ರಿಷಬ್ ಶೆಟ್ಟಿಗೆ ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಅವಾರ್ಡ್‌..!

Bengaluru: ಡಿವೈನ್ ಸ್ಟಾರ್ (Divine Star) ರಿಷಬ್ ಶೆಟ್ಟಿ (Rishab Shetty) ಅವರು ದಾದಾ ಸಾಹೇಬ್ ಫಾಲ್ಕೆ ಚಿತ್ರೋದ್ಯಮದ ಪ್ರಶಸ್ತಿಗೆ  ಭಾಜನರಾಗಿದ್ದಾರೆ.

ದೇಶಾದ್ಯಂತ ಕೋಟಿ ಕೋಟಿ ಕಲೆಕ್ಷನ್ ಮಾಡಿ ಹೊಸ ದಾಖಲೆಯನ್ನೇ ಬರೆದಿರುವ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ `ಕಾಂತಾರ’ (Kantara Film) ಸಿನಿಮಾ ಸಕ್ಸಸ್ ಕಂಡಿದೆ.

ಅಂತಾರಾಷ್ಟ್ರೀಯ ಚಲನಚಿತ್ರ ಪ್ರಕಟಿಸಿದ ದಾದಾ ಸಾಹೇಬ್ ಫಾಲ್ಕೆ(Dadasaheb Phalke Award) ಪ್ರಶಸ್ತಿಯನ್ನು ಫೆ.20ರಂದು ಸ್ವೀಕರಿಸಲಿದ್ದಾರೆ.

ಮುಂಬೈನ(Mumbai) ತಾಜ್ ಲ್ಯಾಂಡ್ ಎಂಡ್ ಹೋಟೆಲ್‌ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.  

ಇತ್ತೀಚೆಗೆ ನಟಿ ಊರ್ವಶಿ ರೌಟೇಲಾ ಅವರು ರಿಷಬ್‌ ಶೆಟ್ಟಿ ಅವರೊಡನೆ ತೆಗೆಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ(Social Media) ಭಾರಿ ವೈರಲ್‌ ಆಗಿತ್ತು,ಕಾಂತಾರ ೨ ಭಾಗದ ಚಿತ್ರಕ್ಕೆ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಗಳು ತೀವ್ರವಾದ ಬೆನ್ನಲ್ಲೇ ಇದೀಗ ಮೂಲಗಳು ಇದು ಸುಳ್ಳು ವದಂತಿ ಎಂದು ದೃಢಪಡಿಸಿದೆ.

Exit mobile version