ಚುನಾವಣಾ ತಯಾರಿಗೆ ಸಮಯ ನೀಡಬಾರದೆಂದು ಇ.ಡಿ ದಾಳಿ ನಡೆಸಲಾಗುತ್ತಿದೆ : ಡಿಕೆಶಿ

DKS

ಬಿಜೆಪಿ ಸರ್ಕಾರ(BJP Government) ತಮ್ಮ ವಿರುದ್ಧ ಧ್ವನಿ ಎತ್ತುವವರರ ವಿರುದ್ಧ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಐಟಿ, ಇಡಿ, ಸಿಬಿಐ ದುರ್ಬಳಕೆ ಮಾಡಿಕೊಂಡು ದಿನನಿತ್ಯ ಕೊಡಬಾರದ ಕಿರುಕುಳ ನೀಡುತ್ತಿದೆ. ಚುನಾವಣಾ(Election) ತಯಾರಿಯಲ್ಲಿ ತೊಡಗಿಸಿಕೊಳ್ಳಲು ಸಮಯ ನೀಡಬಾರದು ಎಂಬ ದುರುದ್ದೇಶ ಇದರ ಹಿಂದಿದೆ ಎಂದು ರಾಜ್ಯ ಕಾಂಗ್ರೆಸ್(State Congress) ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivkumar) ಆರೋಪಿಸಿದ್ದಾರೆ.

ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ(Maharashtra) ಕಾಂಗ್ರೆಸ್, ಎನ್‍ಸಿಪಿ(NCP) ಜೊತೆ ಸರ್ಕಾರ ಮಾಡುತ್ತೇವೆಂದು ಇದೇ ಬಂಡಾಯ ಶಾಸಕರು ಈ ಹಿಂದೆ ಹೇಳಿದ್ದರು. ಬಿಜೆಪಿ ನಮ್ಮ ರಾಜ್ಯದಲ್ಲಿ ‘ಆಪರೇಷನ್ ಕಮಲ’(Operation Kamala) ಮಾಡಿದ ರೀತಿಯಲ್ಲೇ ಮಹರಾಷ್ಟ್ರದಲ್ಲೂ ಮಾಡಿದೆ. ಕಾಲ ಬಂದಾಗ ಜನರು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ, ಎಲ್ಲದಕ್ಕೂ ಸೂಕ್ತ ಉತ್ತರ ಕೊಡುತ್ತಾರೆ ಎಂದರು.

ಇದೇ ವೇಳೆ ಅಗ್ನಿಪಥ್ ಯೋಜನೆ(Agnipath Yojana) ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ‘ಅಗ್ನಿಪತ್’ ಯೋಜನೆ ವಿರುದ್ಧ ದೇಶದಾದ್ಯಂತ ಯುವಕರು ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಯುವಕರನ್ನು ಬಿಜೆಪಿ ತಮ್ಮ ಪಕ್ಷದ ಕಚೇರಿಯ ಸೆಕ್ಯೂರಿಟಿ ಗಾರ್ಡ್ ಮಾಡಲು ಹೊರಟಿದೆ. ಕೂಡಲೇ ಅಗ್ನಿಪಥ್ ಯೋಜನೆಯನ್ನು ಹಿಂಪಡೆದು, ಈ ಹಿಂದೆ ಇದ್ದ ನೇಮಕಾತಿ ಮಾದರಿಯನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು,

ಬಿಜೆಪಿಯವರು ಮಾಡುತ್ತಿರುವ ಅನೈತಿಕ ‘ಆಪರೇಷನ್ ಕಮಲ’ ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು. ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ ಎನ್ನುವ ಬಿಜೆಪಿಯವರು ಈಗ ಮಾಡುತ್ತಿರುವುದೇನು? ಪಾಪದ ಹಣ, ಲೂಟಿ ಹೊಡೆದ ಹಣದಿಂದ ಆಪರೇಷನ್ ಕಮಲ ಮಾಡಿ ಬಿಜೆಪಿ ಸರ್ಕಾರ ರಚಿಸಲಾಗುತ್ತಿದೆ ಎಂದು ಟೀಕಿಸಿದರು.

Exit mobile version