ಬೆಂಗಳೂರು(ಜು. 27) ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಸಹೋದರ ಪರಮೇಶ್ ಸಾಲಗಾರರ ಕಾಟ ಸಹಿಸಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ .ಇವರಿಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅನೇಕರ ಬಳಿ ಸಾಲ ಮಾಡಿ ಅವರಿಗೆ ಸಾಲಗಾರರ ಕಾಟ ಹೆಚ್ಚಾಗಿತ್ತು ಎನ್ನಲಾಗಿದೆ.
ನಾಗರಬಾವಿಯ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ವಿಷ ಸೇವಿಸಿದ್ದು ತಡವಾಗಿ ಗೊತ್ತಾಗಿದೆ, ಸ್ಥಿತಿ ಗಂಭೀರವಾಗಿದೆ. ಸಾಲಗಾರರ ಕಾಟದಿಂದ ಈ ರೀತಿ ಮಾಡಿಕೊಂಡಿದ್ಧಾರೆ ಎನ್ನುವುದು ಆರಂಭಿಕ ಮಾಹಿತಿ. ಘಟನೆ ಬಗ್ಗೆ ಹೆಚ್ಚಿನ ವಿವರ ತಿಳಿದು ಬರಬೇಕಿದೆ.