ಮಂಗಳೂರು ಬಾಂಬ್ ಬ್ಲಾಸ್ಟ್ಗೂ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಲಿಂಕ್ ಕಾಣುತ್ತಿದೆ: ಡಿಸಿಎಂ ಡಿಕೆ ಶಿವಕುಮಾರ್

Bengaluru: ಕಳೆದ ವರ್ಷ ಮಂಗಳೂರಿನಲ್ಲಿ (Mangalore) ನಡೆದ ಕುಕ್ಕರ್ ಬಾಂಬ್ ಸ್ಪೋಟಕ್ಕೂ, ಬೆಂಗಳೂರಿನಲ್ಲಿ ಇದೀಗ ನಡೆದಿರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಲಿಂಕ್ ಕಾಣುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (D K Shivakumar) ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರು ಬ್ಲಾಸ್ಟ್ ಗೂ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಸ್ಫೋಟಕ್ಕೂ ಲಿಂಕ್ ಕಾಣುತ್ತಿದೆ. ಈ ಸ್ಪೋಟಕ್ಕೆ ಟೈಮರ್ ಬಳಸಲಾಗಿದೆ. ಸಾಕಷ್ಟು ಅತ್ಯಾಧುನಿಕ ವಸ್ತುಗಳನ್ನು ಬಳಸಲಾಗಿದೆ. ಇನ್ನು ಸ್ಫೋಟ ಸ್ಥಳಕ್ಕೆ ಗೃಹಸಚಿವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹಾಗೆಯೇ ಘಟನೆಯಲ್ಲಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿದೆ.

ಇದೊಂದು ಕಡಿಮೆ ತೀವ್ರತೆಯ ಸ್ಫೋಟವಾಗಿದ್ದು, ಅದೃಷ್ಟವಶಾತ್ ಹೆಚ್ಚಿನ ಅಪಾಯವಾಗಿಲ್ಲ. ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ. ಅಪರಾಧಿಗಳನ್ನು ಅವರು ಶೀಘ್ರದಲ್ಲೇ ಪತ್ತೆ ಹಚ್ಚಲಿದ್ದಾರೆ. ತನಿಖೆ ನಡೆಸಲು ಎಂಟು ತಂಡಗಳನ್ನು ರಚಿಸಿದ್ದೇವೆ. ಎಲ್ಲಾ ಆಯಾಮದಲ್ಲೂ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಸರ್ಕಾರವೇ ಖರ್ಚು ಭರಿಸಲಿದೆ :
ಸ್ಪೋಟದ ವೇಳೆ ಗಾಯಗೊಂಡಿರುವ ಎಲ್ಲಾ ಗಾಯಾಳುಗಳ ಖರ್ಚನ್ನು ಸರ್ಕಾರವೇ ಭರಿಸಲಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆ. ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. 3 ಜನ ಇದ್ದಾರೆ. ಅದರಲ್ಲಿ ಒಬ್ಬರಿಗೆ ಜಾಸ್ತಿ ಗಾಯಗಳಾಗಿವೆ. ಇವತ್ತು ಒಬ್ಬರು ಡಿಸ್ಚಾರ್ಜ್ (Discharge) ಆಗುತ್ತಾರೆ. ನಾಳೆ ಅಥವಾ ನಾಡಿದ್ದು ಉಳಿದವರು ಕೂಡ ಡಿಸ್ಚಾರ್ಜ್ ಆಗಬಹುದು. ಈ ಮೂವರಲ್ಲಿ ಒಬ್ಬರು ಅಲ್ಲಿಯ ಉದ್ಯೋಗಿಯಾಗಿದ್ದಾರೆ ಎಂದರು.

ಆರೋಪಿ ಚಹರೆ ಪತ್ತೆ:
ಸ್ಪೋಟ ನಡೆಸಿದ ಆರೋಪಿಯ ಚಹರೆ ಪತ್ತೆಯಾಗಿದೆ. ಮುಖಕ್ಕೆ ಮಾಸ್ಕ್ ಕಣ್ಣಿಗೆ ಕೂಲಿಂಗ್ ಗ್ಲಾಸ್, ತಲೆ ಮೇಲೆ ಹ್ಯಾಟ್ (Hat) ಹಾಕಿಕೊಳ್ಳುವ ಮೂಲಕ ಮೊದಲೇ ಪ್ಲಾನ್ ಮಾಡಿಕೊಂಡು ಬಂದಿದ್ದಾನೆ. ಆದರೆ ಆತನ ಚಹರೆ ಪತ್ತೆಯಾಗಿದೆ.

Exit mobile version