ಕೋಲಾರದ ಬಂಗಾರಪೇಟೆಯಲ್ಲಿ ವಿಜಯ ಟೈಮ್ಸ್ ಬಯಲು ಮಾಡಿತು ವಿಷ ಬೆಲ್ಲದ ರಹಸ್ಯ!

ಕೋಲಾರದ ಬಂಗಾರಪೇಟೆಯ ಆದಿನಾರಾಯಣ ಟ್ರೇಡರ್ಸ್ನಲ್ಲಿ ನಕಲಿ ಮಿಶ್ರಿತ ಬೆಲ್ಲ ತಯಾರಿಸುತ್ತಿದ್ದದ್ದನ್ನು ಪತ್ತೆಹಚ್ಚಿದ ವಿಜಯ ಟೈಮ್ಸ್ ತಂಡ ಬಯಲು ಮಾಡಿದೆ. ಈ ಕಂಪನಿಯನ್ನು ರೇಡ್ ಮಾಡಲು ಹೋದಾಗ ಎದುರಾದ ಸನ್ನಿವೇಶಗಳು ಹೇಗಿತ್ತು ಎಂಬುದನ್ನು ಮುಂದೆ ತಿಳಿಸಲಾಗಿದೆ ಓದಿ. ಇಲ್ಲಿನ ಬೆಲ್ಲವು ನಕಲಿ ಬೆಲ್ಲ ಎಂದು ಅಲ್ಲಿನ ಜನರಿಗೆ ತಿಳಿದೇ ಇರಲಿಲ್ಲ. ಮಾಹಿತಿದಾರರು ಅಲ್ಲಿ ನಕಲಿ ಬೆಲ್ಲ ತಯಾರಿಸುತ್ತಿದ್ದಾರೆ ಎಂದು ನಮ್ಮ ವಿಜಯ ಟೈಮ್ಸ್ ತಂಡಕ್ಕೆ ಮಾಹಿತಿ ನೀಡಿದರು. ಮಾಹಿತಿ ಸಿಕ್ಕ ಬೆನ್ನಲೇ ತೆರಳಿದ ನಮಗೆ ಕೋಲಾರದ ರವಿಕುಮಾರ್ ಮತ್ತು ಗ್ಯಾಂಗ್ 40 ವರ್ಷಗಳಿಂದಲೂ ಕೂಡ ಆರ್ಗ್ಯಾನಿಕ್ ಬೆಲ್ಲದ ಹೆಸರಲ್ಲಿ ನಕಲಿ, ವಿಷಪೂರಿತ ಬೆಲ್ಲವನ್ನು ಜನರಿಗೆ ತಿನ್ನಿಸುತ್ತಿದ್ದಾರೆ ಎಂಬುದು ತಿಳಿಯಿತು. ಇದನ್ನು ಬೇರೆ ರಾಜ್ಯಗಳಿಗೂ ಕೂಡ ರಫ್ತು ಮಾಡಲಾಗುತ್ತಿತ್ತು.

ಸಾಮಾನ್ಯವಾಗಿ ಬೆಲ್ಲವನ್ನು ಆರೋಗ್ಯಕರ ಸಂಕೇತ ಎಂದು ಹೇಳುತ್ತೇವೆ. ಅನೇಕ ಉಪಯೋಗಗಳು ಕೂಡಾ ಬೆಲ್ಲದಲ್ಲಿವೆ. ಆದರೆ ಈ ಜನರು ಆ ಪರಿಶುದ್ಧ ಬೆಲ್ಲಕ್ಕೆ ಕಳಂಕ ತರುತ್ತಿದ್ದಾರೆ. ಜನರಿಗೆ ವಿಷ ತಿನ್ನುಸುತ್ತಿದ್ದಾರೆ ಮತ್ತು ಇದನ್ನ ತಿಂದ್ರೆ ಆರೋಗ್ಯ ಹದಗೆಡವುದಂತು ಸತ್ಯ. ಹೌದು, ಇದೆಲ್ಲ ನಡೆದಿದ್ದು, ಕೋಲಾರದ ಬಂಗಾರಪೇಟೆಯಲ್ಲಿ. ಇಲ್ಲಿ ಹೇಗೆ ಬೆಲ್ಲ ತಯಾರಿಸುತ್ತಾರೆ ಅಂತ ಗೊತ್ತಾದ್ರೆ ನೀವೆಲ್ಲರೂ ಅಚ್ಚರಿಯಾಗುವುದಂತೂ ಸತ್ಯ.


