ಭಗವದ್ಗೀತೆಯನ್ನು ಇಡೀ ದೇಶಕ್ಕೆ ತಲುಪಿಸಿದ್ದು ಕಾಂಗ್ರೆಸ್ : ಡಿಕೆಶಿ!

dk shivkumar

ಗುಜರಾತ್(Gujarat) ರಾಜ್ಯದಲ್ಲಿ 6 ರಿಂದ 12 ತರಗತಿಯ(Class) ಮಕ್ಕಳಿಗೆ ಶಾಲಾ(School) ಪಠ್ಯದಲ್ಲಿ ಭಗವದ್ಗೀತೆಯನ್ನು(Bhagavadgitha) ಅಳವಡಿಸಿದ ಬೆನ್ನಲ್ಲೇ, ರಾಜ್ಯದಲ್ಲಿಯೂ ಭಗವದ್ಗೀತೆಯ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ರಾಜ್ಯ ಶಿಕ್ಷಣ ಸಚಿವರು(Education Minister) ನಾವು ಈ ಶೈಕ್ಷಣಿಕ ವರ್ಷದಲ್ಲಿ ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸುವುದಿಲ್ಲ. ಆದರೆ ಮುಂದಿನ ವರ್ಷ ಅಳವಡಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಶಿಕ್ಷಣ ಸಚಿವರ ಈ ಹೇಳಿಕೆಯೇ, ಇದೀಗ ವಿವಾದಕ್ಕೆ ಕಾರಣವಾಗಿವೆ.

ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ನಾವು ಕೂಡಾ ಹಿಂದೂಗಳೇ. ಭಗವದ್ಗೀತೆಯ ಬಗ್ಗೆ ನಮಗೂ ಗೌರವವಿದೆ. ಆದರೆ ಬಿಜೆಪಿ ರಾಜಕೀಯ ಲಾಭಕ್ಕಾಗಿ ಈ ವಿವಾದವನ್ನು ಸೃಷ್ಟಿಸಿದೆ. ಹೀಗಾಗಿ ಇದನ್ನು ನಾವು ವಿರೋಧಿಸುತ್ತೇವೆ. ಇನ್ನು ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ದೇಶ ಸೇರಿದಂತೆ ಇಡೀ ವಿಶ್ವಕ್ಕೆ ತಲುಪಿಸಿದ್ದು, ನಮ್ಮ ನಾಯಕರಾದ ಮಾಜಿ ಪ್ರಧಾನಿ ರಾಜೀವ ಗಾಂಧಿ.

ದೂರದರ್ಶನದ ಮೂಲಕ ರಾಮಾಯಣ ಮತ್ತು ಮಾಹಾಭಾರತಗಳನ್ನು ಪ್ರಸಾರ ಮಾಡಿದರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಈ ಮಹಾಕಾವ್ಯಗಳನ್ನು ನೋಡುವಂತೆ ರಾಜೀವ ಗಾಂಧಿ ಮಾಡಿದ್ದರು. ಈ ಮಾಹಾಕಾವ್ಯಗಳು ಪ್ರಸಾರವಾಗುತ್ತಿದ್ದ ಕಾಲದಲ್ಲಿ ಬೆಳಿಗ್ಗೆ 10 ಗಂಟೆಗೆ ರಸ್ತೆಗಳೆಲ್ಲಾ ಖಾಲಿಯಾಗುತ್ತಿದ್ದವು. ಇನ್ನು ನಾನೂ ಕೂಡಾ ಹಿಂದೂ ಸಮಾಜದಲ್ಲಿ ಹುಟ್ಟಿದ್ದೇನೆ. ನಾನು ಕೂಡಾ ಭಗವದ್ಗೀತೆಯ 23 ಶ್ಲೋಕಗಳನ್ನು ಹೇಳುತ್ತೇನೆ ಎಂದು ಶ್ಲೋಕವನ್ನು ಪಠಣ ಮಾಡಿದರು.


ಇನ್ನು ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಕೆ ಮಾಡುವ ಕುರಿತು ಕೆಲ ಕಾಂಗ್ರೆಸ್ ನಾಯಕರಲ್ಲೇ ಭಿನ್ನಾಭಿಪ್ರಾಯವಿದೆ ಎನ್ನಲಾಗಿದೆ. ಸುಖಾಸುಮ್ಮನೆ ಹಿಂದೂ ಸಮಾಜದ ವಿರೋಧ ಕಟ್ಟಿಕೊಳ್ಳುವುದು ಬೇಡ ಎಂದು ಕೆಲ ಕಾಂಗ್ರೆಸ್ ನಾಯಕರು ಭಗವದ್ಗೀತೆಯ ವಿಚಾರದಲ್ಲಿ ಮೌನ ತಳೆದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಭಗವದ್ಗೀತೆಯನ್ನು ಅಳವಡಿಸಿದರೆ ತಪ್ಪೇನು ಇಲ್ಲ ಎಂದು ಹೇಳಿ ದ್ವಂದ್ವ ಮೂಡಿಸಿದ್ದಾರೆ.

ಸಿದ್ದರಾಮಯ್ಯ ನೇರವಾಗಿ ವಿರೋಧಿಸುವ ಗೋಜಿಗೆ ಹೋಗಿಲ್ಲ. ಇನ್ನು ಕೆಲ ನಾಯಕರು ಈ ವರ್ಷ ಬೇಡ ಎನ್ನುತ್ತಿದ್ದಾರೆ ಹೊರತು ಭಗವದ್ಗೀತೆ ಬೇಡವೇ ಬೇಡ ಎಂದು ಹೇಳುತ್ತಿಲ್ಲ. ಆದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸುವ ಬಗ್ಗೆ ಸರ್ಕಾರ ಈಗಾಗಲೇ ಸಿದ್ದತೆ ನಡೆಸುತ್ತಿದೆ ಎನ್ನಲಾಗಿದೆ.

Exit mobile version