ಕೂದಲು ಉದುರಬಾರದೆಂದರೆ ಬಾಚುವಾಗ ಈ ತಪ್ಪುಗಳನ್ನು ಮಾಡಬೇಡಿ

ಉದ್ದ ಕೂದಲು ಹುಡುಗಿಯರ ಸೌಂದರ್ಯಕ್ಕೆ ಪ್ಲಸ್ ಪಾಯಿಂಟ್. ಹೆಚ್ಚಿನವರು ಉದ್ದ ಕೂದಲಿರಬೇಕು ಎಂದು ಆಸೆ ಪಡುತ್ತಾರೆ. ಆದರೆ ಆಧುನಿಕ ಜೀವನ ಶೈಲಿ, ಮಾಲಿನ್ಯದಿಂದಾಗಿ ಕೂದಲು ಉದುರುವುದು ಹೆಚ್ಚಾಗಿ ಕಂಡುಬರುತ್ತದೆ. ಇವುಗಳ ಜೊತೆಗೆ ನಾವು ಕೂದಲು ಬಾಚುವಾಗ ಮಾಡುವ ಕೆಲವೊಂದು ತಪ್ಪುಗಳು ಸಹ, ಕೂದಲು ಉದುರಲು ಕಾರಣವಾಗುವುದು. ಇದರಿಂದಾಗಿ ನಿಮ್ಮ ಕೂದಲು ದಪ್ಪ ಮತ್ತು ಉದ್ದವಾಗುವ ಬದಲು ವೇಗವಾಗಿ ಉದುರಲು ಪ್ರಾರಂಭಿಸುತ್ತದೆ. ಕೂದಲು ಬಾಚುವಾಗ ಅಂತಹ ಕೆಲವು ತಪ್ಪುಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಕೂದಲು ಬಾಚುವಾಗ ದೂರ ಮಾಡಬೇಕಾದ ತಪ್ಪುಗಳನ್ನು ಈ ಕೆಳಗೆ ನೀಡಲಾಗಿದೆ:

ಕೂದಲಿನ ಬೇರುಗಳಿಂದ ಬಾಚಬೇಡಿ:
ಕೂದಲಿನ ಬೇರುಗಳಿಂದ ನೀವು ಕೂದಲು ಬಾಚಲು ಪ್ರಾರಂಭಿಸಿದರೆ, ಇದು ಕೂದಲು ಉದುರುವಿಕೆಗೆ ದೊಡ್ಡ ಕಾರಣವಾಗುವುದು. ಹೀಗೆ ಮಾಡುವುದರಿಂದ ಕೂದಲಿನ ತುದಿಯಲ್ಲಿ ಗೋಜಲು (ಸಿಕ್ಕು) ಸಂಗ್ರಹವಾಗಲು ಪ್ರಾರಂಭವಾಗುವುದು. ಇದು ನೆತ್ತಿಯ ಮೇಲೆ ಒತ್ತಡವನ್ನು ಉಂಟುಮಾಡಿ, ಕೂದಲು ಸೀಳಾಗುವಿಕೆಗೆ ಕಾರಣವಾಗುವುದು. ಆದ್ದರಿಂದ ಕೂದಲಿನ ತುದಿಯನ್ನು ಮೊದಲು ಬಾಚಿಕೊಂಡು, ನಂತರ ಬುಡದ ಕಡೆಗೆ ಸಾಗಿ.

