Politics : ಸಿದ್ದರಾಮಯ್ಯರ ರಾಜಕೀಯ ಅನುಭವ, ಹಿರಿತನ ಮತ್ತು ಯೋಗ್ಯತೆ ಈ ನಾಡಿಗೆ ತಿಳಿದಿದೆ : ದಿನೇಶ್‌ ಗುಂಡೂರಾವ್

Dinesh Gundurao

Karnataka : ಕೆಲವರಿಗೆ ದೊಡ್ಡವರನ್ನು ತೆಗಳಿ ದೊಡ್ಡವರೆನಿಸಿಕೊಳ್ಳುವ ಚಟವಿರುತ್ತದೆ. ಸಿ.ಟಿ.ರವಿಗೂ(CT Ravi) ಈ ಚಟವಿದೆ. ಸಿದ್ದರಾಮಯ್ಯರ (Siddaramaiah) ರಾಜಕೀಯ(Politics) ಅನುಭವ, ಹಿರಿತನ ಮತ್ತು ಯೋಗ್ಯತೆ ಈ ನಾಡಿಗೆ ತಿಳಿದಿದೆ.

ಅವರ ಬಗ್ಗೆ ಕೀಳಾಗಿ ಮಾತಾಡುವ ರವಿ ತಮ್ಮ ಯೋಗ್ಯತೆಯೇನು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ. ಪುಂಡು ಪೋಕರಿಯಂತೆ ಮಾತಾಡಿದರೆ ಗೌರವ ಉಳಿಯುವುದಿಲ್ಲ,

ಎಂದು ಕಾಂಗ್ರೆಸ್‌(Congress) ಶಾಸಕ ದಿನೇಶ್‌ ಗುಂಡೂರಾವ್‌(Dinesh Gundurao) ಅವರು ಬಿಜೆಪಿಯ(BJP) ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಅವರು, ಸಿ.ಟಿ.ರವಿಯವರಿಗೆ ‘ಲೂಟಿ ರವಿ’ ಎಂಬ ಅನ್ವರ್ಥನಾಮ ಇಟ್ಟಿದ್ದು, ಸಿದ್ದರಾಮಯ್ಯರಲ್ಲ. ಸ್ವತಃ ಅವರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೇ ಲೂಟಿ ರವಿ ಎನ್ನುತ್ತಾರೆ. ಇದನ್ನು ಸಿದ್ದರಾಮಯ್ಯ ಹೇಳಿದ್ದೇ ರವಿಯವರಿಗೆ ಚೇಳು ಕಡಿದಂತಾಗಿದೆ.

https://youtu.be/HBS8jHsUPW0

ಹಾಗಾಗಿ ಸಿದ್ದರಾಮಯ್ಯರ ವಿರುದ್ಧ ಕೀಳು ಪದಪ್ರಯೋಗ ಮಾಡಿ ರವಿ ತಮ್ಮ ಹೊಲಸು ನಾಲಗೆ ಪ್ರದರ್ಶಿಸಿದ್ದಾರೆ.

ಸಿದ್ದರಾಮಯ್ಯ ಅವರ ಬಗ್ಗೆ ಅತ್ಯಂತ ತುಚ್ಛವಾಗಿ ಮಾತಾಡಿರುವ ಸಿ.ಟಿ.ರವಿ ತಮ್ಮ ಸಂಸ್ಕಾರವೇನು ಎಂಬುದನ್ನು ತೋರಿಸಿಕೊಂಡಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು ತಾವು ಬಳಸುವ ಭಾಷೆಯ ಮೇಲೆ ಹಿಡಿತವಿರಬೇಕು.

ರವಿ ಸಾರ್ವಜನಿಕ ಜೀವನದಲ್ಲಿರುವವರು, ಜೊತೆಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ.

ಈ ಸ್ಥಾನದ ಘನತೆಗೆ ತಕ್ಕ ಮಾತಾಡಲಿ ಎಂದಿದ್ದಾರೆ. ಸದನದಲ್ಲಿ ಈ ಸರ್ಕಾರದ ಹಗರಣಗಳ ಬಗ್ಗೆ ನಾವು ಪ್ರಶ್ನೆ ಮಾಡುವ ವಿಚಾರ ಬಿಜೆಪಿಯವರಿಗೆ ಮೈ ಚಳಿ ಹುಟ್ಟಿಸಿದೆ.

ಹಾಗಾಗಿ ಅರ್ಕಾವತಿ ರಿ-ಡೂ ಪ್ರಕರಣದ ತನಿಖೆಯ ಬಗ್ಗೆ ಮಾತಾಡುತ್ತಿದ್ದಾರೆ. ಬುಟ್ಟಿಯೊಳಗಿನ ಹಾವು ಬಿಡ್ತೀವಿ ಎಂದು ಹೆದರಿಸುವ ಬದಲು ತನಿಖೆ ನಡೆಸಲಿ. ಸರ್ಕಾರ ಅವರದ್ದೇ ಅಲ್ಲವೇ? ಬ್ಲಾಕ್ಮೇಲ್ ಮಾಡಿದರೆ ಹೆದರುವವರು ಯಾರು? ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ.

https://vijayatimes.com/hindu-mythology-ramayana/


ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಮಳೆಯಿಂದಾಗಿ ಜೀವಹಾನಿ ಆಸ್ತಿ ಹಾನಿ ಸಂಭವಿಸಿದೆ. ಸಂಕಷ್ಟಕ್ಕೊಳಗಾದ ಜನರ ಜೀವದ ಬಗ್ಗೆ ಯೋಚಿಸದ ಸರ್ಕಾರ ಮಾನ ಮರ್ಯಾದೆ ಇಲ್ಲದೆ ಜನಸ್ಪಂದನಾ ಯಾತ್ರೆ ಮಾಡಿದೆ. ಜನರಿಗೆ ಈ ಸರ್ಕಾರ ಯಾವ ಬಗ್ಗೆ ಸ್ಪಂದಿಸಿದೆ ಎಂದು ಸದನದಲ್ಲಿ ಹೇಳಲಿ ಎಂದು ಸವಾಲು ಹಾಕಿದ್ದಾರೆ.

https://youtu.be/HBS8jHsUPW0 :

ಇಂದಿನಿಂದ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗುತ್ತಿದೆ. ಮೊನ್ನೆಯಷ್ಟೇ ದೊಡ್ಡಬಳ್ಳಾಪುರದಲ್ಲಿ ಖಾಲಿ ಕುರ್ಚಿಗಳ ಎದುರು

‘ಜನ ಸ್ಪಂದನ’ಯಾತ್ರೆ ಎಂಬ ಪ್ಲಾಫ್ ಶೋ ನಡೆಸಿರುವ BJPಯವರು ಇಂದು ಸದನದಲ್ಲಿ ಉತ್ತರಿಸಲೇಬೇಕಾದ ಅನೇಕ ಪ್ರಶ್ನೆಗಳಿವೆ. 40% ಕಮೀಷನ್, PSI ಹಗರಣ, ನೆರೆ ನಿರ್ವಹಣೆ ವೈಫಲ್ಯದ ಬಗ್ಗೆ ಸದನದಲ್ಲಿ ಉತ್ತರಿಸಲೇಬೇಕು ಎಂದಿದ್ದಾರೆ.

Exit mobile version