ದೇಹದ ಕೊಬ್ಬು ಕರಗಿಸಲು ಇದನ್ನು ಸೇವಿಸಿ..

ನಿತ್ಯದ ಆಹಾರದಲ್ಲಿ ಏಲಕ್ಕಿಯ ಪರಿಮಳ ಇದ್ದೇ ಇರುತ್ತದೆ ಆದರೆ ತೂಕ ಇಳಿಸುವವರು ಏಲಕ್ಕಿಯನ್ನು ಬೇರೊಂದು ರೀತಿಯಲ್ಲಿ ಬಳಸಬಹುದು. ಒಂದು ಗ್ಲಾಸ್ ಕುದಿಸಿದ ಬಿಸಿ  ನೀರಿಗೆ ಒಂದು ಚಮಚ ಅಥವಾ ಅರ್ಧ ಚಮಚ  ಏಲಕ್ಕಿ ಪುಡಿ ಹಾಗೂ ಕಾಲು ಟೀ ಸ್ಪೂನು ಕಾಳು ಮೆಣಸಿನ ಪುಡಿಯನ್ನು ಹಾಕಿ ಆ ನೀರು ಸ್ವಲ್ಪ ತಣ್ಣಗಾಗಿ ಉಗುರು ಬಿಸಿ ಇರುವಾಗ  ದಿನ ನಿತ್ಯ  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ನಡೆದು ಮಲಬದ್ಧತೆ ನಿವಾರಣೆ ಆಗುವುದರ ಜತೆಗೆ ತೂಕವೂ ನಷ್ಟವಾಗುತ್ತದೆ.

ಹೊಟ್ಟೆಯಲ್ಲಿ ಸಂಗ್ರಹವಾಗುವಂತಹ ಕೆಟ್ಟ ಕೊಲೆಸ್ಟ್ರಾಲನ್ನು ಕರಗಿಸಿ ಗ್ಲುಕೋಸ್ ಪ್ರಮಾಣವನ್ನು ಸಮತೋಲನದಲ್ಲಿಡುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಸಣ್ಣ ಕರುಳು ದೊಡ್ಡ ಕರುಳನ್ನು ಆರೋಗ್ಯಯುತವಾಗಿ ಸಮತೋಲನದಲ್ಲಿಡುವಲ್ಲಿ ಸಹಾಯ ಮಾಡುತ್ತದೆ. ಇದು ದೇಹದ ತೂಕ ನಷ್ಟವಾಗಲು ಸಮರ್ಪಕವಾಗಿರುತ್ತದೆ. ಇದರಿಂದಾಗಿ ಏಲಕ್ಕಿಯನ್ನು ದಿನ ನಿತ್ಯವೂ ಬಳಸುವುದರಿಂದ ಆರೋಗ್ಯವಾಗಿರುವುದಲ್ಲದೆ ತೂಕ ನಷ್ಟವನ್ನೂ ಮಾಡಿಕೊಳ್ಳಬಹುದಾಗಿದೆ. ಹಾಲು ಅಥವಾ ಟೀ ಕಾಫಿ ಕುಡಿಯುವಾಗಲೂ ಏಲಕ್ಕಿ ಪುಡಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸೇರಿಸಿ ಕುಡಿಯಬಹುದು . ಇದರಿಂದ ದೇಹದ ತೂಕವನ್ನು ಸಮತೋಲನದಲ್ಲಿ ಇಡಬಹುದಾಗಿದೆ.

Exit mobile version