ಒದ್ದೆ ಕೂದಲನ್ನು ಬಾಚಬೇಡಿ:
ನೀವು ಒದ್ದೆಯಾದ ಕೂದಲನ್ನು ಬಾಚಿಕೊಳ್ಳುವ ಜನರಾಗಿದ್ದರೆ, ತಕ್ಷಣವೇ ಈ ಅಭ್ಯಾಸವನ್ನು ಬಿಡಿ. ಹೀಗೆ ಮಾಡುವುದರಿಂದ ಕೂದಲು ದುರ್ಬಲಗೊಳ್ಳುತ್ತದೆ. ಇದರಿಂದ ಕೂದಲು ಸೀಳಾಗುವ ಸಾಧ್ಯತೆ ಹೆಚ್ಚು. ಬಾಚುವ ಮೊದಲು, ಒದ್ದೆ ಕೂದಲನ್ನು ಗಾಳಿ ಅಥವಾ ಸೂರ್ಯನ ಬೆಳಕಿನಂತಹ ನೈಸರ್ಗಿಕ ರೀತಿಯಲ್ಲಿ ಚೆನ್ನಾಗಿ ಒಣಗಿಸಿ ಮತ್ತು ನಂತರ ಮಾತ್ರ ಅವುಗಳನ್ನು ಬಾಚಿಕೊಳ್ಳಿ.

ಬಾಚುವಾಗ ಅವಸರ ಬೇಡ:
ಕೂದಲು ಬಾಚುವಾಗ ಅವಸರ ಮಾಡಬೇಡಿ. ಬೇಗ ಬೇಗ ಬಾಚುವುದರಿಂದ ಕೂದಲು ಎಳೆಯಲು ಮತ್ತು ಬೇರುಗಳು ದುರ್ಬಲಗೊಳ್ಳಲು ಕಾರಣವಾಗಬಹುದು. ಕೂದಲಿನ ಬೇರುಗಳು ದುರ್ಬಲಗೊಳ್ಳುವುದರಿಂದ, ಕೂದಲು ಉದುರಲು ಪ್ರಾರಂಭಿಸುತ್ತದೆ. ಬಾಚುವಾಗ ನಿಧಾನವಾಗಿ ಬಾಚಿ. ಅಲ್ಲದೆ, ಪ್ಲಾಸ್ಟಿಕ್ ಬಾಚಣಿಗೆ ಬದಲಿಗೆ ಮರದ ಬಾಚಣಿಗೆಯನ್ನು ಬಳಸಿ. ಪ್ಲಾಸ್ಟಿಕ್ ಬಾಚಣಿಗೆ ಕೂದಲನ್ನು ಹಾನಿಗೊಳಿಸುತ್ತದೆ.

ಕೂದಲಿನ ಉತ್ಪನ್ನಗಳನ್ನು ಹಚ್ಚಿದ ನಂತರ ಬಾಚಬೇಡಿ:
ಹೇರ್ ಪ್ಯಾಕ್, ಕಂಡಿಷನರ್ ಮತ್ತು ಸೀರಮ್ಗಳಂತಹ ಕೂದಲ ರಕ್ಷಣೆಯ ಉತ್ಪನ್ನಗಳನ್ನು ಹಚ್ಚಿದ ನಂತರ ಕೆಲವರು ತಮ್ಮ ಕೂದಲನ್ನು ಬಾಚಲು ಪ್ರಾರಂಭಿಸುತ್ತಾರೆ. ಇದನ್ನು ಮಾಡುವುದರಿಂದ ಆ ಉತ್ಪನ್ನಗಳು ಕೂದಲಿಗೆ ಸಮವಾಗಿ ಹಂಚಲ್ಪಡುತ್ತವೆ ಎಂದು ಜನರು ಭಾವಿಸುತ್ತಾರೆ, ಆದರೆ ಹಾಗೆ ಮಾಡುವುದು ಸರಿಯಲ್ಲ. ವಾಸ್ತವವಾಗಿ, ಕೂದಲಿಗೆ ಈ ಉತ್ಪನ್ನಗಳನ್ನು ಹಚ್ಚಿದ ನಂತರ, ಕೂದಲು ತುಂಬಾ ಒದ್ದೆಯಾಗುತ್ತದೆ ಮತ್ತು ಒದ್ದೆಯಾದ ಕೂದಲನ್ನು ಬಾಚಿದಾಗ, ಅವು ಸಿಕ್ಕು ಮತ್ತು ತುಂಡಾಗಲು ಪ್ರಾರಂಭಿಸುತ್ತವೆ.

Exit mobile version