೧.ಗೊಬ್ಬರ ಕಿಂತಲೂ ಕಡೆಯಾಗಿದೆ ಇಲ್ಲಿ ತಯಾರಾಗುವ ಬೆಲ್ಲ.
೨.ಆರ್ಗ್ಯಾನಿಕ್ ಅಂತಾರೆ ಆದರೆ ವಿಷಪೂರಿತ ಮಾಡಿದ್ದಾರೆ ಮಾಲೀಕರು.
೩. 40 ವರ್ಷದಿಂದ ಜನರಿಗೆ ತಿನ್ನಿಸುತ್ತಿದ್ದಾರೆ ವಿಷ ಬೆಲ್ಲ.
ಇಲ್ಲಿ ತಯಾರಿಸುತ್ತಾರೆ ಕಬ್ಬೆ ಇಲ್ಲದ ಬೆಲ್ಲ.
೪. ಈ ಬೆಲ್ಲ ಸೇವಿಸಿದರೆ ಎಲ್ಲರೂ ಜೀವನ್ಮರಣ ಹೋರಾಟಕ್ಕೆ ಒಳಗಾಗುವುದಂತೂ ಸತ್ಯ.
೫. ಕಾಲ್ ಅಲ್ಲೇ ಒದಿತಾರೆ, ಅದನ್ನೇ ಎತ್ತಿ ಮತ್ತೆ ಪಾಕಕ್ಕೆ ಹಾಕ್ತಾರೆ.
೬. ಅದು ಬೆಲ್ಲ ಅಲ್ಲ ಕಲ್ಲಿಗಿಂತ ಕಡೆಯಾಗಿದೆ.
೭. ಸುಳ್ಳಿನ ಸಾಮ್ರಾಜ್ಯವನ್ನೇ ನಲವತ್ತು ವರ್ಷದಿಂದ ಕಟ್ಟಿದ್ದಾರೆ. ಇಲ್ಲಿ ತಯಾರಿಸುವುದು ವೆಸ್ಟೇಜ್ ಬೆಲ್ಲದಿಂದ. ಹುಳಹುಪ್ಪಟೆಯಿಂದ ಕೂಡಿದ ಬೆಲ್ಲ.

