ಅನುದಾನ – 13
ಖಾಸಗಿ – 62
ಒಟ್ಟು – 78