ಮ್ಯಾಗಿ ಪ್ರಿಯರೇ ಎಚ್ಚರ ! ನೆಸ್ಲೆ ಕಂಪೆನಿಯ ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕರ

ನವದೆಹಲಿ, ಜೂ. 03: ಕೊರೊನಾ ವೈರಾಸ್‌ ಜನರಿಗೆ ಹೊಸ ಪಾಠ ಕಲಿಸಿದೆ. ಹಣ ಗಳಿಕೆಯೊಂದೆ ಅಲ್ಲ, ಆರೋಗ್ಯವೂ ದುಡಿಮೆಗಿಂತ ಅತಿ ಮುಖ್ಯ ಅನ್ನೋ ಪಾಠವನ್ನು ಸದ್ದಿಲ್ಲದೆ ಹೇಳಿಕೊಟ್ಟಿದೆ ಪ್ರಕೃತಿ.  ಈ ಬೆನ್ನೇಲೆ ಮ್ಯಾಗಿ ಸೇರಿದಂತೆ ಹಲವು ಆಹಾರ ಮತ್ತು ಪಾನೀಯ ಉತ್ಪನ್ನ ಮಾಡುವ ನೆಸ್ಲೆ ಕಂಪನಿಯ ಆಹಾರ ಉತ್ಪನಗಳು ಶೇಕಡ 70ರಷ್ಟು ಆರೋಗ್ಯ ಪೂರ್ಣವಾಗಿಲ್ಲ ಎಂಬ ಕಂಪನಿಯ ಆತಂಕರಿಕ ವರದಿ ಬಹಿರಂಗಗೊಂಡಿದೆ. 

ಮ್ಯಾಗಿ ಸೇರಿದಂತೆ ಅನೇಕ ಜನಪ್ರಿಯ ಸಿದ್ದ ಆಹಾರ ಹಾಗೂ ಪಾನೀಯಗಳನ್ನು ತಯಾರಿಸುವ ನೆಸ್ಲೆ ಕಂಪನಿಯ ಆಂತರಿಕ ವರದಿಯೊಂದು ಆ ಕಂಪನಿಯ ಆಹಾರ ಉತ್ಪನ್ನಗಳನ್ನು ಪ್ರೀತಿಸುವವರಿಗೆ ಶಾಕ್ ನೀಡಿದೆ. ಆಹಾರ ವಿಭಾಗದಲ್ಲಿ ಶೇ 70 ರಷ್ಟು ಉತ್ಪನ್ನಗಳು ಆರೋಗ್ಯಪೂರ್ಣ ಅಲ್ಲ. ಪಾನೀಯ ವಿಭಾಗದಲ್ಲಿ ಕಾಫಿ ಹೊರತುಪಡಿಸಿ ಶೇ 90 ರಷ್ಟು ಪಾನೀಯಗಳು ಆರೋಗ್ಯಪೂರ್ಣ ಅಲ್ಲ ಎಂಬುದು ಬಹಿರಂಗವಾಗಿದೆ.

ಆದರೆ, ಈ ಬಗ್ಗೆ ಸ್ಪಷ್ಟನೇ ನೀಡಿರುವ ಕಂಪನಿ ವಕ್ತಾರರು ‘ಇದೊಂದು ಆಂತರಿಕ ವರದಿಯಷ್ಟೇ. ಆದರೆ ನಮ್ಮ ಗುರಿ ಗ್ರಾಹಕರಿಗೆ ನಮ್ಮ ಉತ್ಪನ್ನಗಳ ಮೂಲಕ ಆರೋಗ್ಯಕರ ಹಾಗೂ ಪೋಷಕಾಂಶಗಳನ್ನು ಒಳಗೊಂಡ ತಿನಿಸುಗಳನ್ನು ನೀಡುವುದೇ ಆಗಿದೆ’ ಎಂದು ಹೇಳಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ನೆಸ್ಲೆ ತನ್ನ ಉತ್ಪನ್ನಗಳಲ್ಲಿ ಸಕ್ಕರೆ ಮತ್ತು ಸೋಡಿಯಂ ಪ್ರಮಾಣವನ್ನು ಕಡಿಮೆಮಾಡುತ್ತಿದೆ. ಹಿಂದಿನ ಏಳು ವರ್ಷಗಳಲ್ಲೇ ಶೇ 14 ರಿಂದ 15 ರಷ್ಟು ಕಡಿತಗೊಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ನಾವು ಮಕ್ಕಳಿಗೆ ಮತ್ತು ಕುಟುಂಬದವರಿಗೆ ಪೋಷಕಾಂಶಯುಕ್ತವಾದ ಬಹಳಷ್ಟು ತಿನಿಸುಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ನೆಸ್ಲೆ ಕಂಪನಿ ವಕ್ತಾರರು ತಿಳಿಸಿದ್ದಾರೆ.

Exit mobile version