ಹೌದು, ಇವೆಲ್ಲದರ ಬಗ್ಗೆ ನಮ್ಮ ವಿಜಯ ಟೈಮ್ಸ್ ರಹಸ್ಯ ಕಾರ್ಯಾಚರಣೆ ಮಾಡಿ, ಅಲ್ಲಿನ ಸತ್ಯಾನುಸತ್ಯತೆಯನ್ನು ತಿಳಿದುಕೊಂಡು ಸಂಪೂರ್ಣವಾಗಿ ಅಲ್ಲಿ ಕಲಬೆರಿಕೆ ನಡೆಯುತ್ತಿದೆಯೋ, ಇಲ್ಲವೋ ಎಂದು ತಿಳಿದ ನಂತರ ರೈಡಿಗೆ ತೆರಳಿತು. ರೈಡ್ಗೆ ಹೋದ ನಂತರ ಅಲ್ಲಿ ಬಯಲಾಯಿತು ಬೆಚ್ಚಿಬೀಳಿಸುವ ಅಂಶಗಳು. ನಮ್ಮ ತಂಡ ರಹಸ್ಯ ಕಾರ್ಯಾಚರಣೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಸತ್ಯಗಳು ಅಲ್ಲಿ ಬಯಲಾಯಿತು. ಜನರ ಜೀವನದೊಂದಿಗೆ ಇವರು ಯಾವ ರೀತಿ ಆಟ ಆಡುತ್ತಿದ್ದಾರೆ ಅನ್ನೋ ಕರಾಳ ಸತ್ಯ ಬಟಾ ಬಯಲಾಯಿತು. ನಾವು ನಮ್ಮ ತಂಡ ಅಲ್ಲಿಗೆ ಲಜ್ಜೆ ಇಟ್ವಿ ಮೊದಲಿಗೆ ಅಲ್ಲಿನ ಮಾಲೀಕರ ಬಳಿ ಹೋದಾಗ, ಮಾಲೀಕ ಬೆರಗಾಗಿ ಬಿಟ್ಟ, ಕಣ್ಣು ಕೆಂಪಾದವು. ಮಾತುಮಾತಿಗೆ ದಂಗ್ ಆಗುತ್ತಿದ್ದ, ಒಳಗೆ ಹೋಗುವುದು ಬೇಡ ಎಂದು ಗೋಗರೆದ. ಆದರೆ ಆತನ ಮಾತಿಗೆ ಮರುಳಾಗದೆ ಮುಂದೆ ಹೆಜ್ಜೆ ಇಟ್ವಿ ಅಲ್ಲಿಂದ ಬೆಲ್ಲದ ಕರಾಳಮುಖ ಬಯಲಾಯಿತು.

ಅಲ್ಲಿ ಕಂಡ ಸತ್ಯಗಳು ಭಯಾನಕವಾಗಿದ್ದವು. ಒಳಗೆ ಹೋದ ನಮ್ಮ ತಂಡಕ್ಕೆ ಆಶ್ಚರ್ಯವೇ ಕಾದಿತ್ತು. ಯಾಕಂದರೆ, ಆ ಕೋಣೆಯಲ್ಲಿ ಒಂದೊಂದು ಭಯಾನಕ ಸತ್ಯ ಹೊರಬಂದವು. ಅಲ್ಲಿ ಕಂಡ ಕೊಳಕು ಅಂಶಗಳು. ಹೊರಗಡೆ ಎಲ್ಲಿ ನೋಡಿದರೂ ಕೂಡ ಕೆಸರು ಗುಂಡಿಯಲ್ಲಿ ಬಿದ್ದ ರಾಶಿ ಗೋಣಿಚೀಲಗಳು.
೧. ಕೆಸರು ಗುಂಡಿಗಳು
೨.ಹಳೆಯ ಕಾಲದ ಕಪ್ಪು ಮನೆಗಳು, ಗೊಬ್ಬರದಲ್ಲಿ ಸೇರಿದ್ದ ಬೆಲ್ಲದ ತುಂಡುಗಳು.
೩. ಹುಳ ಬಿದ್ದ ಬೆಲ್ಲಗಳು.
೪. ಬೆಲ್ಲವು ನೀರು ನೀರಾಗಿ ಕೊಳಚೆ ಗುಂಡಿಯಾಗಿತ್ತು.
೫. ಡಾಂಬರ್ ಆಗಿದ್ದ ಬೆಲ್ಲ.
೬. ಬೆಲ್ಲದ ಬಾಸನೆ ಬಿಟ್ಟು ಎಲ್ಲ ವಾಸನೆ ಕೂಡ ಬರುತ್ತಿತ್ತು.
೭. ಗೋಣಿ ಚೀಲದಲ್ಲಿ ತುಂಬಿಸಿ ಇಟ್ಟಿದ್ದಾರೆ. ಮಣ್ಣಿನ ಹೆಂಟೆ ನಂತಿರುವ ಬೆಲ್ಲಗಳು.
೮. ಮರಳಿಗಿಂತಲೂ ಕಡೆಯಾಗಿದ್ದ ಸಕ್ಕರೆ ಪುಡಿಗಳು.
೯. ಒಲೆಗಳು ಪಾತಾಳಕ್ಕೆ ಹೋದಂತಿತ್ತು.

