• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಬೆಲೆ‌ಏರಿಕೆ ವಿರುದ್ಧ ಜೆಡಿಎಸ್ ಪ್ರತಿಭಟನೆಗೆ ಅನುಮತಿ ನಿರಾಕರಣೆ: ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ; ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

Sharadhi by Sharadhi
in ಪ್ರಮುಖ ಸುದ್ದಿ, ರಾಜ್ಯ
ಬೆಲೆ‌ಏರಿಕೆ ವಿರುದ್ಧ ಜೆಡಿಎಸ್ ಪ್ರತಿಭಟನೆಗೆ ಅನುಮತಿ ನಿರಾಕರಣೆ: ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ; ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ
0
SHARES
0
VIEWS
Share on FacebookShare on Twitter

ಬೆಂಗಳೂರು,ಜೂ.28: ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಅನುಮತಿ ನೀಡದ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್ ವತಿಯಿಂದ ಇಂದು (ಜೂನ್‌ 28) ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ, ಕೋವಿಡ್‌ ನಿಯಮಾವಳಿ ಮುಂದಿಟ್ಟು ಸರ್ಕಾರ ಪ್ರತಿಭಟನೆಗೆ ಅನುಮತಿ ನಿರಾಕರಿಸಿದೆ. ಕೋವಿಡ್‌ ಸಂದರ್ಭದ ಸರ್ಕಾರದ ಈ ನಿರ್ಧಾರ ಒಪ್ಪುತ್ತೇವೆ. ಆದರೆ, ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿನ ಸಮಾರಂಭಗಳಿಗೆ ಇಲ್ಲದ ನಿಬಂಧನೆ ಜನತಾದಳದಕ್ಕೆ ಮಾತ್ರ ಏಕೆ? ಎಂದು ಪ್ರಶ್ನಿಸಿದ್ದಾರೆ.

ಸಮಾವೇಶ, ಹೋರಾಟಗಳಂಥ ಜನರನ್ನು ಒಟ್ಟುಗೂಡಿಸುವ ಕೆಲಸಗಳಿಂದ ಜೆಡಿಎಸ್‌ ಈ ಕೋವಿಡ್‌ ಕಾಲದಲ್ಲಿ ದೂರವೇ ಉಳಿದಿತ್ತು. ಜನರನ್ನು ರಕ್ಷಣೆ ಮಾಡುವುದು ನಮ್ಮ ನಿಲುವಾಗಿತ್ತು. ಅಲ್ಲದೇ ಈಗ ಲಾಕ್‌ಡೌನ್‌, ಕೋವಿಡ್‌ ನಿಯಮಗಳನ್ನು ಸರ್ಕಾರವೇ ಸಡಿಲಗೊಳಿಸಿದೆ. ಹೀಗಾಗಿಯೇ, ಬೆಲೆ ಏರಿಕೆ ಸಮಸ್ಯೆಯಿಂದ ಪರಿಹಾರ ಕೊಡಿಸಲು ಜೆಡಿಎಸ್‌ ಹೋರಾಟ ಹಮ್ಮಿಕೊಂಡಿತ್ತು.

