ಐಸ್‌ ತರುತ್ತೆ ಹೈ ರಿಸ್ಕ್‌, ಕಂಡ ಕಂಡಲ್ಲಿ ಐಸ್‌ ತಿಂದ್ರೆ ಬರುತ್ತೆ ಶ್ವಾಸಕೋಶದ ಸೋಂಕು !

Health : ಡೆಡ್ಲಿ “ಐಸ್‌”! ಐಸ್‌ (Ice cream) ತರುತ್ತೆ ಆರೋಗ್ಯಕ್ಕೆ ಹೈ ರಿಸ್ಕ್‌. ಕಂಡ ಕಂಡಲ್ಲಿ ಐಸ್‌ ಗೋಲಾ, ಐಸ್‌ ಕ್ಯಾಂಡಿ ತಿನ್ಬೇಡಿ! ಐಸ್‌ ಕ್ರೀಂನಿಂದ ಬರುತ್ತೆ ಶ್ವಾಸಕೋಶದ ಸೋಂಕು ! ಡೆಡ್ ಬಾಡಿಗೆ ಬಳಸುವ (deadly ice cream) ಐಸ್ ನಿಂದ ಐಸ್ ಕ್ಯಾಂಡಿ


ಸಿಕ್ಕಾಪಟ್ಟೆ ಸೆಖೆ, ತುಂಬಾ ಬಾಯಾರಿಕೆ ಆಗ್ತಿದೆ ಅಂತ ಹೇಳಿ ಕಂಡ ಕಂಡಲ್ಲಿ ಐಸ್ ಕ್ಯಾಂಡಿ, ಐಸ್ ಗೊಲಾ ತಿಂತಿದಿರಾ? ಹಾಗಾದ್ರೆ ಅದಕ್ಕೆ ಇವತ್ತೇ ಫುಲ್ ಸ್ಟಾಪ್ ಹಾಕಿ.

ಯಾಕಂದ್ರೆ ನೀವು ತಿನ್ನೋ ಈ ಐಸ್ ಕ್ಯಾಂಡಿ, ಐಸ್ ಗೋಲಾ ನಿಮ್ಮ ಪ್ರಾಣಕ್ಕೆ ಕುತ್ತು ತರಬಹುದು.

ಅದ್ರಲ್ಲೂ ಮಕ್ಕಳಿಗೆ ಐಸ್‌ಯುಕ್ತ ಆಹಾರ ತಿನ್ನಿಸೋ ಮುನ್ನ ನೂರು ಬಾರಿ ಯೋಚಿಸಿ. ಯಾಕಂದ್ರೆ ನೀವು ತಿನ್ನೋ ಐಸ್ ಡೆಡ್ಲಿಯಾಗಿರಬಹುದು, ಡರ್ಟಿ ಯಾಗಿರಬಹುದು.


ಕೊಳಕು ನೀರಲ್ಲಿ ಐಸ್‌ :

ಬೇಸಿಗೆ ಕಾಲದಲ್ಲಿ (summer time) ಜ್ಯೂಸ್‌, ಐಸಿ ಕ್ರೀಮ್‌, ಐಸ್‌ ಕ್ಯಾಂಡಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತೆ. ಇನ್ನು ಬೇಸಿಗೆ ಕಾಲದಲ್ಲಿ ಐಸ್‌ಗಂತು ಭಾರೀ ಬೇಡಿಕೆ.

ಆದ್ರೆ ಈ ಐಸನ್ನು ಶುದ್ಧ ನೀರಲ್ಲಿ, ಸ್ವಚ್ಫತೆ ಕಾಪಾಡಿ ತಯಾರಿಸಿದ್ರೆ ಓ.ಕೆ. ಆದ್ರೆ ಒಳ್ಳೆಯ ಕ್ವಾಲಿಟಿ ಐಸ್ ಬಹಳ ಕಾಸ್ಟ್ಲಿ.

ಇನ್ನು ಬೇಸಿಗೆ ಕಾಲದಲ್ಲಿ ತೀವ್ರ ನೀರಿನ ಕೊರತೆ ಕಾಡುತ್ತೆ. ಇಂಥಾ ಸಂದರ್ಭಗಳಲ್ಲಿ ಐಸನ್ನು ಹೆಚ್ಚಿನವರು ಶುದ್ಧ ನೀರು ಬಳಸಿ ಉತ್ಪಾದಿಸಲ್ಲ.

