ಡಿ ಬಾಸ್‌ʼ ಅಭಿಮಾನಿಗಳ ʻಕ್ರಾಂತಿʼ ಇದೀಗ OTT ಪ್ಲಾಟ್‌ಫಾರ್ಮ್‌ನಲ್ಲಿ! ಯಾವಾಗ? ಇಲ್ಲಿದೆ ಮಾಹಿತಿ

Bengaluru : ಕನ್ನಡ ಚಿತ್ರರಂಗದ ಚಾಲೆಂಜಿಂಗ್‌ ಸ್ಟಾರ್‌, ಬಾಕ್ಸ್‌ ಆಫೀಸ್‌ ಸುಲ್ತಾನ, ದಾಸ, ನಟ ದರ್ಶನ್‌ಅವರು ಅಭಿನಯದ ಕ್ರಾಂತಿ(Kranti) ಚಿತ್ರ ಇದೀಗ ಓಟಿಟಿ(OTT) ವೇದಿಕೆಯಲ್ಲಿ ಬಿಡುಗಡೆಯಾಗಲು (Darshan kranti on OTT) ಸಜ್ಜಾಗಿದೆ.

ಜನವರಿ26 ರಂದು ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್‌ ಪಡೆದ ಚಾಲೆಂಜಿಂಗ್‌ ಸ್ಟಾರ್‌ ನಟ

ದರ್ಶನ್‌(Darshan) ಮತ್ತು ನಟಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌(Rachitha ram) ಅಭಿನಯದ ಕ್ರಾಂತಿ ಚಿತ್ರ,

ದರ್ಶನ್‌ ಅವರ ಬೃಹತ್‌ ಅಭಿಮಾನಿಗಳ ಬಳಗ ಹಾಗೂ ಸಿನಿಪ್ರೇಕ್ಷಕರನ್ನು ಸಂತಸ ಪಡಿಸುವಲ್ಲಿ ಯಶಸ್ವಿಯಾಯಿತು.

ಅಭಿಮಾನಿಗಳ ಅಭಿಮಾನದಿಂದಲೇ ಚಿತ್ರಮಂದಿರಗಳನ್ನು ಪ್ರವೇಶಿಸಿದ ಕ್ರಾಂತಿ ಚಿತ್ರ, ಒಂದೊಳ್ಳೆ ಸಂದೇಶ ನೀಡುವ ಮೂಲಕ ಉತ್ತಮ ಚಿತ್ರವಾಗಿ ಹೊರಮೊಮ್ಮಿತು.

ಇತ್ತೀಚಿಗಷ್ಟೇ ನಟ ದರ್ಶನ್‌, ನಟಿ ರಚಿತಾ ರಾಮ್‌, ನಿರ್ಮಾಪಕಿ ಶೈಲಜಾ ನಾಗ್‌ ಸೇರಿದಂತೆ ಇಡೀ ಚಿತ್ರತಂಡವೇ ಸಕ್ಸಸ್‌ ಮೀಟ್‌ ಎಂಬ ಪಾಲ್ಗೊಂಡು,

ಕೇಕ್‌ ಕತ್ತರಿಸಿ ಸಂಭ್ರಮಿಸಿತು. ಸದ್ಯ ಚಿತ್ರಮಂದಿರದಲ್ಲಿ ಕ್ರಾಂತಿಯನ್ನು ಎಬ್ಬಿಸಿದ ನಟ ದರ್ಶನ್‌ ಅವರ ಕ್ರಾಂತಿ ಸಿನಿಮಾ (Darshan kranti on OTT) ಇದೀಗ ಓಟಿಟಿ ವೇದಿಕೆ ಬರಲು ಸಜ್ಜಾಗಿದೆ.

ಅಭಿಮಾನಿಗಳು ಆಶಿಸಿದಂತೆ ತಮ್ಮ ನೆಚ್ಚಿನ ಚಾಲೆಂಜಿಂಗ್‌ ಸ್ಟಾರ್‌ ಸಿನಿಮಾ ಓಟಿಟಿ ಬರುತ್ತಿರುವುದು ದರ್ಶನ್‌ ಅವರ ಅಭಿಮಾನಿಗಳಿಗೆ ಸಂತಸದ ಸಂಗತಿಯಾಗಿದೆ.

ಅಷ್ಟಕ್ಕೂ ಕ್ರಾಂತಿ ಚಿತ್ರ ಯಾವ ಓಟಿಟಿ ವೇದಿಕೆಯ ಪಾಲಾಗಿದೆ? ಯಾವ ದಿನಾಂಕದಂದು ಪ್ರಸಾರವಾಗಲಿದೆ ಎಂಬ ಸುದ್ದಿ ಇಲ್ಲಿದೆ ನೋಡಿ.

‘ಕ್ರಾಂತಿ’ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಾಣುವ ಮೂಲಕ ಯಶಸ್ವಿಯಾಯಿತು.

ಮಲಯಾಳಂ, ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಯಿತು.

ಶೈಲಜಾ ನಾಗ್‌ (Shailaja nag) ಅವರ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರಕ್ಕೆ ಸಂಗೀತ ಸಂಯೋಜಕ ವಿ ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ.

ದರ್ಶನ್‌ ಅವರ ಕ್ರಾಂತಿ ಅಮೆಜಾನ್ ಪ್ರೈಮ್‌ ಓಟಿಟಿ ವೇದಿಕೆಯಲ್ಲಿ ಇದೇ ಫೆಬ್ರವರಿ 23, 2023 ರಿಂದ 4 ಭಾಷೆಗಳಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಸ್ಟ್ರೀಮ್‌ ಆಗಲಿದೆ.

ಕ್ರಾಂತಿ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ನಟಿಸಿದ್ದು, ನಟ ದರ್ಶನ್, ರಚಿತಾ ರಾಮ್, ವಿ.ರವಿಚಂದ್ರನ್, ಸುಮಲತಾ, ತರುಣ್ ಅರೋರಾ, ಸಂಪತ್ ರಾಜ್, ಪಿ. ರವಿಶಂಕರ್, ಅಚ್ಯುತ್ ಕುಮಾರ್, ಬಿ. ಸುರೇಶ, ಸಾಧು ಕೋಕಿಲ, ಗಿರಿಜಾ ಲೋಕೇಶ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ

Exit mobile version