Train Horns: ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಲು ಬಹಳ ಸಹಾಯಕಾರಿಯಾಗಿರುವ ವ್ಯವಸ್ಥೆಯಲ್ಲಿ ಬಹುತೇಕ ಜನರು ರೈಲು ಪ್ರಯಾಣವನ್ನೇ ಹೆಚ್ಚು ಇಷ್ಟಪಡುತ್ತಾರೆ. ಅಷ್ಟೇ ಅಲ್ಲದೆ, ರೈಲಿನ ಹಾರ್ನ್ (Train Horn) ಕೂಡ ಸಾಕಷ್ಟು ಬಾರಿ ಕೇಳಿರುತ್ತೀರಿ.. ಆದರೆ ಈ ಹಾರ್ನ್ ಒಂದೇ ರೀತಿ ಇರುವುದಿಲ್ಲ ಮತ್ತು ಒಂದೊಂದು ಹಾರ್ನ್ ಕೂಡ ಒಂದೊಂದು ಅರ್ಥ ಇದೆ. ಹಾಗಾದರೆ ಅದು ಏನು ಅಂದು ತಿಳಿಯೋಣ..
1 ಶಾರ್ಟ್ ಹಾರ್ನ್ (Short Horns): ರೈಲು ನಿಲ್ದಾಣಕ್ಕೆ ಬಂದಿದೆ ಮತ್ತು ಅದನ್ನು ಸ್ವಚ್ಛಗೊಳಿಸುವ ಸಮಯ ಎಂದರ್ಥ,
2 ಶಾರ್ಟ್ ಹಾರ್ನ್: ರೈಲು ಈಗ ಚಲಿಸಲು ಸಿದ್ಧವಾಗಿದೆ.
3 ಶಾರ್ಟ್ ಹಾರ್ನ್ಸ್: ಇದರರ್ಥ ರೈಲಿನ ಲೋಕೋಪೈಲಟ್ ಇಂಜಿನ್ನ (Locopilot Engine) ನಿಯಂತ್ರಣವನ್ನು ಕಳೆದುಕೊಂಡಿದೆ ಮತ್ತು ಈಗ ಗಾರ್ಡ್ ವ್ಯಾಕ್ಯೂಮ್ ಬ್ರೇಕ್ನೊಂದಿಗೆ ರೈಲನ್ನು ನಿಲ್ಲಿಸಬೇಕು ಎಂಬ ಅರ್ಥವನ್ನು ಕೊಡುತ್ತದೆ.
4 ಶಾರ್ಟ್ ಹಾರ್ನ್ಸ್: ಈ ಹಾರ್ನ್ ಅರ್ಥ ರೈಲಿನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಈಗ ರೈಲು (Train) ಮುಂದೆ ಸಾಗುವುದಿಲ್ಲ.
6 ಶಾರ್ಟ್ ಹಾರ್ನ್ಸ್: ಲೋಕೊಪೈಲಟ್ ಯಾವುದೇ ಅಪಾಯವನ್ನು ಗ್ರಹಿಸಿದ ಸಂದರ್ಭದಲ್ಲಿ ಈ ಹಾರ್ನ್ ಮಾಡುತ್ತಾರೆ.
2 ಸಣ್ಣ ಮತ್ತು 1 ದೊಡ್ಡ ಹಾರ್ನ್: ಈ ರೀತಿಯ ಹಾರ್ನ್ ಯಾರಾದರೂ ರೈಲಿನ ಸರಪಳಿ ಎಳೆದಾಗ ಅಥವಾ ಸಿಬ್ಬಂದಿ ಒತ್ತಡ ಬ್ರೇಕ್ (Break) ಹಾಕಿದಾಗ ಮಾಡಲಾಗುತ್ತದೆ.
ಜಾಸ್ತಿ ಸಮಯ ಹಾರ್ನ್ ಮಾಡುತ್ತಲೇ ಇರುವುದು: ರೈಲು ನಿರಂತರವಾಗಿ ಹಾರ್ನ್ ಮಾಡುತ್ತಿದ್ದರೆ ಪ್ಲಾಟ್ಫಾರ್ಮ್ನಲ್ಲಿ (Platform) ನಿಲ್ಲುವುದಿಲ್ಲ ಎಂದರ್ಥ.
ಮಧ್ಯಂತರದಲ್ಲಿ ಎರಡು ಬಾರಿ ಹಾರ್ನ್ ಊದುವುದು: ರೈಲು ರೈಲ್ವೆ ಕ್ರಾಸಿಂಗ್ (Railway Crossing) ಸಮೀಪಿಸಿದಾಗ ರೈಲು ಎರಡು ಬಾರಿ ಹಾರ್ನ್ ಮಾಡುತ್ತದೆ.
ಎರಡು ಉದ್ದ ಮತ್ತು ಒಂದು ಸಣ್ಣ ಹಾರ್ನ್: ರೈಲು ತನ್ನ ಟ್ರ್ಯಾಕ್ (Track) ಅನ್ನು ಬದಲಾಯಿಸಿದಾಗ ಈ ರೀತಿಯ ಹಾರ್ನ್ ಮಾಡಲಾಗುತ್ತದೆ.
ಭವ್ಯಶ್ರೀ ಆರ್ ಜೆ