ಸುಮ್‌ ಸುಮ್ನೆ ನಿಮ್ಮುಂದೆ ಬಂದು ಕೂರಲು ನಮಗೇನು ನಾಯಿ ಕಚ್ಚಿದ್ದೀಯಾ? : ನಟ ದರ್ಶನ್‌

Bengaluru : ಕ್ರಾಂತಿ(Kranthi) ಚಿತ್ರದ ಬಿಡುಗಡೆಯ ಮೊದಲ ವಾರದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌(Challenging star Darshan) ಅವರು ಚಿತ್ರದ ಬಗ್ಗೆ ಮಾಧ್ಯಮದವರು ಕೇಳಿದ(Darshan press conference statement) ಪ್ರಶ್ನೆಗಳಿಗೆ ಈ ರೀತಿ ಉತ್ತರಿಸಿದ್ದಾರೆ.

ವೇದಿಕೆ ಮೇಲೆ ಉಪಸ್ಥಿತರಿದ್ದ ಎಲ್ಲಾ ಕಲಾವಿದರು, ತಂತ್ರಜ್ಞರಿಗೆ ನಮಸ್ಕರಿಸಿ ಮಾತನ್ನು ಪ್ರಾರಂಭಿಸಿದ ನಟ ದರ್ಶನ್‌ ಅವರು, ಕ್ರಾಂತಿ ಚಿತ್ರ ಬಿಡುಗಡೆಗೊಂಡು ಒಂದು ವಾರ ಕಳೆದಿದೆ.

ಮುಂಚೆ ನೀವು ಸಿನಿಮಾ ನೋಡಿರಲಿಲ್ಲ ಹಾಗಾಗಿ ಮಾತನಾಡಲು ಸಾಧ್ಯವಿರಲಿಲ್ಲ, ಆದ್ರೆ ಇದೀಗ ಕ್ರಾಂತಿ ಬಿಡುಗಡೆನೂ ಆಯ್ತು, ನೀವೆಲ್ಲಾ ನೋಡಿದ್ದೀರಿ ಅಲ್ವಾ,

ಈಗ ನೀವೇ ಮಾತಾಡಿ ನಾನೇನು ಮಾತನಾಡೋದಿಲ್ಲ. ಚಿತ್ರದ ಬಗ್ಗೆ ಏನಾದರೂ ಪ್ರಶ್ನೆಯಿದ್ರೆ ಖಂಡಿತ ನೀವು ಕೇಳಬಹುದು ಎಂದು ಮಾಧ್ಯಮ ಮಿತ್ರರಿಗೆ ಹೇಳಿದರು.

ಇದನ್ನೂ ಓದಿ: ಬಾಲ್ಯವಿವಾಹವಾದ ಪುರುಷರನ್ನು ಶೀಘ್ರ ಬಂಧಿಸುತ್ತೇವೆ : ಸಿಎಂ ಹಿಮಂತ ಬಿಸ್ವಾ ಶರ್ಮಾ

ನಿಮ್ಮ ಕ್ರಾಂತಿ ಸಿನಿಮಾ ನಿಜವಾಗಲೂ ಒಂದು ಕ್ರಾಂತಿಯನ್ನು ಸೃಷ್ಟಿಸಿದೆ ಇದಕ್ಕೆ ನಿಮಗೆ ಅಭಿನಂದನೆಗಳು ಎಂದು ಹೇಳಿದರು. ಇನ್ನು ಮತ್ತೊಬ್ಬರ ಪ್ರಶ್ನೆಗೆ ಉತ್ತರಿಸಿದ ದರ್ಶನ್‌ ಅವರು,

ಈ ಚಿತ್ರದ ಯಶಸ್ಸು ನನೊಬ್ಬನಿಂದ ಇದು ಸಾಧ್ಯವಿಲ್ಲ. ನನ್ನ ಪ್ರತಿಯೊಬ್ಬ ಸೆಲಬ್ರಿಟಿಗೆ ಧನ್ಯವಾದ ತಿಳಿಸುತ್ತೇನೆ.

ಕೆಲ ಯೂಟ್ಯೂಬರ್ಸ್‌ಗೆ(Youtubers) ಧನ್ಯವಾದ ತಿಳಿಸುತ್ತೇನೆ ಆದ್ರೆ ಎಲ್ಲರಿಗೂ ಅಲ್ಲ! ನೆಗಟಿವ್‌ ಮತ್ತು ಪಾಸಿಟಿವ್‌ ಎರಡು ಕೂಡ ಇರುತ್ತದೆ ಅದರ ಬಗ್ಗೆ ನಾನು ಮಾತನಾಡುವುದಿಲ್ಲ.

