ಸೀತಾಫಲ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನೆಗಳು..!

Custard Apple Benefits : ಅನೇಕರಿಗೆ ಸೀತಾಫಲ ಹಣ್ಣು ತಿನ್ನುವುದರಿಂದಾಗುವ ಪ್ರಯೋಜನಗಳ ಬಗ್ಗೆ ಗೊತ್ತಿಲ್ಲ. ತಿನ್ನಲು ಕಷ್ಟ ಎಂಬ ಕಾರಣದಿಂದಲೇ ಅನೇಕರು ಈ ಹಣ್ಣನು ಖರೀದಿಸುವುದಿಲ್ಲ.

ಆದರೆ ಸೀತಾಫಲ ಹಣ್ಣು ಹಲವು ಆರೋಗ್ಯಕರ ಲಾಭಗಳನ್ನು ತಂದು (custard apple benefits) ಕೊಡುತ್ತದೆ. ಅದರ ವಿವರ ಇಲ್ಲಿದೆ ನೋಡಿ.

– ಸೀತಾಫಲ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ 6, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಆಂಟಿಆಕ್ಸಿಡೆಂಟ್ಗಳಿವೆ. ಇದರಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸರಳಗೊಳಿಸುತ್ತದೆ.

– ಸೀತಾಫಲದಲ್ಲಿ ವಿಶೇಷವಾಗಿ ವಿಟಮಿನ್ B6 ಇದೆ. ಈ ವಿಟಮಿನ್ ಮೆದುಳಿಗೆ ಅಗತ್ಯವಾದ ನ್ಯೂರೋಟ್ರಾನ್ಸ್ ಮಿಟರ್ ಕೊಂಡೊಯ್ಯುವ ಡೋಪಮೈನ್ ಮತ್ತು ಸೆರೆಟೋನಿನ್ ಉತ್ಪಾದನೆಗೆ ಅಗತ್ಯವಾಗಿದೆ.

ಈ ರಸದೂತಗಳು ನಮ್ಮ ಮನೋಭಾವನೆಯ ಮೇಲೆ ಪ್ರಭಾವ ಬೀರುತ್ತವೆ.

ಇದನ್ನು ಓದಿ: ಮತ್ತೊಂದು ಆರ್ಥಿಕ ಸಂಕಷ್ಟದಲ್ಲಿ ಬೈಜೂಸ್‌ ! ನಷ್ಟ ಸರಿದೂಗಿಸಲು ಬೆಂಗಳೂರಿನ ದೊಡ್ಡ ಕಚೇರಿ ಖಾಲಿ ಮಾಡಿದ ಕಂಪೆನಿ

– ದೀರ್ಘಕಾಲದ ಹುಣ್ಣುಗಳಿಂದ ಬಳಲುತ್ತಿರುವವರು ಸೀತಾಫಲ ತಿಂದರೆ ಬೇಗ ಗುಣಮುಖರಾಗುತ್ತಾರೆ.

– ಸೀತಾಫಲ ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತಹೀನತೆ ಇರುವವರು ಮತ್ತು ಗರ್ಭಾವಸ್ಥೆಯಲ್ಲಿ ಹಿಮೋಗ್ಲೋಬಿನ್ ಕೊರತೆಯನ್ನು ಎದುರಿಸುವ ಮಹಿಳೆಯರು ಈ ಸೀತಾಫಲವನ್ನ ಸೇವಿಸಬೇಕು.

– ಸೀತಾಫಲ ಹಣ್ಣಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು. ಇದು ಬೊಜ್ಜನ್ನು ತಡೆಗಟ್ಟುತ್ತದೆ.

– ಅಸಿಡಿಟಿ ಸಮಸ್ಯೆ ಇರುವವರು ಕೂಡ ಈ ಹಣ್ಣನ್ನು ತಿನ್ನಬಹುದು. ಸೀತಾಫಲ ನಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆಗಳನ್ನು ಉತ್ತೇಜಿಸುತ್ತದೆ. ಇದು ನಮ್ಮ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.

– ಸೀತಾಫಲದಲ್ಲಿರುವ ವಿಟಮಿನ್ ಸಿ ಇದ್ದು, ಇದು ಕ್ಯಾನ್ಸರ್ ಕಾರಕ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ಆರೋಗ್ಯಕರ ಮತ್ತು ಕಾಂತಿಯುಕ್ತ ಹಾಗೂ ಕಲೆಯಿಲ್ಲದ ತ್ವಚೆಯನ್ನು ಪಡೆಯಲು ನೆರವಾಗುತ್ತದೆ.

– ಸೀತಾಫಲ ತಿನ್ನುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಹೃದಯದ ಆರೋಗ್ಯ ಮತ್ತು ಮೆದುಳಿನ ಆರೋಗ್ಯಕ್ಕೂ ಉತ್ತಮವಾಗಿದೆ.

– ಈ ಹಣ್ಣಿನಲ್ಲಿ ಮೈಕ್ರೊನ್ಯೂಟ್ರಿಯೆಂಟ್ಗಳು ಹೇರಳವಾಗಿದ್ದು, ತ್ವಚೆಯ ಅಂದವನ್ನು ಹೆಚ್ಚಿಸುತ್ತದೆ. ಚಿಕ್ಕ ವಯಸ್ಸಿನಲ್ಲೇ ಕಣ್ಣಿನ ಸಮಸ್ಯೆ ಇರುವ ಮಕ್ಕಳಿಗೆ ಈ ಹಣ್ಣನ್ನು ನೀಡಬಹುದು.

– ಸೀತಾಫಲ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ಅದೇ ರೀತಿ ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ಸೀತಾಫಲ ಹಣ್ಣನ್ನು ತಿನ್ನುವುದರಿಂದ ಪರಿಹಾರವನ್ನು ಪಡೆಯಬಹುದು.

Exit mobile version