ದೌರ್ಜನ್ಯ ಪ್ರಕರಣ: ಪೊಲೀಸರು ಸ್ಪಂದಿಸದ ಕಾರಣ, ಎಸ್‌ಪಿ ಕಚೇರಿ ಮುಂದೆ ಬೆಂಕಿ ಹಚ್ಚಿಕೊಂಡ ದಲಿತ ಯುವಕ

Uttar Pradesh: ದಲಿತರ ದೌರ್ಜನ್ಯ ಪ್ರಕರಣದ (Dalit Atrocities Case) ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ ಪೊಲೀಸರ ವಿರುದ್ಧ ಅಸಮಾಧಾನಗೊಂಡ ದಲಿತ ಸಮುದಾಯದ ಯುವಕನೊಬ್ಬ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಹೊರಗೆ ಪೆಟ್ರೋಲ್ (Petrol) ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ನಡೆದಿದೆ.

ಚಂದ್ರಪಾಸಿ (Chandrapaasi) ಎಂಬ 28 ವರ್ಷದ ಯುವಕ ತೀವ್ರವಾಗಿ ಗಾಯಗೊಂಡಿದ್ದು, ಉತ್ತರ ಪ್ರದೇಶದ (Uttar Pradesh) ಉನ್ನಾವೊದಲ್ಲಿ ಬುಧವಾರ ಈ ಘಟನೆ ನಡೆದಿದೆ. ಜಿಲ್ಲಾ ಆಸ್ಪತ್ರೆಯ ಗಂಭೀರ ಸುಟ್ಟಗಾಯಗಳ ವಿಭಾಗದಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಆಸ್ಪತ್ರೆಯಲ್ಲಿರುವ ಆತನ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದ್ದು, ಚಂದ್ರ ಅವರಿಗೆ ಉತ್ತಮ ಚಿಕಿತ್ಸೆ ನೀಡುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ’ ಎಂದು ಉನ್ನಾವೊ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಖಿಲೇಶ್ ಸಿಂಗ್ (Akhilesh Singh) ಹೇಳಿದ್ದಾರೆ.

ಅಕ್ಟೋಬರ್ (October) 18 ರಂದು, ಚಂದ್ರ ಪಾಸಿ ಅವರು ತಮ್ಮ ನೆರೆಹೊರೆಯವರ ವಿರುದ್ಧ ಎಸ್‌ಸಿ/ಎಸ್‌ಟಿ (SC/ST) ದೌರ್ಜನ್ಯ ತಡೆ ಕಾಯ್ದೆ ಮತ್ತು ಹಿಂಸಾಚಾರ, ದಾಳಿಗಳು, ಜಾತಿ ನಿಂದನೆಗಳ ಬಳಕೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದು, ಅವರು ದೂರಿನಲ್ಲಿ ಮುನೀರ್, ಸಬೀರ್, ಅನೀಸ್, ಮುಮ್ತಾಜ್ ಮತ್ತು ಸಬಿಹಾ (Munir, Sabir, Anees, Mumtaz and Sabiha) ಎಂಬುವವರ ಮೇಲೆ ದೂರು ನೀಡಿದ್ದರು ಎನ್ನಲಾಗಿದೆ.

ಎಫ್ಐಆರ್‌ (FIR)ನಲ್ಲಿ ಸೇರಿಸುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಬೆಂಬಲಿಸದ ಕಾರಣ ಇಬ್ಬರು ವ್ಯಕ್ತಿಗಳನ್ನು ಪ್ರಕರಣದಿಂದ ಕೈಬಿಡಲಾಗಿದೆ ಎಂದು ಪೊಲೀಸ್ ಅಧಿಕಾರಿ ದೀಪಕ್ ಸಿಂಗ್ (Deepak Singh) ಹೇಳಿದ್ದಾರೆ. ಪೊಲೀಸರ ಈ ನಿರ್ಧಾರವು ದೂರು ದಾರ ಚಂದ್ರನನ್ನು ಕೆರಳಿಸಿತ್ತು. ನಂತರ, ಆತ ಕಂಬಳಿ ಸುತ್ತಿಕೊಂಡು ಎಸ್‌ಪಿ ಕಚೇರಿಗೆ ಬಂದಿದ್ದು, ಆತ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು, ಪೊಲೀಸರು ಸಾಕ್ಷ್ಯವನ್ನು ತಿರುಚುತ್ತಿದ್ದಾರೆ ಎಂದು ಕಿರುಚಿಕೊಂಡಿದ್ದಾನೆ.

ಘಟನೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಮ್ಯಾಜಿಸ್ಟ್ರೇಟ್ (Magistrate) ಅಪೂರ್ವ ದುಬೆ ಮತ್ತು ಇತರ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿ ದೂರುದಾರರನ್ನು ಭೇಟಿ ಮಾಡಿದರು. ಚಂದ್ರ ಬೆಂಕಿ ಹಚ್ಚಿಕೊಂಡ ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ರಕ್ಷಿಸಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಯುವಕನ ಸ್ಥಿತಿ ಚಿಂತಾಜನಕವಾಗಿರುವುದರಿಂದ ಉತ್ತಮ ಚಿಕಿತ್ಸೆಗಾಗಿ ಲಕ್ನೋದ ಕೆಜಿಎಂಸಿಗೆ ಕಳುಹಿಸಲಾಗಿದೆ. ಆತ್ಮಹತ್ಯೆಗೆ (Sucide) ಯತ್ನಿಸಿದ ಯುವಕನ ಕುಟುಂಬಸ್ಥರು ಉನ್ನಾವೋ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಭವ್ಯಶ್ರೀ ಆರ್ ಜೆ

Exit mobile version