ಜೀವನದಲ್ಲಿ ಸ್ವಲ್ಪ ತೆಗೆಳುವವರು ಇರಬೇಕು. ಒಬ್ಬ ಮಹಾರಾಜನೂ ತನಗೆ ಬಹುಪರಾಕ್‌ ಹೇಳಲು ಹಣ ಕೊಟ್ಟು ಇಟ್ಟುಕೊಳ್ಳುತ್ತಿದ್ದನಂತೆ, ಇದು ಎಷ್ಟು ಜನರಿಗೆ ಗೊತ್ತಿದ್ಯೋ,

ಗೊತ್ತಿಲ್ವೋ ನನಗೆ ಗೊತ್ತಿಲ್ಲ. ಆದ್ರೆ ಇದನ್ನ ಹೇಳ್ತರೆ. ಅಂದ್ರೆ ಎಲ್ಲರನ್ನು ಮಹಾರಾಜರನ್ನೇ ಹೊಗಳಲು ಇರ್ತಾರೆ,

ಅದಕ್ಕೆ ತೆಗೆಳಲು ಒಂದಿಷ್ಟು ಜನ ಬೇಕಲಾ ಅದಕ್ಕಾಗಿ ಒಂದಿಷ್ಟು ಹಣ ಕೊಟ್ಟು ಭಯಿಸಿಕೊಳ್ಳುತ್ತಿದ್ರಂತೆ. ಒಂದು ಹಿಟ್‌, ಒಂದು ಫ್ಲಾಪ್‌ ಇರಲೇಬೇಕು ಮಾರ್ನಿಂಗ್‌ ಫಸ್ಟ್‌ ಶೋ ಅಲ್ಲಿ ಗೊತ್ತಾಗುತ್ತೆ.

ಒಂದು ಕುದುರೆ ಓಡುತ್ತೋ, ಓಡಲ್ವೋ ಅದನ್ನು ನಾವು ತಿಳಿಯುತ್ತೀವೆ.

ಇದನ್ನೂ ಓದಿ: ಮತದಾರರಿಗೆ ವಿವಿಧ ಉಡುಗೊರೆಗಳ ಆಮಿಷ : ಕಾನುನೂ ಕ್ರಮಕ್ಕೆ ಚುನಾವಣೆ ಆಯೋಗ ಸೂಚನೆ

ಒಂದು ಪಕ್ಷ ಅದು ಕುಂಟುತ್ತಿದ್ದರೇ ಅದರ ಕಾಲು ರೆಡಿ ಮಾಡಿ ಓಡಿಸಬಹುದು. ಇದಕ್ಕೆ ನಂದೆ ಉದಾಹರಣೆ ಕೊಡ್ತೀನಿ ನೋಡಿ, ನನ್ನ ೨೫ನೇ ಸಿನಿಮಾ ಭೂಪತಿ(Bhupathi) ಮಾರ್ನಿಂಗ್‌ ಶೋ ಟಕ್‌ ಅಂಥ ಎದ್ದೇಳ್ತು,

ಮಾಟ್ನಿ ಬಿಟ್ಟಾಕ್ಕಿ ಒಂದೂವರೆ ಶೋಗೆ ಟಪ್‌ ಎಂದು ಬಿದ್ದೋಯ್ತು! ಅವಾಗ ಏನು ಮಾಡ್ಲಿಲ್ಲ? ಸಕ್ಸ್‌ಸ್‌ ಮತ್ತು ಫ್ಲಾಪ್‌ ಎರಡು ಪರಿಗಣಿಸಬೇಕು. ಆದ್ರೆ ಸಕ್ಸಸ್‌ ಆದಾಗ ಅದನ್ನು ತೋರಿಸೋಣ.

ಸಕ್ಸಸ್‌ ಆದ್ರೆ ನಾವುಗಳು ಬಂದು ಇಲ್ಲಿ ಕೂರೋದು, ಇದನೆಲ್ಲಾ ಮಾಡೋದು. ಇಲ್ಲ ಅಂದ್ರೆ ಈ ಖರ್ಚು, ವೇದಿಕೆ, ಇಷ್ಟೆಲ್ಲಾ ಕಲಾವಿದರು ಯಾಕೆ ಬರಬೇಕು? ಸುಮ್‌ ಸುಮ್ನೆ ನಿಮ್ಮುಂದೆ ಬಂದು ಕೂರಲು ನಮಗೇನು ನಾಯಿ ಕಚ್ಚಿದ್ದೀಯಾ? ಎಂದು ದರ್ಶನ್‌ ಅವರು ಹೇಳಿದರು.

Exit mobile version