ಬದಲಾಗಿ ಕೊಳಕು ನೀರಿನಿಂದ ಅಥವಾ ಸ್ವಚ್ಛತೆ ಇಲ್ಲದ ಜಾಗದಲ್ಲಿ ಐಸ್‌ ತಯಾರಿಸ್ತಾರೆ.


ಕೊಳಕಾಗಿ ಐಸ್‌ ಸಂಗ್ರಹಣೆ :

ಹೆಚ್ಚಿನವರು ಐಸನ್ನು ಕೊಳಕಾಗಿ ಸಂಗ್ರಹಿಸ್ತಾರೆ. ಗೋಣಿ ಚೀಲಗಳಲ್ಲಿ ಕಟ್ಟಿ ಇಡೋದು.

ಕೊಳಕಾದ ಡಬ್ಬಗಳಲ್ಲಿ ಇಡೋದು. ಧೂಳು, ಇಲಿ, ಕೀಟಗಳು ಸೇರೋ ಜಾಗದಲ್ಲಿ ಇಡೋದ್ರಿಂದ ಐಸ್‌ ಕಲುಷಿತಗೊಳ್ಳುತ್ತೆ.

ಕೊಳಕು ನೀರಲ್ಲಿ ತಯಾರಿಸಿದ ಹಾಗೂ ಸ್ಚಚ್ಛತೆ ಇಲ್ಲದ ಜಾಗದಲ್ಲಿ ಸಂಗ್ರಹಿಸಿಟ್ಟಿರೋ (deadly ice cream) ಐಸ್‌ ಬಳಸಿದ್ರೆ ಅದು ಬಹಳ ಡೇಂಜರಸ್‌.

ಅದ್ರಲ್ಲಿ ಈ ಕೋಲಿ, ಕೋಲಿಫಾರ್ಮ್‌, ಲಿಸ್ಟೇರಿಯಾ ಮುಂತಾದ ಬ್ಯಾಕ್ಟಿರಿಯಾಗಳು ಸೇರಿಕೊಳ್ಳುತ್ತವೆ.

ಅವು ನಮ್ಮ ದೇಹ ಸೇರಿ ನಾನಾ ಕಾಯಿಲೆಗಳಿಗೆ ಕಾರಣವಾಗುತ್ತವೆ. ಮುಖ್ಯವಾಗಿ ಜ್ವರ ಕೆಮ್ಮಿನಿಂದ ಪ್ರಾರಂಭ

ಆಗೋ ಕಾಯಿಲೆ ಕೊನೆಗೆ ನ್ಯುಮೋನಿಯಾದಂಥಾ ಶ್ವಾಸಕೋಶದ ಸೋಂಕಿಗೆ ಕಾರಣವಾಗುತ್ತೆ.

ಮಕ್ಕಳಿಗೆ ಈ ಕಾಯಿಲೆಗಳು ಮಾರಣಾಂತಿಕವಾಗೋ ಆತಂಕವೂ ಇದೆ.

ಇದನ್ನೂ ಓದಿ : https://vijayatimes.com/lic-premium-collection-this-year/


ಡೆಡ್‌ ಬಾಡಿ ಇಡೋ ಐಸ್ : ತಿನ್ನೋ ಐಸ್‌ ಕ್ರೀಂಗೆ ಬಳಸ್ತಾರೆ
ಹೌದು ಮಂಜುಗಡ್ಡೆಯಂತೆ ಇರುವ ಐಸ್ ಕ್ರೀಮ್ ನನ್ನು ಡ್ರೈ ಐಸ್ ಎಂದು ಕರೆಯಲಾಗುತ್ತದೆ. ಇದನ್ನು ತಯಾರಿಸಲು ಯಾವುದೇ ವಿಧಾನವಿಲ್ಲ.

ಇದನ್ನು ಯಾವುದೇ ನೀರಿನಿಂದಲೂ ತಯಾರಿಸಬಹುದು. ಈ ಐಸ್ ನಲ್ಲಿ ಕಾರ್ಬನ್ ಡೈ ಆಕ್ಸೈಡ್ (Carbon dioxide) ಅಂಶ ಬಹಳ ಹೆಚ್ಚಾಗಿರುತ್ತದೆ.

