Bengaluru: ಇತ್ತೀಚಿಗೆ ಸೈಬರ್ ಕ್ರೈಮ್ (Cyber Crime) ಹೆಚ್ಚಾಗುತ್ತಿದ್ದು, ಸೈಬರ್ (dating app scam – Bangalore) ವಂಚಕರು ಪುರುಷರಿಗೆ ಮಹಿಳೆಯರ ಜೊತೆ ‘ಡೇಟಿಂಗ್’ನ
ಆಮಿಷವೊಡ್ಡಿ ಹಣ ಪೀಕಿ ಮೋಸಮಾಡುತ್ತಿದ್ದು, ಇದೇ ರೀತಿಯ ವಂಚಕರ ಜಾಲಕ್ಕೆ ಸಿಲುಕಿದ 35 ವರ್ಷದ ಖಾಸಗಿ ಕಂಪೆನಿ ಉದ್ಯೋಗಿಯೊಬ್ಬರು 1.74 ಲಕ್ಷ ರೂ. ಕಳೆದುಕೊಂಡು ದಕ್ಷಿಣ
ವಿಭಾಗದ ಸೈಬರ್ ಪೊಲೀಸ್ ಠಾಣೆಯ (Police Station) ಮೆಟ್ಟಿಲೇರಿದ್ದಾರೆ.ಕಳೆದ ಅಕ್ಟೋಬರ್‌ನಲ್ಲಿ ಈ ಉದ್ಯೋಗಿಯ ವಾಟ್ಸ್ಯಾಪ್‌ಗೆ (WhatsApp) ಅಪರಿಚಿತ ಯುವತಿ ರುಹಾನಿ
ಶರ್ಮಾ ಎಂಬ ಹೆಸರಿನಲ್ಲಿ ಸಂದೇಶ ಕಳುಹಿಸಿ ಪರಿಚಯ ಮಾಡಿಕೊಂಡು ಬಳಿಕ ರುಹಾನಿ, ಬಿಡುವಿನ ವೇಳೆಯಲ್ಲಿ ಹೈಪ್ರೊಫೈಲ್ ಮಹಿಳೆಯರ ಜೊತೆ ಡೇಟಿಂಗ್ ಮಾಡಿ ಹಣ ಸಂಪಾದಿಸುವ
ಹಾಗೂ ಹೋಟೆಲ್‌ನಲ್ಲಿ ಖಾಸಗಿ ಕ್ಷಣ ಕಳೆಯುವ ಆಹ್ವಾನ ನೀಡಿದ್ದಳು. ಹಣ ಸಂಪಾದನೆಯ ಜೊತೆಗೆ ಯುವತಿಯರೊಂದಿಗೆ ಖಾಸಗಿಯಾಗಿ ರಸಮಯ ಕ್ಷಣಗಳನ್ನು ಕಳೆಯುವ ನಿರೀಕ್ಷೆಯಲ್ಲಿ ವಂಚಕರ
ಜಾಲಕ್ಕೆ ಬಿದ್ದವರು, ಹಣ ಕಳೆದುಕೊಂಡು ಕಂಗಾಲಾಗುತ್ತಿದ್ದು, ಒಂದು ಮಹಿಳೆಯೊಂದಿಗೆ ಡೇಟಿಂಗ್ ಮಾಡಿದರೆ ಗಂಟೆಯ ಲೆಕ್ಕದಲ್ಲಿ5 ರಿಂದ 10 ಸಾವಿರ ರೂ. ಸಂಪಾದಿಸಬಹುದು ಎಂದು ರುಹಾನಿ,
ಸುರೇಶ್‌ಗೆ ಆಮಿಷವೊಡ್ಡಿದ್ದಳು. ಇನ್ನು ಹಣ ಸಂಪಾದನೆಗಾಗಿ ‘ಡೇಟಿಂಗ್’ಗೆ (Dating App) ಸಮ್ಮತಿಸುತ್ತಲೇ ರುಹಾನಿ ಮತ್ತೊಂದು ಟಾಸ್ಕ್ ಕೊಟ್ಟಿದ್ದಳು. ಡೇಟಿಂಗ್‌ಗೆ ಹೋಗುವ ಮುನ್ನ
ಆನ್‌ಲೈನ್‌ನಲ್ಲಿ 1 ಸಾವಿರ ರೂ. 3 ಪಾವತಿಸಿ ನೋಂದಣಿ ಮಾಡಿಕೊಂಡು ಸದಸ್ಯತ್ವ ಪಡೆಯಬೇಕು ಎಂದು ಆನ್‌ಲೈನ್ ಡೇಟಿಂಗ್ ವೆಬ್‌ಸೈಟ್‌ನ ವಿಳಾಸ ಕಳುಹಿಸಿದ್ದಳು. ಆಗ ಆ ಉದ್ಯೋಗಿ 1
ಸಾವಿರ ರೂ. ಡಿಜಿಟಲ್ ಪಾವತಿ ಮಾಡಿದ ಬಳಿಕ ರುಹಾನಿ, ಮಹಿಳೆಯೊಬ್ಬಳ ಮಾದಕ ಫೋಟೊ ಕಳುಹಿಸಿ (dating app scam – Bangalore) ಚನ್ನಸಂದ್ರದ ಹೋಟೆಲ್‌ವೊಂದಕ್ಕೆ ಬರುವಂತೆ ಸೂಚಿಸಿದ್ದಳು.
ಆ ಪ್ರಕಾರ ಅವರು ಹೋಟೆಲ್‌ಗೆ ತೆರಳಿ ಕಾಯುತ್ತಿದ್ದಾಗ ರುಹಾನಿ, ಮಹಿಳೆಯು ಹೋಟೆಲ್‌ಗೆ ಬರುವ ಬಗ್ಗೆ ಮಾಹಿತಿ ನೀಡುತ್ತಲೇ ಹಂತ ಹಂತವಾಗಿ 1.74 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಳು.
ಬಳಿಕ ಏಕಾಏಕಿ ಮೊಬೈಲ್ ಸ್ವಿಚ್ ಆಫ್ ( Mobile Switch off) ಮಾಡಿಕೊಂಡಿದ್ದಳು. ಇದರಿಂದ ಮೋಸ ಹೋಗಿರುವುದನ್ನು ತಿಳಿದ ಸುರೇಶ್ ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನು ಓದಿ: 36 ಗಂಟೆಯೊಳಗೆ ಡೀಪ್ಫೇಕ್ಗಳನ್ನು ತೆಗೆದುಹಾಕಿ: ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಸೂಚನೆ
- ಭವ್ಯಶ್ರೀ ಆರ್ ಜೆ