“ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲ ಮುಟ್ಟಿನೋಡಿಕೊಳ್ತಾರೆ” : ಡಿ.ಕೆ ಶಿವಕುಮಾರ್!

DK Shivkumar

ರಾಜ್ಯದಲ್ಲಿ ನಡೆದ ಪಿಎಸ್‍ಐ ನೇಮಕಾತಿ ಪರೀಕ್ಷೆ(PSI Exam Scam) ಅಕ್ರಮ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಸದ್ಯ ಈ ಕುರಿತು ಅಲೆದಾಡುತ್ತಿರುವ ಸುದ್ದಿಗಳು ಒಂದಲ್ಲ ಒಂದು ಮಹತ್ವದ ತಿರುವುಗಳನ್ನು ನೀಡುತ್ತಿದೆ.

ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‍ಪಿನ್ ದಿವ್ಯಾ ಹಾಗರಗಿ(Divya Hagaragi) ಅವರನ್ನು ಸಿಐಡಿ ಪೊಲೀಸರು ಶೋಧ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ಹಿಂದೆ ಸದ್ಯ ಯಾರೆಲ್ಲಾ ಅಡಗಿದ್ದಾರೆ? ಯಾವ ಪ್ರಭಾವಿ ರಾಜಕಾರಣಿಗಳ ಕೈಅಡಗಿದೆ ಎಂಬ ತನಿಖೆ ಚುರುಕಿನಿಂದ ಸಾಗುತ್ತಿದೆ. ಈ ನಡುವೆ ಕಾಂಗ್ರೆಸ್(Congress) ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್(DK Shivkumar) ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, `ಆ’ ಮಂತ್ರಿಗಳ ಹೆಸರು ಈ ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಪ್ರಮುಖವಾಗಿ ಕೇಳಿಬರುತ್ತಿದೆ.

ಇದರ ಜೊತೆಗೆ ಅವರ ಸಹೋದರನ ಪಾಲು ಇದೇ ಎಂಬ ಆರೋಪವೂ ತಿಳಿದುಬಂದಿದೆ. ಅವರ ತಮ್ಮನ ವಿರುದ್ಧ ತನಿಖೆ ನಡೆಸಲು ಬಂದ ಅಧಿಕಾರಿಗಳಿಗೆ ಕರೆ ಮಾಡಿ ತನಿಖೆ ನಿಲ್ಲಿಸುವಂತೆ ಹೇಳಿದ್ದಾರೆ! ರಾಜ್ಯದ ಮುಖ್ಯಮಂತ್ರಿಗಳಿಗೆ ಬದ್ದತೆ ಇದ್ರೆ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲ್ಲಿ ಎಂದು ಹೇಳಿದರು. ಈ ಕುರಿತು ಪ್ರತಿಕ್ರಿಯೇ ನೀಡಲು ಮುಂದಾದ ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್ ನಾರಾಯಣ್ ಅವರು, ನೋಡಿ ನನಗೂ ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ, ಜೊತೆಗೆ ಈ ಅಕ್ರಮಕ್ಕೆ ಯಾವುದೇ ರೀತಿಯಲ್ಲೂ ಶಿಫಾರಸ್ಸು ಮಾಡಿಲ್ಲ!

ಡಿಕೆ ಶಿವಕುಮಾರ್ ಅವರ ಬಳಿ ಈ ಬಗ್ಗೆ ಯಾವುದೇ ದಾಖಲಾತಿಗಳು ಇದ್ದರೇ ಪ್ರದರ್ಶಿಸಿ ಸಾಬೀತುಪಡಿಸಲಿ ಎಂದು ಹೇಳಿದರು. ಅಶ್ವಥ್ ನಾರಾಯಣ್ ಅವರು ಕೊಟ್ಟ ಉತ್ತರಕ್ಕೆ, ಪ್ರತ್ಯುತ್ತರ ನೀಡಿದ ಡಿಕೆಶಿ “ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲ ಮುಟ್ಟಿ ನೋಡಿಕೊಳ್ತಾರೆ” ಇದಕ್ಕೆ ನಾವೇನು ಹೇಳೊದು ಎಂದು ಮತ್ತೊಮ್ಮೆ ಟಾಂಗ್ ಕೊಡುವ ಮುಖೇನ ಅಶ್ವಥ್ ನಾರಾಯಣ್ ಅವರ ಕಾಲೆಳೆದಿದ್ದಾರೆ.

Exit mobile version