ಇಸ್ಲಾಂ ಹುಟ್ಟುವ ಸಾವಿರಾರೂ ವರ್ಷಗಳ ಹಿಂದೆಯೇ ಚಂದ್ರದ್ರೋಣ ಪರ್ವತದಲ್ಲಿ ದತ್ತಪೀಠವಿತ್ತು : ಸಿಟಿ ರವಿ

Chikkamagaluru : ಇಸ್ಲಾಂ ಧರ್ಮ ಹುಟ್ಟುವುದಕ್ಕೂ ಸಾವಿರಾರೂ ವರ್ಷಗಳ ಹಿಂದೆಯೇ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ದತ್ತಪೀಠವಿತ್ತು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(ct ravi statement about dattapeeta) ಹೇಳಿದ್ದಾರೆ.ಚಿಕ್ಕಮಗಳೂರಿನಲ್ಲಿ ನಡೆದ ದತ್ತಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಇಸ್ಲಾಂ ಧರ್ಮ ಹುಟ್ಟುವದಕ್ಕೂ ಸಾವಿರಾರೂ ವರ್ಷಗಳ ಹಿಂದೆಯೇ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ದತ್ತಪೀಠವಿತ್ತು. ಬಾಬಾ ಬುಡನ್‌ದರ್ಗಾವೇ ಬೇರೆ, ದತ್ತ ಪೀಠವೇ ಬೇರೆ. ಈ ಕುರಿತು ವಾಸ್ತವಿಕ ಸತ್ಯವನ್ನು ಕಂಡು ಹಿಡಿಯಲು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ct ravi statement about dattapeeta) ಅವರ ಬಳಿ ನಿಯೋಗವೊಂದನ್ನು ತೆಗೆದುಕೊಂಡು ಹೋಗಲಾಗುವುದು ಎಂದು ಸಿಟಿ ರವಿ ಹೇಳಿದರು.

ದತ್ತ ಪೀಠದ ವಿವಾದದ ಕುರಿತು ಮುಖ್ಯಮಂತ್ರಿಗಳು, ಕಂದಾಯ ಸಚಿವರು ಮತ್ತು ಮುಜರಾಯಿ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇನೆ. ಸರ್ಕಾರದ ಪ್ರತಿಕ್ರಿಯೆಯನ್ನು ನೋಡಿ, ಕಾನೂನು ಹೋರಾಟವನ್ನೂ ಮುಂದುವರಿಸುತ್ತೇವೆ. ದತ್ತಪೀಠದ (dattapeeta) ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.

ಇದನ್ನೂ ಓದಿ : https://vijayatimes.com/congress-tweet-bjp/

ದತ್ತಪೀಠಕ್ಕೆ ಹಿಂದೂ ಅರ್ಚಕರನ್ನ ನೇಮಿಸಿರುವುದು ಭಕ್ತಾದಿಗಳಲ್ಲಿ ಸಂತೋಷ ಉಂಟುಮಾಡಿದೆ. ಭಕ್ತರ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ.

ದತ್ತಪೀಠದ ಗುಹೆಯೊಳಗೆ ಅರ್ಚಕರು ಪ್ರಾಣ ಪ್ರತಿಷ್ಠೆ, ಗಣಪತಿ ಹೋಮ ಮಾಡಿ ಪೂಜೆ ಸಲ್ಲಿಸಿದ್ದಾರೆ. ಈ ಬಾರಿ ನಡೆದ ಶೋಭಾಯಾತ್ರೆ ಕೂಡ ಹಿಂದಿನ ಎಲ್ಲಾ ದಾಖಲೆಗಳನ್ನ ಮೀರಿ ವೈಭವೋಪೇತವಾಗಿ ನಡೆದಿದೆ.

ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆದಿವೆ. ದತ್ತಾತ್ರೇಯ ಕೃಪೆ ನಮ್ಮೆಲ್ಲರ ಮೇಲಿದೆ ಎಂದು ಸಿಟಿ ರವಿ ಹೇಳಿದರು. ಇನ್ನು ಬಾಬಾ ಬುಡನ್ ದರ್ಗಾವು ಜಾಗರ ಹೋಬಳಿಯ ನಾಗೇನಹಳ್ಳಿ ಗ್ರಾಮದ ಸರ್ವೇ ನಂ.57 ರಲ್ಲಿದೆ. ದತ್ತಪೀಠ ಕ್ಷೇತ್ರ ಜಾಗರ ಹೋಬಳಿ ಇನಾಂ ದತ್ತಾತ್ರೇಯ ಪೀಠದ ಸರ್ವೇ ನಂ.195 ರಲ್ಲಿದೆ.

ಇದನ್ನೂ ನೋಡಿ : https://vijayatimes.com/covid-guidelines-published/

ಈ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದು ಸಿಟಿ ರವಿಯವರು ಆಗ್ರಹಿಸಿದರು. ಈ ಕುರಿತು ಬಿಜೆಪಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ
Exit mobile version