ಆರೋಗ್ಯವೇ ಭಾಗ್ಯ: ಆರೋಗ್ಯವಾಗಿರಲು ದಿನನಿತ್ಯ ಪಾಲಿಸಬೇಕಾದ ಕ್ರಮಗಳು ಯಾವುವು?

ನಾವು ಸಂಪೂರ್ಣ ಆರೋಗ್ಯವಾಗಿರಲು (Daily Routine to Stay Healthy) ದೇಹ ಮತ್ತು ಮನಸು ಸಂಪೂರ್ಣ ಸಮತೋಲನದಲ್ಲಿರಬೇಕು. ಇಂದಿನ ದಿನಗಳಲ್ಲಿ ಕಲುಷಿತ ವಾತಾವರಣ,

ಒತ್ತಡ ಮತ್ತು ಅನಾರೋಗ್ಯಕರ ಆಹಾರ ಕ್ರಮಗಳಿಂದ ಆರೋಗ್ಯದ ಮೇಲೆ ಒತ್ತಡ ಬೀಳುತ್ತಿದ್ದು, ದಿನನಿತ್ಯ ಪಾಲಿಸಬೇಕಾದ ಕೆಲವೊಂದು ಕ್ರಮಗಳು ಹೀಗಿವೆ ತಿಳಿಯೋಣ ಬನ್ನಿ

ವ್ಯಾಯಾಮ.
ವ್ಯಾಯಾಮವು (Exercise) ನಮ್ಮನ್ನು ದಿನನಿತ್ಯ ಚೈತನ್ಯದಿಂದ ಇರುವಂತೆ ಮಾಡುತ್ತದೆ. ಬೆಳಿಗಿನ ಉಪಹಾರಕಿಂತ ಮೊದಲು ವ್ಯಾಯಾಮ ಮಾಡಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು

ಮೆದುಳಿಗೆ ಉತ್ತಮ ರಕ್ತದ (Daily Routine to Stay Healthy) ಹರಿವನ್ನು ಹೆಚ್ಚಿಸುತ್ತದೆ.

ಯೋಗ
ನಾವು ಪ್ರತಿನಿತ್ಯ ಯೋಗ ಮಾಡುವುದರಿಂದ ದೇಹಕ್ಕೆ (Body) ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಅಲ್ಲದೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದ

ಬೆಳಿಗ್ಗಿನ ಉಪಹಾರ.
ದಿನದ ಆರಂಭ ಮಾಡಲು ನಾವು ಶಕ್ತಿಯುತ ಉಪಹಾರವನ್ನು ಸೇವಿಸಬೇಕು, ಹೊಟ್ಟೆಗೆ ಭಾರವಾಗುವ ಅಥವಾ ಎಣ್ಣೆ ಅಂಶವಿರುವ ಆಹಾರವನ್ನು ಸೇವಿಸಬಾರದು.

ಸೇವಿಸುವ ಆಹಾರದಲ್ಲ ಬಗ್ಗೆ ಗಮನ.
ನಾವು ದಿನನಿತ್ಯ ಸೇವಿಸುವ ಆಹಾರವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ.
ನಮ್ಮ ಆಹಾರದಲ್ಲಿ ತಾಜಾಹಣ್ಣುಗಳು, ತರಕಾರಿಗಳು, ಧಾನ್ಯಗಳು ಮುಖ್ಯವಾಗಿ ಇರಬೇಕು.
ಎಣ್ಣೆಯಲ್ಲಿ (Oil) ಕರಿದ ಪದಾರ್ಥಗಳು, ತಂಪು ಪಾನೀಯಗಳು, ಹೆಚ್ಚು ಸಕ್ಕರೆ ಉಪಯೋಗಿಸಿ ತಯಾರಿಸಿದ ಪದಾರ್ಥಗಳನ್ನು ಅತಿಯಾಗಿ ಸೇವಿಸದೆ ಇರುವುದು ಸೂಕ್ತ.

ಪ್ರೊಟೀನ್.
ಆಹಾರದಲ್ಲಿ ಹೆಚ್ಚಿನ ಪ್ರಮಾಣದಲಿ ಪ್ರೊಟೀನ್ (Protien) ಬಳಸುವುದರಿಂದ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ, ಸ್ನಾಯು ಖಂಡಗಳನ್ನು ಬಳಪಡಿಸುತ್ತದೆ.

ಮಾನಸಿಕ ಆರೋಗ್ಯದ ಕಡೆ ಗಮನ.
ದೇಹಕ್ಕೆ ದೈಹಿಕ ಅರೋಗ್ಯಕಿಂತ ಮಾನಸಿಕ ಅರೋಗ್ಯವು ಅತೀ ಮುಖ್ಯ. ಮನಸ್ಸನ್ನು ಶಾಂತಿ ತವಾಗಿಡಿಸಲು ಉಸಿರಾಟದ ವ್ಯಾಯಾಮ ಮತ್ತು ಯೋಗ ಮಾಡುವುದು ಮುಖ್ಯ.

ಸರಿಯಾದ ನಿದ್ರೆ.
ಪ್ರತಿದಿನ 8 ಗಂಟೆಗಳ ಕಾಲ ನಿದ್ದೆ ಮಾಡುವುದು ಉತ್ತಮ. ಸರಿಯಾಗಿ ನಿದ್ದೆ ಮಾಡದೇ ಇದ್ದರೆ ದೇಹದ ಕಾರ್ಯಚಾರಣೆ ಮೇಲೆ ಪರಿಣಾಮ ಬೀರುವುದು..

ಇದನ್ನು ಓದಿ: ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ಪಾರ್ಕಿಂಗ್ ಚಾರ್ಜ್ ನಲ್ಲಿ ಭಾರೀ ಹೆಚ್ಚಳ!

Exit mobile version