ಅಪ್ಪನ ಹೆಣ ಬೇಡ, ಆತ ದುಡಿದ ಹಣ ಬೇಕು: ಮೈಸೂರಿನಲ್ಲಿ ಕೊರೊನಾಗಿಂತಲೂ ಕ್ರೂರಿ ಪುತ್ರ

ಮೈಸೂರು, ಮೇ. 24: ಮೈಸೂರಿನ ಹೆಬ್ಬಾಳ ಸಮೀಪದ ಸೂರ್ಯ ಬೇಕರಿ ಬಳಿ ನಿವಾಸಿ ಕೊರೊನಾಗೆ ಬಲಿಯಾಗಿದ್ದು, ಈ ಬಗ್ಗೆ ಸ್ಥಳೀಯ ನಗರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್, ಮೃತ ವ್ಯಕ್ತಿಯ ಮಗನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

ಆದರೆ ಕೊರೊನಾ‌ ಸೋಂಕಿಗೆ ಬಲಿಯಾದ ತಂದೆಯ ಮೃತ ದೇಹ ಪಡೆಯಲು ನಿರಾಕರಿಸಿದ ಮಗ, ನೀವೇ ಅಂತ್ಯಕ್ರಿಯೆ ಮಾಡಿ ಮುಗಿಸಿ ಎಂದು ತಮಗೆ ಫೋನ್ ಮಾಡಿದ ಪಾಲಿಕೆ ಸದಸ್ಯರಿಗೆ ತಿಳಿಸಿದ ಮಗ, ತಂದೆ ಬಳಿಯಿರುವ 6ಲಕ್ಷ ಹಣ ತಂದು ಕೊಡಿ ಎಂದಿದ್ದಾನೆ. ಆ ಮೂಲಕ ಮೈಸೂರಿನಲ್ಲಿ ಮನಕಲಕುವ ಘಟನೆಗೆ ಸಾಕ್ಷಿಯಾಗಿದ್ದು, ಕೊರೊನಾ ಸಾವಿನ ನಡುವೆ ಮಾನವೀಯತೆ ಮರೆಯಾಗಿದೆ.

ತಂದೆಯ ಶವ ಬೇಡ, ಆದರೆ ಅವರು ದುಡಿದ ಹಣ ಬೇಕು ಎನ್ನುವ ಮೂಲಕ ಜನ್ಮನೀಡಿದ ತಂದೆಯ ಶವ ಪಡೆಯಲು ಹಿಂದೇಟು ಹಾಕಿದ್ದಾನೆ. ಹೀಗಾಗಿ ಜನ್ಮ ನೀಡಿದ ಮಗ, ಬಂಧು, ಬಳಗವಿದ್ದರೂ ಕೊರೊನಾ ಸೋಂಕಿತ ವ್ಯಕ್ತಿ ಅನಾಥ ಶವವಾಗಿ ಇಹಲೋಕ ತ್ಯಜಿಸಿದ್ದಾನೆ.

Exit mobile version