ಜೊತೆಗೆ, ಕೋವಿಡ್‌ ನಿಯಮಕ್ಕೆ ಬದ್ಧವಾಗಿ ಪ್ರತಿಭಟನೆ ನಡೆಸಲು ಪಕ್ಷದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರಿಗೆ ತಿಳಿಸಿದ್ದೆ. ಸಭೆ ನಂತರ ಮಾಧ್ಯಮಗಳಿಗೂ ಇದನ್ನೇ ಹೇಳಿದ್ದೆ. ಅನುಮತಿ ಕೋರಿ ಸಲ್ಲಿಸಿದ್ದ ಪತ್ರದಲ್ಲೂ ಅದನ್ನೇ ಉಲ್ಲೇಖಿಸಲಾಗಿತ್ತು. ಆದರೂ, ಅನುಮತಿ ಸಿಕ್ಕಿಲ್ಲ. ಈ ಮೂಲಕ ಸರ್ಕಾರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೋವಿಡ್‌ ನಿಯಮಾವಳಿಗಳು ಕಠಿಣವಾಗಿದ್ದಾಗ, ಲಾಕ್‌ಡೌನ್‌ ಜಾರಿಯಲ್ಲಿದ್ದಾಗಲೂ ಬಿಜೆಪಿ, ಕಾಂಗ್ರೆಸ್‌ ಹಲವು ಸಭೆ ಸಮಾರಂಭಗಳನ್ನು ನಡೆಸಿವೆ. ತೈಲ ದರ ಏರಿಕೆ ವಿರೋಧಿಸಿ, ಪೆಟ್ರೋಲಿಯಂ ಉತ್ಪನ್ನಗಳನ್ನು GSTಗೆ ತರಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಲಾಕ್‌ಡೌನ್‌ ವೇಳೆ ಪ್ರತಿಭಟನೆ ನಡೆಸಿತ್ತು. ಆಗ ಕಾಂಗ್ರೆಸ್‌ಗಿದ್ದ ಅನುಮತಿ ಈಗ ನಮಗೇಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪೆಟ್ರೋಲಿಯಂ ಅನ್ನು GSTಗೆ ತಂದು ರಾಜ್ಯಗಳ ಆದಾಯವನ್ನು ಕೇಂದ್ರಕ್ಕೆ ತಿರುಗಿಸುವುದು ಬಿಜೆಪಿ ಕಾಂಗ್ರೆಸ್‌ ವಾದ. ಇದಕ್ಕೆ ಪೂರಕವಾದ ಕಾಂಗ್ರೆಸ್‌ ಪ್ರತಿಭಟನೆಗೆ ಅನುಮತಿ ನೀಡಲಾಯಿತು. ಪೆಟ್ರೋಲಿಯಂ ಅನ್ನು GSTಗೆ ತರಬಾರದೆಂಬ ನಿಲುವುಳ್ಳ ನಮ್ಮ ಹೋರಾಟವನ್ನು ತಡೆಯಲಾಗಿದೆ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕತೆ ವಿರೋಧಿಗಳೆಂಬುದು ಸಾಬೀತಾಗಿದೆ ಎಂದು ಸರಣಿ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಪೆಟ್ರೋಲಿಯಂ ಅನ್ನು GSTಗೆ ತಂದು ರಾಜ್ಯಗಳ ಆದಾಯವನ್ನು ಕೇಂದ್ರಕ್ಕೆ ತಿರುಗಿಸುವುದು ಬಿಜೆಪಿ ಕಾಂಗ್ರೆಸ್‌ ವಾದ. ಇದಕ್ಕೆ ಪೂರಕವಾದ ಕಾಂಗ್ರೆಸ್‌ ಪ್ರತಿಭಟನೆಗೆ ಅನುಮತಿ ನೀಡಲಾಯಿತು. ಪೆಟ್ರೋಲಿಯಂ ಅನ್ನು GSTಗೆ ತರಬಾರದೆಂಬ ನಿಲುವುಳ್ಳ ನಮ್ಮ ಹೋರಾಟವನ್ನು ತಡೆಯಲಾಗಿದೆ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕತೆ ವಿರೋಧಿಗಳೆಂಬುದು ಸಾಬೀತಾಗಿದೆ.
5/5

— Nikhil Kumar (@Nikhil_Kumar_k) June 27, 2021

Related News

ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ.. ವಿದ್ಯಾರ್ಥಿಗಳಿಗೆ 20 ರಿಂದ 35 ಸಾವಿರ ಬಹುಮಾನ
Vijaya Time

ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ.. ವಿದ್ಯಾರ್ಥಿಗಳಿಗೆ 20 ರಿಂದ 35 ಸಾವಿರ ಬಹುಮಾನ

June 8, 2023
ಸಂಸದೆ ಪ್ರಜ್ಞಾ ಠಾಕೂರ್‌ ಜೊತೆ ‘ಕೇರಳ ಸ್ಟೋರಿ’ ಸಿನೆಮಾ ನೋಡಿದ್ದ ಯುವತಿ ಮುಸ್ಲಿಂ ಯುವಕನ ಜೊತೆ ಪರಾರಿ
Vijaya Time

ಸಂಸದೆ ಪ್ರಜ್ಞಾ ಠಾಕೂರ್‌ ಜೊತೆ ‘ಕೇರಳ ಸ್ಟೋರಿ’ ಸಿನೆಮಾ ನೋಡಿದ್ದ ಯುವತಿ ಮುಸ್ಲಿಂ ಯುವಕನ ಜೊತೆ ಪರಾರಿ

June 8, 2023
dashan
ಮನರಂಜನೆ

ಅಭಿಷೇಕ್ ಅಂಬರೀಶ್-ಅವಿವಾ ರಿಸೆಪ್ಷನ್ ಗೆ ಯಾರ್ಯಾರು ಬಂದಿದ್ದರು ಗೊತ್ತಾ ?

June 8, 2023
ಕೊಲ್ಹಾಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ನಿಷೇಧಾಜ್ಞೆ ಜಾರಿ, ಬೆಳಗಾವಿಯಲ್ಲಿ ಹೈ ಅಲರ್ಟ್
Vijaya Time

ಕೊಲ್ಹಾಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ನಿಷೇಧಾಜ್ಞೆ ಜಾರಿ, ಬೆಳಗಾವಿಯಲ್ಲಿ ಹೈ ಅಲರ್ಟ್

June 8, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.