ನಿಜ ಹೇಳಬೇಕೆಂದರೆ ಈ ಐಸ್ ನನ್ನು ಡೆಡ್ ಬಾಡಿಗಳನ್ನು ಸಂಗ್ರಹಿಸಲು ಉಪಯೋಗಿಸಲಾಗುತ್ತದೆ. ಅಂತಹ ಐಸ್ ನಿಂದ ನಮ್ಮ ಐಸ್ ಕ್ರೀಮ್ ತಯಾರಾಗುತ್ತದೆ.


ಅಷ್ಟೇ ಅಲ್ಲದೆ ಈ ಡ್ರೈ ಐಸ್ ನಲ್ಲಿ ಹೆಚ್ಚಿನ ಕೆಮಿಕಲ್ ಗಳನ್ನು ಬಳಸಲಾಗುತ್ತದೆ. ಹೀಗೆ ಬಳಸುವುದರಿಂದ ಯಾವುದೇ ವಸ್ತುವಾಗಲಿ ಊಟವಾಗಲಿ ಕೆಡುವುದಿಲ್ಲ.

ಇದರಿಂದ ಹೆಚ್ಚು ವ್ಯಾಪಾರಸ್ಥರು ಈ ಡ್ರೈ ಐಸ್ ನನ್ನು ಬಳಸ್ತಾರೆ. ಇನ್ನು ಈ ಐಸ್ ಕ್ರೀಮ್ ನಲ್ಲಿ ಬಳಸುವ ಕಾರ್ಬನ್ ಡೈಆಕ್ಸೈಡ್ ಐಸ್ ಕ್ರೀಮ್ ನನ್ನು ವಿಷ ಮಾಡುತ್ತದೆ.

ಈ ಡ್ರೈ ಐಸ್ ಸೇವಿಸುವುದರಿಂದ ಹಲ್ಲು ಉಳುಕ, ಬಾಯಲ್ಲಿ ಉಣ್ಣು ಮತ್ತು ಬಾಯಿಯ ಕ್ಯಾನ್ಸರ್ ಕೂಡ ಬರುತ್ತದೆ.


ಕೊಳಕಾಗಿ ತಯಾರಿಸ್ತಾರೆ ಐಸ್‌ಕ್ರೀಂ:

ಇನ್ನು ಬ್ರಾಂಡೆಡ್‌ ಅಲ್ಲದ ಗುಣಮಟ್ಟ ಇಲ್ಲದ ಐಸ್‌ ಕ್ರೀಂ, ಐಸ್‌ ಕ್ಯಾಂಡಿಗಳನ್ನು ತಿನ್ನಲು ಹೋಗಲೇ ಬೇಡಿ. ಯಾಕಂದ್ರೆ ಹೆಚ್ಚಿನ ಐಸ್‌ಕ್ರೀಮ್‌ ಫ್ಯಾಕ್ಟರಿ ಅತ್ಯಂತ ಕೊಳಕಾಗಿ ಇರುತ್ತೆ.

ಅಲ್ಲಿ ನಕಲಿ ಹಾಲು ತಯಾರಿಸಿ, ಕೃತಕ ಬಣ್ಣ, ರಾಸಾಯನಿಕ ವಸ್ತುಗಳನ್ನು ಹಾಕಿ ಐಸ್‌ ಕ್ರೀಂ ತಯಾರಿಸ್ತಾರೆ. ಇದಂತು ಭಾರೀ ಡೇಂಜರ್‌.

ಇದರಿಂದ ಹೆಪಟೈಟ್ ಎ ಅಂಡ್ ಇ (Hepatitis A and E) ಮುಂತಾದ ರೋಗಗಳು ಬಂದು ಲಿವರ್ ಡ್ಯಾಮೇಜ್,

ಲಿವರ್ ಫೇಲ್ಯೂರ್ (Liver failure) ಮತ್ತು ಜಾಂಡಿಸ್ ಕಾಯಿಲೆ (Jaundice disease) ಕೂಡ ಬರಬಹುದು. ಹಾಗಾಗಿ ಸ್ನೇಹಿತ್ರೆ ಎಚ್ಚರ !

ಸೆಖೆ ತಾಳಲಾಗುತ್ತಿಲ್ಲ ಅಂತ ಎಲ್ಲೆಂದ್ರಲ್ಲಿ ಐಸ್‌ ಹಾಕಿದ ಜ್ಯೂಸ್‌ ಕುಡಿಯೋದು ಐಸ್‌ ಕ್ರೀಂ, ಐಸ್‌ ಗೋಲಾ ತಿನ್ನೋಕೆ ಹೋಗ್ಬೇಡಿ.

Exit mobile version