https://fb.watch/aTyETq3ySP/


ಒಳಗೆ ಬೆಲ್ಲವನ್ನು ಕಲಿಸುವ ಮಹಿಳೆಯರು ಅಮಾಯಕರಂತೆ ಇದ್ದರು. ಆದರೆ ಪಾಪ ಅವರಿಗೆ ಬೇರೆ ಕಡೆ ಕೆಲಸವಿಲ್ಲದ ಕಾರಣ ಅಲ್ಲಿ ಕೆಲಸ ಮಾಡುತ್ತಿದ್ದರು. ಎಷ್ಟು ಕಳಪೆಯಾಗಿದ್ದ ಬೆಲ್ಲವನ್ನು ತಯಾರಿಸುತ್ತಿದ್ದರು ಎಂದರೆ ನಾವು ನಿಂತ ಜಾಗದ ಬೆಲ್ಲದ ಪುಡಿಯನ್ನು ತೆಗೆದು ಬಿಸಿ ಪಾಕಕ್ಕೆ ಹಾಕುತ್ತಿದ್ದರು. ಪಾಕಶಾಲೆಗೆ ಹೋದ ಅನುಭವ ತುಂಬಾ ಕೆಟ್ಟದಾಗಿತ್ತು. ಅಷ್ಟು ಕೆಟ್ಟದಾಗಿ ಬೆಲ್ಲ ತಯಾರಿಸುತ್ತಿದ್ದರು. ಶುಚಿತ್ವ ಕೂಡ ಸ್ವಲ್ಪವೂ ಇರಲಿಲ್ಲ. ಬೆಲ್ಲದ ಉಂಡೆ ಮಾಡುವ ಕೋಣೆಯಂತು ಕತ್ತಲೆ ಗುಹೆ ಅಂತಿತ್ತು. ಅಲ್ಲಿಗೆ ಹೋಗಲು ಕೂಡ ಭಯ ಕಾಡುತ್ತಿತ್ತು. ಅಲ್ಲಿ ಮಹಿಳೆಯರು ಬಿಸಿ ಪಾಕವನ್ನು ತೆಗೆದುಕೊಂಡು ಹೋಗಿ ಉಂಡೆ ಮಾಡುತ್ತಿದ್ದರು. ಅದು ಕೂಡ ಶುಚಿತ್ವಾವಾಗಿರಲಿಲ್ಲ. ಕೆಲವು ಪೇಪರ್ ಸೀಟುಗಳ ಮೇಲೆ ಬೆಲ್ಲ ಹಾಕುತ್ತಿದ್ದರು. ರಾಶಿಗಳ ಮೇಲೆಯೇ ನಡೆದಾಡುತ್ತಿದ್ದರು. ಅದರ ಮೇಲೆಯೇ ಮತ್ತೆ ಬೆಲ್ಲ ಹಾಕುತ್ತಿದ್ದರು. ಪಾಕ ಮಾಡುವ ಒಲೆಯ ಮೂಲೆಯಲ್ಲಿ ಒಂದು ಡಬ್ಬ ಇತ್ತು. ಅಲ್ಲಿ ಕೂಡ ಗೋಣಿಚೀಲವನ್ನು ತುಂಬಿಸಿ ನೀರು ಹಾಕಿದ್ದರು ಅದು ಕೂಡ ಕೊಳೆತು ನಾರುತ್ತಿತ್ತು. ಬರಿ ಪಾಕಶಾಲೆ ಒಳಗೆ ಮಾತ್ರವಲ್ಲ, ಹೊರಗಡೆಯೂ ಕೂಡ ವೆಸ್ಟೇಜ್ ಬೆಲ್ಲದ ಗೋಣಿಚೀಲಗಳನ್ನು ತುಂಬಿದ್ದರು.

ಇದಿಷ್ಟು ಒಂದು ಗೋಡಾನ್ ಕತೆಯಾದರೆ, ಅಲ್ಲಿ ಇನ್ನೊಂದು ಅಚ್ಚರಿ ಕಾದಿತ್ತು ನಮಗೆ. ಒಂದೇ ಗೋಡಾನ್ ಅಲ್ಲ ಅಲ್ಲಿ ಇನ್ನೊಂದು ಗೋಡಾನ್ ಇತ್ತು ಇದಕ್ಕಿಂತಲೂ ಕೆಟ್ಟದಾಗಿತ್ತು. ಅಲ್ಲಿ ಮೂಟೆಗಳಲ್ಲಿ ಡೇಟ್ ಮುಗಿದಿರುವ ಎಲ್ಲಾ ವೇಸ್ಟೇಜ್ ಬೆಲ್ಲ ಸಕ್ಕರೆಗಳನ್ನು ಹಾಕಿದ್ದರು.
ಆದರೊಳಗೆ ಹುಳ ಸತ್ತು ಬಿದ್ದಿತ್ತು. ಚರಂಡಿ ಅಂತಾಗಿತ್ತು ಅಲ್ಲಿನ ನೆಲಗಳು. ಬೆಲ್ಲ ಸಂಪೂರ್ಣವಾಗಿ ನೀರು ನೀರಾಗಿತ್ತು. ಇಷ್ಟೇ ಅಲ್ಲ ಅಲ್ಲಿ ಆ ಮಾಲಿಕ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಕೊನೆಯವರೆಗೂ ತಪ್ಪನ್ನು ಒಪ್ಪಿಕೊಳ್ಳಲೇ ಇಲ್ಲ.

ಅಮಾಯಕನಂತೆ ನಟಿಸುವ ಈ ಮಾಲೀಕ ಅಮಾಯಕರ ಜೀವನದ ಜೊತೆ ಆಟ ಆಡ್ತಿದ್ದಾನೆ ಎಂಬುದು ಸ್ಪಷ್ಟವಾಯಿತು. ಇಲ್ಲಿ ನಡೆದ ಇನ್ನೊಂದು ಅಚ್ಚರಿಯ ಘಟನೆ ಏನೆಂದರೆ, ಅಲ್ಲಿ ಹಿರಿಯರಾಗಿ ಬುದ್ಧಿ ಹೇಳಬೇಕಾದ ಒಬ್ಬ ಹಿರಿಯ ವ್ಯಕ್ತಿ ನಮ್ಮ ತಂಡದ ಮೇಲೆ ರೋಪು ಹಾಕಿದರು. ಆ ಮಾಲೀಕನಿಗೆ ಇವರ ಬೆಂಬಲವು ಕೂಡ ಇತ್ತು. ಏನೇ ಆದರೂ ಹಿರಿಯ ವ್ಯಕ್ತಿಯಾಗಿ ತಪ್ಪಿಗೆ ಸಹಕಾರ ನೀಡಿದ್ದು ತಪ್ಪು. ನಕಲಿ ದಾಖಲೆಯನಿಟ್ಟುಕೊಂಡು ನಮ್ಮ ತಂಡದೊಂದಿಗೆ ವಾದ-ವಿವಾದಕ್ಕೆ ಇಳಿದುಬಿಟ್ಟರು. ಅಲ್ಲಿದ್ದ ಇನ್ನೊಂದು ಗೋಡಾನ್ಗೆ ಹೋಗಿ ಅಲ್ಲಿನ ಬಂಡವಾಳ ಬಿಚ್ಚಿಟ್ಟ ಮೇಲೆ ಅವರು ಕೂಡ ಬಾಯಿ ಮುಚ್ಚಿದರು. ಕೊನೆಗೂ ಕೂಡ ಈ ನಕಲಿ ತಂಡಕ್ಕೆ ನಮ್ಮ ವಿಜಯ ಟೈಮ್ ತಂಡ ತಕ್ಕ ಪಾಠವನ್ನು ಕಲಿಸಿ ಹಿಂದಿರುಗಿತು.

Exit mobile version